ಪ್ರಥಮ್ ಹಾಗೂ ಸಂಜನಾ ಹೋಟೆಲ್'ಗೆ ಹೋಗಿದ್ರಾ ? ಇಲ್ಲಿದೆ ಸತ್ಯ

Published : Apr 07, 2017, 04:41 AM ISTUpdated : Apr 11, 2018, 12:57 PM IST
ಪ್ರಥಮ್ ಹಾಗೂ ಸಂಜನಾ ಹೋಟೆಲ್'ಗೆ ಹೋಗಿದ್ರಾ ? ಇಲ್ಲಿದೆ ಸತ್ಯ

ಸಾರಾಂಶ

'ಮಾರ್ಚ್ 17 ರಂದು ಒಂದು ತಿಂಗಳ ಹಿಂದೆ ಪುನೀತ್ ಸಾರ್ ಹುಟ್ಟಿದ ಹಬ್ಬವಿರುವ ಕಾರಣ ಅವರ ಮನೆಗೆ ಹೋಗಿ ಜನ್ಮದಿನದ ಶುಭಾಶಯ ಕೋರಿ

ಬೆಂಗಳೂರು(ಏ.07): ಬಿಗ್ ಬಾಸ್ ವಿನ್ನರ್ ಪ್ರಥಮ್ ಹಾಗೂ ಸ್ಪರ್ಧಿ ಸಂಜನಾ ಒಟ್ಟಿಗೆ ಹೋಟೆಲ್ ಹೋಗಿರುವ ಬಗ್ಗೆ ವದಂತಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್'ನೊಂದಿಗೆ ಸ್ವತಃ ಮಾತನಾಡಿ ವದಂತಿಯ ಬಗ್ಗೆ ತಮ್ಮ ಸ್ಪಷ್ಟನೆ ನೀಡಿದ್ದಾರೆ.  

'ಮಾರ್ಚ್ 17 ರಂದು ಒಂದು ತಿಂಗಳ ಹಿಂದೆ ಪುನೀತ್ ಸಾರ್ ಹುಟ್ಟಿದ ಹಬ್ಬವಿರುವ ಕಾರಣ ಅವರ ಮನೆಗೆ ಹೋಗಿ ಜನ್ಮದಿನದ ಶುಭಾಶಯ ಕೋರಿ ನನ್ನ ಮನೆಗೆ ಹೋಗಿದ್ದೇನೆ. ಆದರೆ ಇಂತಹ ಜನಕ್ಕೆ ಏನು ಬಂದಿದೆಯೊ ಗೊತ್ತಿಲ್ಲ.  ಆನ್'ಲೈನ್ ನ್ಯೂಸ್ ವೆಬ್'ಸೈಟ್'ನಲ್ಲಿ ನನ್ನ ಹಾಗೂ ಪ್ರಥಮ್ ಬಗ್ಗೆ ಅಶ್ಲೀಲವಾಗಿ ಬರೆದಿದ್ದಾರೆ. ನಾನೆ ಖುದ್ದಾಗಿ ವೆಬ್'ಸೈಟ್'ನ ಸಂಪಾದಕರಿಗೆ ಖುದ್ದಾಗಿ ಫೋನ್ ಮಾಡಿ ಎಚ್ಚರಿಸಿದ್ದೇನೆ.

ಯಾವುದೇ ಖಚಿತ ಆಧಾರವಿಲ್ಲದೆ ಈ ರೀತಿ ಬರೆಯಬಾರದೆಂದು ಹೇಳಿದ್ದೇನೆ. ಅಲ್ಲದೆ ವೆಬ್'ಸೈಟ್'ನಲ್ಲಿ ಪೋಸ್ಟ್ ಮಾಡಿರುವ ಸುದ್ದಿಯನ್ನು ತೆಗೆಯಬೇಕೆಂದು ಹೇಳಿದ್ದೇನೆ. ಆದರೆ ನನ್ನ ಮಾತಿಗೆ ಅವರು ಸರಿಯಾಗಿ ಸ್ಪಂದಿಸಿಲ್ಲ. ಅದಕ್ಕಾಗಿ ನಾನು ಆ ಸಂಪಾದಕರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಒಂದು ವೇಳೆ ನಾನು ಪ್ರಥಮ್ ಜೊತೆ ಶಿವಾನಂದ ಸರ್ಕಲ್'ನಲ್ಲಿರುವ  ಹೋಟೆಲ್'ಗೆ ಹೋಗಿದ್ದರೆ ಈ ವಿಷಯ ಎಂದೋ ಹೊರಗೆ ಬರುತ್ತಿತ್ತು. ಆದರೆ ವೆಬ್'ಸೈಟ್'ನಲ್ಲಿರುವ ವದಂತಿ ಸಂಪೂರ್ಣ ಸುಳ್ಳು. ನಾನು ಸಂಪಾದಕನ ವಿರುದ್ಧ ಖಂಡಿತಾ ದೂರು ನೀಡುತ್ತೇನೆ. ನಾನು ಪ್ರಥಮ್ ಒಳ್ಳೆಯ ಸ್ನೇಹಿತರು.' ಎಂದು ವದಂತಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.     

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್ ಇಲ್ದೇ ಇರುವಾಗ ಕೆಲವೊಬ್ರು ಏನೇನೋ ಮಾತಾಡ್ತಾರೆ: ಕಿಚ್ಚ ಸುದೀಪ್‌ಗೆ ಪರೋಕ್ಷವಾಗಿ ಟಕ್ಕರ್ ಕೊಟ್ರಾ ವಿಜಯಲಕ್ಷ್ಮಿ
ನಿಧಿ ಅಗರ್ವಾಲ್ ಬೆನ್ನಲ್ಲೇ ನಟಿ ಸಮಂತಾಗೆ ಮೇಲೆ ಮುಗಿ ಬಿದ್ದ ಫ್ಯಾನ್ಸ್, ಹುಚ್ಚಾಟದ ದೃಶ್ಯ ಸೆರೆ