
ನವದೆಹಲಿ(ಏ. 07): ನಾಗಾಭರಣ ನಿರ್ದೇಶನದ "ಅಲ್ಲಮ" ಚಿತ್ರ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಸಂಗೀತ ನಿರ್ದೇಶಕ ಹಾಗೂ ಅತ್ಯುತ್ತಮ ಮೇಕಪ್ ಪಶಸ್ತಿಗಳು "ಅಲ್ಲಮ" ಚಿತ್ರದ ಪಾಲಾಗಿವೆ. ಬಾಪು ಪದ್ಮನಾಭ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರೆತರೆ, ಎನ್.ಕೆ. ರಾಮಕೃಷ್ಣನ್ ಅವರಿಗೆ ಅತ್ಯುತ್ತಮ ಮೇಕಪ್ ಅವಾರ್ಡ್ ಸಿಕ್ಕಿದೆ.
ಇಲ್ಲಿ ನಡೆದ 74ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮರಾಠಿಯ "ಕಾಸವ್" ಅತ್ಯುತ್ತಮ ಚಿತ್ರ ಎಂಬ ಗರಿಮೆಗೆ ಪಾತ್ರವಾಗಿದೆ. ಬಾಲಿವುಡ್'ನ ಅಕ್ಷಯ್ ಕುಮಾರ್ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಹಿಂದಿಯ 'ರುಸ್ತುಂ' ಅಭಿನಯಕ್ಕಾಗಿ ಅಕ್ಷಯ್ ಕುಮಾರ್'ಗೆ ಬೆಸ್ಟ್ ಆ್ಯಕ್ಟಿಂಗ್ ಅವಾರ್ಡ್ ಸಿಕ್ಕಿದೆ. ಮಲಯಾಳಂನ "ಮಿನ್ನಮುನಿಂಗು" ಚಿತ್ರದ ನಟಿ ಸುರಭಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಬಹುಭಾಷಾ ಸಾಹಸ ನಿರ್ದೇಶಕ ಪೀಟರ್ ಹೇನ್ ಅವರಿಗೆ ಅತ್ಯುತ್ತಮ ಸ್ಟಂಟ್ ಡೈರೆಕ್ಟರ್ ಪ್ರಶಸ್ತಿ ದೊರಕಿದೆ. ಶಿವರಾಜಕುಮಾರ್ ಅಭಿನಯದ "ಸತ್ಯ ಇನ್ ಲವ್", ಸುದೀಪ್ ಅಭಿನಯದ "ರನ್ನ" ಚಿತ್ರಗಳಲ್ಲಿ ಪೀಟರ್ ಹೇನ್ ಸಾಹಸ ನಿರ್ದೇಶನ ಮಾಡಿದ್ದರು.
ಈ ವರ್ಷ ಒಟ್ಟು 344 ಚಿತ್ರಗಳು ಪ್ರಶಸ್ತಿ ಪೈಪೋಟಿಗೆ ಇಳಿದಿದ್ದವು. ಚಿತ್ರ ನಿರ್ದೇಶಕ ಪ್ರಿಯದರ್ಶನ್ ನೇತೃತ್ವದಲ್ಲಿ ತೀರ್ಪುಗಾರರ ತಂಡವೊಂದನ್ನು ರಚಿಸಲಾಗಿತ್ತು. ಪತ್ರಕರ್ತ ಭಾವನಾ ಸೋಮಯ್ಯ ಮೊದಲಾದವರು ತೀರ್ಪಗಾರರ ಮಂಡಳಿಯಲ್ಲಿದ್ದಾರೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ
ಅತ್ಯುತ್ತಮ ಚಿತ್ರ: ಕಾಸವ್ (ಮರಾಠಿ)
ಅತ್ಯುತ್ತಮ ಸಂಗೀತ ನಿರ್ದೇಶಕ - ಬಾಪು ಪದ್ಮನಾಭ (ಚಿತ್ರ : ಅಲ್ಲಮ ಚಿತ್ರ)
ಅತ್ಯುತ್ತಮ ಮೇಕಪ್ - ಎನ್.ಕೆ. ರಾಮಕೃಷ್ಣನ್ (ಚಿತ್ರ : ಅಲ್ಲಮ)
ಅತ್ಯುತ್ತಮ ಕನ್ನಡ ಚಿತ್ರ - ರಿಸರ್ವೇಶನ್
ಅತ್ಯುತ್ತಮ ಕೊಂಕಣಿ ಚಿತ್ರ- ಡಿ ಝರಾ ಝರಾ
ಅತ್ಯುತ್ತಮ ತುಳು ಚಿತ್ರ - ಮುಡಿಪು
ಅತ್ಯುತ್ತಮ ಬಾಲನಟ - ಮನೋಹರ್ (ಚಿತ್ರ : ರೈಲ್ವೆ ಚಿಲ್ಡ್ರನ್)
ಅತ್ಯುತ್ತಮ ನಟ - ಅಕ್ಷಯ್ ಕುಮಾರ್ (ಚಿತ್ರ : ರುಸ್ತುಂ - ಹಿಂದಿ)
ಅತ್ಯುತ್ತಮ ನಿರ್ದೇಶಕ- ರಾಜೇಶ್ ಮಾಪುಸ್ಕರ (ಚಿತ್ರ: ವೆಂಟಿಲೇಟರ್)
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ- ಪಿಂಕ್ (ಹಿಂದಿ)
ಅತ್ಯುತ್ತಮ ತಮಿಳು ಚಿತ್ರ - ಜೋಕರ್
ಅತ್ಯುತ್ತಮ ಹಿಂದಿ ಚಿತ್ರ - ನೀರ್ಜಾ
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ - ಶಿವಾಯ್ (ಹಿಂದಿ)
ಅತ್ಯುತ್ತಮ ಸಾಹಸ ನಿರ್ದೇಶಕ- ಪೀಟರ್ ಹೇಯ್ನ್
ಅತ್ಯುತ್ತಮ ಪೋಷಕ ನಟಿ- ಜಾಯಿರಾ ವಾಸಿಮ್- (ಚಿತ್ರ: ದಂಗಲ್)
ನಟಿ ಸೋನಮ್ ಕಪೂರ್'ಗೆ ವಿಶೇಷ ಪ್ರಶಸ್ತಿ (ಚಿತ್ರ: ನೀರ್ಜಾ)
ಅತ್ಯುತ್ತಮ ನಟಿ- ಸುರಭಿ ಲಕ್ಷ್ಮಿ (ಮಲಯಾಳಂನ "ಮಿನ್ನಮಿನುಂಗು" ಚಿತ್ರದ ಅಭಿನಯಕ್ಕಾಗಿ)
ಅತ್ಯುತ್ತಮ ಗಾಯಕ: ಸುಂದರಾ ಅಯ್ಯರ್ (ತಮಿಳು ಚಿತ್ರ "ಜೋಕರ್" ಚಿತ್ರದಲ್ಲಿನ ಹಾಡಿಗಾಗಿ)
ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಅಲೀಫಾ (ನಿರ್ದೇಶನ: ದೀಪ್ ಚೌಧರಿ)
ಅತ್ಯುತ್ತಮ ಮಕ್ಕಳ ಚಿತ್ರ: ಧನಕ್ (ನಿರ್ದೇಶನ: ನಾಗೇಶ್ ಕುಕುನೂರ್)
ಅತ್ಯುತ್ತಮ ಪೋಷಕ ಪ್ರಶಸ್ತಿ: ಜಾಯಿರಾ ವಾಸಿಂ (ಚಿತ್ರ: ದಂಗಲ್)
ಅತ್ಯುತ್ತಮ ಗಾಯಕಿ: ಇಮಾನ್ ಚಕ್ರಬರ್ತಿ (ಹಾಡು: ತುಮಿ ಜಾಕೆ ಭಲೋಬಾಶೋ, ಚಿತ್ರ: ಪ್ರಕ್ತನ್, ಭಾಷೆ: ಬಂಗಾಳಿ)
ಅತ್ಯುತ್ತಮ ರೀ-ರೆಕಾರ್ಡಿಂಗ್ ಪ್ರಶಸ್ತಿ: ವೆಂಟಿಲೇಟರ್ (ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಮರಾಠಿ ಚಿತ್ರ)
ಅತ್ಯುತ್ತಮ ಕಾಸ್ಟೂಮ್ ಡಿಸೈನ್: ಸೈಕಲ್ (ಮರಾಠಿ ಚಿತ್ರ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಪ್ರಶಸ್ತಿ: 24(ತಮಿಳು ಚಿತ್ರ)
ಅತ್ಯುತ್ತಮ ಸಂಕಲನ: ವೆಂಟಿಲೇಟರ್
ವಿಶೇಷ ಜೂರಿ ಪ್ರಶಸ್ತಿ: ಮೋಹನಲಾಲ್ (ಮಲಯಾಳಂ ನಟ)
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ನವೀನ್ ಪೌಲ್ (ಚಿತ್ರ: ಶಿವಾಯ್)
ಅತ್ಯುತ್ತಮ ಬಂಗಾಳಿ ಚಿತ್ರ: ಬಿಸರ್ಜನ್ (ಬಂಗಾಳಿ)
ಅತ್ಯುತ್ತಮ ಗುಜರಾತಿ ಚಿತ್ರ: ರಾಂಗ್ ಸೈಡ್ ರಾಜು
ಅತ್ಯುತ್ತಮ ತಮಿಳು ಚಿತ್ರ: ರಾಜು ಮುರುಗನ್
ಅತ್ಯುತ್ತಮ ಪರಿಸರ ಚಿತ್ರ: "ದಿ ಟೈಗರ್ ವೂ ಕ್ರಾಸ್ಡ್ ದ ಲೈನ್")
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ: "ಐ ಆ್ಯಮ್ ಜೀಜಾ" ಮತ್ತು "ಸನತ್" (ಜಂಟಿ ಪ್ರಶಸ್ತಿ)
ಅತ್ಯುತ್ತಮ ಕಿರುಚಿತ್ರ: ಆಬ್ಬಾ
ಅತ್ಯುತ್ತಮ ಅನಿಮೇಶನ್ ಚಿತ್ರ: "ಹಮ್ ಪಿಕ್ಚರ್ ಬನಾತೆ ಹೈ"
ಅತ್ಯುತ್ತಮ ನಿರೂಪಣೆ ವಾಯ್ಸ್-ಓವರ್: ಮಕೀನೋ(ಜಪಾನೀಯಳಾದ ಈ ಮಹಿಳೆಯು ಬಂಗಾಳಿ ಭಾಷೆಯಲ್ಲಿ ಧ್ವನಿ ಕೊಟ್ಟಿದ್ದಾಳೆ)
ಅತ್ಯುತ್ತಮ ಸಿನಿಮಾ ಪುಸ್ತಕ: ಲತಾ ಸುರ್'ಗಾತಾ (ಲತಾ ಮಂಗೇಶ್ಕರ್ ಕುರಿತ ಪುಸ್ತಕ)
ಅತ್ಯುತ್ತಮ ಚಿತ್ರ ವಿಮರ್ಶಕ: ಜಿ.ಧನಂಜಯನ್
ಅತ್ಯುತ್ತಮ ಚಿತ್ರ ಸ್ನೇಹಿ ರಾಜ್ಯ: ಉತ್ತರಪ್ರದೇಶ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.