ಸ್ಯಾಂಡಲ್’ವುಡ್’ಗೆ ಕಾಲಿಟ್ಟ ಈ ಪ್ರತಿಭೆಗೆ ಉಪ್ಪಿ ರೋಲ್ ಮಾಡೆಲ್

First Published May 31, 2018, 3:32 PM IST
Highlights

ಉಪೇಂದ್ರ ಅಣ್ಣನ ಮಗ ನಿರಂಜನ್ ನಟಿಸಿದ ಮೊದಲ ಚಿತ್ರ ತೆರೆಕಾಣುತ್ತಿದೆ. ಚಿಕ್ಕಪ್ಪನ ಕೃಪಾಕಟಾಕ್ಷ ಚಿಕ್ಕಮ್ಮನ ಜೊತೆ ಪಾತ್ರ ಮಾಡೋ ಅವಕಾಶ ಪಡೆದಿರುವ ನೀಳದೇಹಿ ನಿರಂಜನ್ ಬೆಳ್ಳಗೆ ಬೆಳ್ಳಗೆ ಇದ್ದಾರೆ. ಮುದ್ದಾಗಿ ಕಾಣುತ್ತಾರೆ. ಪಡ್ಡೆ ಹುಡುಗಿಯರ ಫೇವರಿಟ್ ಆಗುವ ಲಕ್ಷಣ ಹೊಂದಿದ್ದಾರೆ. 

ಉಪೇಂದ್ರ ಅಣ್ಣನ ಮಗ ನಿರಂಜನ್ ನಟಿಸಿದ ಮೊದಲ ಚಿತ್ರ ತೆರೆಕಾಣುತ್ತಿದೆ. ಚಿಕ್ಕಪ್ಪನ ಕೃಪಾಕಟಾಕ್ಷ ಚಿಕ್ಕಮ್ಮನ ಜೊತೆ ಪಾತ್ರ ಮಾಡೋ ಅವಕಾಶ ಪಡೆದಿರುವ ನೀಳದೇಹಿ ನಿರಂಜನ್ ಬೆಳ್ಳಗೆ ಬೆಳ್ಳಗೆ ಇದ್ದಾರೆ. ಮುದ್ದಾಗಿ ಕಾಣುತ್ತಾರೆ. ಪಡ್ಡೆ ಹುಡುಗಿಯರ ಫೇವರಿಟ್ ಆಗುವ ಲಕ್ಷಣ ಹೊಂದಿದ್ದಾರೆ. ಈ ಚಾಕಲೇಟ್ ಹೀರೋ ಕನ್ನಡ ಪ್ರಭ ಜೊತೆ ಮಾತನಾಡಿದ್ದಾರೆ.  

 ಸೆಕೆಂಡ್ ಹಾಫ್ ಚಿತ್ರದ ಫಸ್ಟ ಹಾಫ್ ಹೆಂಗಿತ್ತು?
ಮೊದಲ ಚಿತ್ರ. ಸಹಜವಾಗಿ ಸಿಕ್ಕಾಪಟ್ಟೆ ಸಂಭ್ರಮ ಮತ್ತು ಬೆರಗಿನಿಂದಲೇ ಕೂಡಿರುತ್ತದೆ. ನಿರ್ದೇಶಕ ಯೋಗಿ ದೇವಗಂಗೆ ಹೇಳಿದಂತೆ ಮಾಡಿದ್ದೇನೆ. ಒಂದು ಒಳ್ಳೆಯ ಪಾತ್ರ. ಅದಕ್ಕೆ ತಕ್ಕಂತೆ ನಟನೆ ತೆಗೆಸಿದ್ದಾರೆ. ಸಾಧ್ಯವಾದಷ್ಟು ಸಹಜವಾಗಿ ನಟಿಸಿದ್ದೇನೆ. ತೆರೆ ಮೇಲೆ ನನ್ನ ನಟನೆ ನೋಡಿ ಪ್ರೇಕ್ಷಕರು ರಿಜಲ್ಟ್ ಹೇಳಬೇಕು.

ನಟನೆ ಸುಲಭ ಅಂದ್ಕೊಂಡಿದ್ರೇನು?
ಡಿಗ್ರಿ ಮುಗಿದ ಮೇಲೆ ರಂಗಭೂಮಿಗೆ ಸೇರಿಕೊಂಡೆ. ಅಲ್ಲಿ ನಟನೆಗೆ ಬೇಕಾದ ತಯಾರಿ ಮಾಡಿಕೊಂಡೆ. ಅಭಿನಯ ಮಾಡುವುದು ತುಂಬಾ ಸುಲಭ ಅಂತ ಬಹುತೇಕರು ಅಂದುಕೊಂಡಿರುತ್ತಾರೆ. ಪಾತ್ರ ಮಾಡುವುದಕ್ಕೆ ಕ್ಯಾಮೆರಾ ಮುಂದೆ ನಿಲ್ಲುವ ಮೊದಲು ನಾನು ಕೂಡ ಅದೇ ಅಭಿಪ್ರಾಯದಲ್ಲಿದ್ದೆ. ಆದರೆ, ಮೇಕಪ್ ಹಾಕಿ ಕ್ಯಾಮೆರಾ ಮುಂದೆ ನಿಂತಾಗ ನಟನೆಯ  ಮಹತ್ವ ಗೊತ್ತಾಯಿತು. ಆದರೆ, ನಾನು ಈ ಚಿತ್ರದಲ್ಲಿ ಪಾತ್ರ ಮಾಡುವುದಕ್ಕೂ ಮೊದಲು ನನ್ನ ಚಿಕ್ಕಪ್ಪ ಉಪೇಂದ್ರ ಅವರ ಬಳಿ ಕೆಲಸ ಮಾಡಿದ್ದೆ. ಬೇರೆ ಬೇರೆ ಚಿತ್ರಗಳ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೆ. ಸಿನಿಮಾ ವಾತಾವರಣಕ್ಕೆ ಹೊಸಬನಾಗದಿದ್ದರಿಂದ ತೀರಾ ಕಷ್ಟವಾಗಲಿಲ್ಲ.

ನಟಿಸ್ತಾ ನಟಿಸ್ತಾ ಏನ್ ಕಲಿತ್ರಿ?
ಒಂದು ಕತೆಯನ್ನು ನಿರ್ದೇಶಕರು ಹೇಳಿದಂತೆ ಪಾತ್ರಗಳ ಮೂಲಕ ಹೇಗೆ ಅದನ್ನು ತೆರೆ ಮೂಡಿಸುತ್ತಾರೆ. ನಟನೆಯ ವಾತಾವರಣ ಹೇಗಿರುತ್ತದೆ? ಪಾತ್ರಕ್ಕೆ ಪೂರ್ವಭಾವಿ ತಯಾರಿ ಹೇಗಿರಬೇಕು? ನಿರ್ದೇಶಕ ಮತ್ತು ಪಾತ್ರಧಾರಿಗಳ ನಡುವೆ ಇರಬೇಕಾದ ವಿಶ್ವಾಸ. ಇವುಗಳನ್ನು ನಾನು ಸೂಕ್ಷ್ಮವಾಗಿ ನೋಡಿ ಕಲಿಯುವ ಪ್ರಯತ್ನ ಮಾಡಿರುವ. ಆ ಪ್ರಯತ್ನವೇ ಈ ಚಿತ್ರದಲ್ಲಿ ನಿರ್ದೇಶಕರ ನಿರೀಕ್ಷೆಗೆ ತಕ್ಕಂತೆ ಪಾತ್ರ ಮಾಡಿರುವೆ ಎನ್ನುವ ಭರವಸೆ ಇದೆ.
 

ಸೆಕೆಂಡ್ ಹಾಫ್ ಚಿತ್ರದಲ್ಲಿ ನೀವೇನು?
ನನ್ನ ಮತ್ತು ಸುರಭಿ ಅವರದ್ದು ಒಂದು ಜೋಡಿ. ಒಂದು ನೈಜ ಘಟನೆಯಲ್ಲಿ ನಮ್ಮದೊಂದು ಪ್ರೇಮ ಕತೆ ಸಾಗುತ್ತಿರುತ್ತದೆ. ಆ ಪ್ರೇಮ ಕತೆಯ ಹೀರೋ ನಾನೇ. ಕಾಲೇಜು ಹುಡುಗನ ಪಾತ್ರ.

ನಿಮ್ಮ, ಪ್ರಿಯಾಂಕ ಪಾತ್ರಕ್ಕೆ ನಂಟೇನಾದರೂ ಉಂಟಾ?
ಎರಡ್ಮೂರು ನೈಜ ಪ್ರಕರಣಗಳೇ ಈ ಚಿತ್ರದ ಕತೆ. ಅದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದು, ಆ ಘಟನೆಗಳಲ್ಲಿ ನನಗೂ ಸಂಬಂಧಪಟ್ಟ ಒಂದು ಘಟನೆ ಇದೆ. ಅದರ ಬೆನ್ನು ಹತ್ತಿ ಬರುವ ಪೊಲೀಸ್ ಪೇದೆಯೇ ಪ್ರಿಯಾಂಕ ಅವರು. ಜಗತ್ತನ್ನು ಮರೆತು ಪ್ರೀತಿಯಲ್ಲಿ ಮುಳಗಿದ ನಮ್ಮ ಹಿಂದೆ ಪ್ರಿಯಾಂಕ ಉಪೇಂದ್ರ ಅವರು ಪಯಣಿಸುತ್ತಾರೆ. ಹಾಗೆ ನನ್ನ ಮತ್ತು ಅವರ ಪಾತ್ರಕ್ಕೆ ತೆರೆ ಮೇಲೆ ನಂಟಿದೆ.

ಚಿಕ್ಕಪ್ಪ ಚಿಕ್ಕಮ್ಮ ಇಬ್ಬರೂ ನಟರೇ. ಅವರೇನಾದರೂ ಸಲಹೆ ಕೊಟ್ಟರೇ?
ನಟನೆಯಷ್ಟೆ ತಾಳ್ಮೆಯೂ ಮುಖ್ಯ ಅಂತ ಹೇಳಿಕೊಟ್ಟಿದ್ದಾರೆ. ನಾನು ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವನು. ಈಗ ಅವರೇ ನನ್ನ ಬೆನ್ನಿಗೆ ನಿಂತು ನಟನನ್ನಾಗಿ ಮಾಡುತ್ತಿದ್ದಾರೆ. ಇಂಥ ಅದೃಷ್ಟ ಬೇರೆಯವರಿಗೆ ಸಿಗಲ್ಲ. ನನ್ನ ಚಿಕ್ಕಪ್ಪ ಚಿತ್ರಕತೆ ಮಾಡುವಾಗ ಅವರ ಜತೆಯಲ್ಲೇ ಕೂರಿಸಿಕೊಳ್ಳುತ್ತಿದ್ದರು. ಆಗ ಸಿನಿಮಾದ ತಾಂತ್ರಿಕ ಕೆಲಸಗಳ ಬಗ್ಗೆ ಹೇಳುತ್ತಿದ್ದರು. 

click me!