
ಮುಂಬೈ: ನಟಿ ತನುಶ್ರೀ ದತ್ತಾ ಹೊರಿಸಿದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಇದೇ ಮೊದಲ ಬಾರಿ ಮೌನ ಮುರಿದಿರುವ ನಟ ನಾನಾ ಪಾಟೇಕರ್, ‘10 ವರ್ಷ ಹಿಂದೆ ಹೇಳಿದ ಸತ್ಯ ಈಗಲೂ ಸತ್ಯವಾಗಿಯೇ ಇರುತ್ತದೆ’ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ನಾನಾ ಪಾಟೇಕರ್, ‘2008ರಲ್ಲಿ ಮೊದಲ ಬಾರಿ ಈ ವಿವಾದ ಸೃಷ್ಟಿಯಾಗಿತ್ತು. ಆಗಲೂ ನಾನು ಈ ಆರೋಪ ಸುಳ್ಳು ಎಂದು ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ. 10 ವರ್ಷ ಹಿಂದೆ ಹೇಳಿದ ಸತ್ಯವು ಈಗಲೂ ಸತ್ಯವಾಗಿಯೇ ಇರುತ್ತದೆ’ ಎಂದರು.
‘ನನ್ನ ವಕೀಲರು ಮಾಧ್ಯಮದ ಜತೆ ಮಾತನಾಡಬಾರದು ಎಂದು ಹೇಳಿದ್ದಾರೆ. ಹೀಗಾಗಿ ಯಾವುದನ್ನೂ ವಿವರವಾಗಿ ಹೇಳಲಾಗದು’ ಎಂದು ನಾನಾ ಸ್ಪಷ್ಟಪಡಿಸಿದರು.
10 ವರ್ಷದ ಹಿಂದೆ ವಿವಾದ ಸೃಷ್ಟಿಯಾದಾಗ ಕೂಡ ಸುದ್ದಿಗೋಷ್ಠಿ ನಡೆಸಿದ್ದ ನಾನಾ, ‘ನಾನು ಹಾರ್ನ್ ಓಕೆ ಪ್ಲೀಸ್ ಸೆಟ್‌ನಲ್ಲಿ ಯಾವತ್ತೂ ತನುಶ್ರೀಯನ್ನು ಮುಟ್ಟಲಿಲ್ಲ. ಚಿತ್ರೀಕರಣದ ವೇಳೆ ಆಕೆಯೇ ನನ್ನ ಮೈ ಮುಟ್ಟುವ ದೃಶ್ಯಗಳಿದ್ದವೇ ವಿನಾ ನಾನಾಗೇ ಯಾವತ್ತೂ ಆಕೆಯ ಮೈ ಮುಟ್ಟಿಲ್ಲ. ಹೀಗಾಗಿ ಇಲ್ಲಿ ಲೈಂಗಿಕ ಕಿರುಕುಳ ಪ್ರಶ್ನೆ ಬರದು’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.