
ಪವನ್ ಒಡೆಯರ್ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರದಲ್ಲಿ ನಾಯಕ ನಟ ಪುನೀತ್ ರಾಜ್‌ಕುಮಾರ್ ಜತೆ ಮತ್ತೊಬ್ಬ ನಟಿ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ರಚಿತಾ ರಾಮ್ ನಾಯಕಿ ನಟಿಸುತ್ತಿರುವಾಗಲೇ ಎರಡನೇ ನಾಯಕಿ ಕೂಡ ಈ ಚಿತ್ರದಲ್ಲಿ ಎಂಟ್ರಿಯಾಗಲಿದ್ದಾರೆಂಬ ಗುಟ್ಟು ಪವನ್ ಒಡೆಯರ್ ಬಿಟ್ಟುಕೊಟ್ಟಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದ ಮತ್ತೊಂದು ಚಿತ್ರದ ಮತ್ತೊಂದು ಲುಕ್ ಬಿಡುಗಡೆಯಾಗಿದೆ. ‘ಹೌದು, ಚಿತ್ರದಲ್ಲಿ ಇಬ್ಬರು ನಾಯಕಿಯರು. ಈಗಾಗಲೇ ರಚಿತಾ ರಾಮ್ ಆಯ್ಕೆ ಆಗಿದ್ದಾರೆ. ಮತ್ತೊಬ್ಬರು ನಾಯಕಿ ಕೂಡ ಇದ್ದಾರೆ. ಅವರದ್ದು ಸಹ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ. ಹೀಗಾಗಿ ಹೆಸರು ಇರುವ ಒಳ್ಳೆಯ ನಟಿಯನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾಯುತ್ತಿದ್ದೇವೆ. ಸದ್ಯಕ್ಕೆ ಚಿತ್ರೀಕರಣ ಭರದಿಂದ ಸಾಗಿದೆ.
ಇನ್ನೆರಡು ದಿನದಲ್ಲಿ ಚಿತ್ರದ ಎರಡನೇ ನಾಯಕಿಯ ಆಯ್ಕೆ ಮಾಡಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.