ಪವನ್ ಕಲ್ಯಾಣ್`ಗೆ ಶಾಕ್ ನೀಡಿದ ನಯನತಾರಾ

Published : Nov 19, 2016, 10:13 AM ISTUpdated : Apr 11, 2018, 01:08 PM IST
ಪವನ್ ಕಲ್ಯಾಣ್`ಗೆ ಶಾಕ್ ನೀಡಿದ ನಯನತಾರಾ

ಸಾರಾಂಶ

ತಮಿಳಿನ ಅಜಿತ್ ನಟನೆಯ ‘ವೇದಾಳಂ’ ಸೂಪರ್‌ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತು. ಈ ಚಿತ್ರವನ್ನು ತೆಲುಗಿಗೆ ರಿಮೇಕ್ ಆಗುತ್ತಿದ್ದು, ಇದರಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ನಟಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ, ಈ ಚಿತ್ರಕ್ಕೆ ‘ದೇವುಡೇ ದಿಗಿ ವಚ್ಚಿನ’ ಎನ್ನುವ ಶೀರ್ಷಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕಾಗಿ ನಿರ್ಮಾಪಕರು ನಯನತಾರಾ ಅವರನ್ನು ಸಂಪರ್ಕಿಸಿದ್ದಾರೆ. ಸದ್ಯ ಸಕ್ಸಸ್‌ನ ಕುದುರೆಯಂತಿರುವ ನಯನಾ, ಯಾಕೋ ಪವನ್ ಕಲ್ಯಾಣ್ ಚಿತ್ರಕ್ಕೆ ನೋ ಎಂದಿದ್ದಾರೆ.

 

 

ಹೈದ್ರಾಬಾದ್(ನ.19: ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್‌ಗೆ ಇತ್ತೀಚೆಗೆ ಒಂದಾದ ಮೇಲೊಂದರಂತೆ ಶಾಕ್‌ಗಳು ಎದುರಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಅವರ ಹೊಸ ಚಿತ್ರದ ಪೋಸ್ಟರ್ ಬೇರೊಂದು ಚಿತ್ರದ ಪೋಸ್ಟರ್ ಅನ್ನು ನಕಲಿ ಮಾಡಿದ್ದಾರೆಂಬ ಸುದ್ದಿ ಹಬ್ಬಿತು. ಈ ನಡುವೆ ಆಗಾಗ್ಗೆ ರಾಮ್‌ಗೋಪಾಲ್ ವರ್ಮಾ ಬೇರೆ ಟ್ವಿಟರ್‌ನಲ್ಲಿ ಶಾಕ್ ಕೊಡುತ್ತಿರುತ್ತಾರೆ. ಇದರ ಹೊರತಾಗಿಯೂ ರಾಜಕೀಯ ಕ್ಷೇತ್ರದಲ್ಲೂ ಹಲವು ವಿರೋಧಗಳನ್ನು ಎದುರಿಸುತ್ತಿರುವ ಪವನ್‌ಗೆ ಲೇಟೆಸ್ಟ್ ಆಗಿ ನಯನತಾರಾ ಶಾಕ್ ಕೊಟ್ಟಿದ್ದಾರೆ. ಇಷ್ಟಕ್ಕೂ ಈ ಗಬ್ಬರ್‌ಸಿಂಗ್‌ಗೆ ನಯನ ಕೊಟ್ಟಿರುವ ಶಾಕ್ ಏನಂತೀರಾ?

ತಮಿಳಿನ ಅಜಿತ್ ನಟನೆಯ ‘ವೇದಾಳಂ’ ಸೂಪರ್‌ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತು. ಈ ಚಿತ್ರವನ್ನು ತೆಲುಗಿಗೆ ರಿಮೇಕ್ ಆಗುತ್ತಿದ್ದು, ಇದರಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ನಟಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ, ಈ ಚಿತ್ರಕ್ಕೆ ‘ದೇವುಡೇ ದಿಗಿ ವಚ್ಚಿನ’ ಎನ್ನುವ ಶೀರ್ಷಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕಾಗಿ ನಿರ್ಮಾಪಕರು ನಯನತಾರಾ ಅವರನ್ನು ಸಂಪರ್ಕಿಸಿದ್ದಾರೆ. ಸದ್ಯ ಸಕ್ಸಸ್‌ನ ಕುದುರೆಯಂತಿರುವ ನಯನಾ, ಯಾಕೋ ಪವನ್ ಕಲ್ಯಾಣ್ ಚಿತ್ರಕ್ಕೆ ನೋ ಎಂದಿದ್ದಾರೆ. ಪವನ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದರೆ ಸಾಕು ಎನ್ನುವವರು ಸಾಕಷ್ಟು ನಾಯಕಿಯರು ತೆಲುಗು, ತಮಿಳಿನಲ್ಲಿ ಸಿಗುತ್ತಾರೆ. ಇನ್ನೂ ನಾಯಕಿ ಪಾತ್ರ ಸಿಕ್ಕರೆ ಆ ಖುಷಿ ಹೇಗಿರುತ್ತದೆ? ಆದರೆ, ನಯನತಾರಾ ಮಾತ್ರ ‘ಪವನ್ ಕಲ್ಯಾಣ್ ಚಿತ್ರದಲ್ಲಿ ನಾನು ನಟಿಸೋದಿಲ್ಲ’ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರಂತೆ.

ಹಾಗೆ ನೋಡಿದರೆ ಯಾಕೋ ಇತ್ತೀಚೆಗೆ ನಯನತಾರಾ ತೆಲುಗು ಸಿನಿಮಾಗಳಿಗೆ ಸೈನ್ ಮಾಡುತ್ತಿಲ್ಲ. ವೆಂಕಟೇಶ್ ನಟನೆಯ ‘ಬಾಬು ಬಂಗಾರಂ’ ಚಿತ್ರದ ನಂತರ ಯಾವುದೇ ತೆಲುಗು ಚಿತ್ರವನ್ನೂ ನಯನಾ ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೆ ತೆಲುಗಿನಲ್ಲಿ ನಯನ ಮಾಡುವ ಸಿನಿಮಾಗಳ ಪ್ರಚಾರಕ್ಕೆ ಬರೋಲ್ಲ ಎನ್ನುವುದು ತೆಲುಗಿನಲ್ಲಿ ದೊಡ್ಡ ಸುದ್ದಿಯಾಯಿತು. ಇದು ಕೂಡ ತೆಲುಗು ಸಿನಿಮಾಗಳ ಮೇಲೆ ಸಿಟ್ಟಾಗಲಿಕ್ಕೆ ಕಾರಣವಂತೆ. ಹೀಗಾಗಿ ಯಾರ ಮೇಲಿನ ಕೋಪವನ್ನು ಗಬ್ಬರ್‌ಸಿಂಗ್ ಮೇಲೆ ನಯನ ತೋರಿಸಿರುವುದು ಸರಿಯೇ? ಹಾಗಾದರೆ ಈ ‘ವೇದಾಳಂ’ನ ರಿಮೇಕ್ ಚಿತ್ರದಲ್ಲಿ ನಟಿಸುವ ಪಾಲು ಮತ್ತೊಬ್ಬ ನಟಿ ಕೀರ್ತಿ ಸುರೇಶ್ ಪಾಲಾಗಲಿದೆಯೇ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!
ಶಾರುಖ್ ಖಾನ್ ಜೊತೆ ಮಲ್ಟಿಸ್ಟಾರರ್ ಚಿತ್ರದಲ್ಲಿ ಜೂ.ಎನ್‌ಟಿಆರ್‌: 'ವಾರ್ 2' ಸೋತರೂ ಜಗ್ಗದ ಯಂಗ್ ಟೈಗರ್!