ನಾನಾ ಪಾಟೇಕರ್​ ರೀಲ್ಸ್​ಗಳಲ್ಲಿ ನಿತ್ಯ ಜೀವಂತ! ಟೀ ಕಪ್​ ಹಿಡಿದು ನಗುವ ಈ ದೃಶ್ಯದ ಹಿಂದಿನ ಸೀಕ್ರೇಟ್​ ಗೊತ್ತಾ

Published : Oct 08, 2026, 05:14 PM IST
Nana Patekar

ಸಾರಾಂಶ

ಹಿರಿಯ ನಟ ನಾನಾ ಪಾಟೇಕರ್ ಅವರು ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅವರ ಪ್ರಸಿದ್ಧ 'ಟೀ' ದೃಶ್ಯವು 2007ರ 'ವೆಲ್‌ಕಮ್' ಸಿನಿಮಾದ್ದಾಗಿದೆ. ಅವರ ಅಗಲಿಕೆಗೆ ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಮುಂಬೈ: ಬಹುಮುಖ ಪ್ರತಿಭೆ, ಸಹಜ ಅಭಿನಯಕ್ಕೆ ಹೆಸರಾಗಿದ್ದ ಹಿರಿಯ ನಟ ನಾನಾ ಪಾಟೇಕರ್ ಅವರು ಇಂದು ಮುಂಜಾನೆ ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಟನಾಗಿ ಕಾಣಿಸಿಕೊಳ್ತಿದ್ದ ನಾನಾ ಪಾಟೇಕರ್​ ಅವರು ನಿಜ ಜೀವನದಲ್ಲಿ ಹೀರೋ ಆಗಿದ್ದವರು. ಎಷ್ಟೋ ಮಂದಿಗೆ ಸಹಾಯ ಮಾಡಿದ್ದವರು. ವೈಯಕ್ತಿಕ ಬದುಕಿನಲ್ಲಿ ಕೆಲವೊಂದು ವಿವಾದಕ್ಕೆ ಗುರಿಯಾಗಿದ್ದರೂ, ಎಷ್ಟೋ ಮಂದಿಗೆ ಸಹಾಯ ಮಾಡಿದ ನಟ ನಾನಾ ಪಾಟೇಕರ್​ ಅವರು ದಿನವೂ ಎಲ್ಲರಿಗೂ ಕಾಣಿಸಿಕೊಳ್ತಿರೋದು ರೀಲ್ಸ್​ ಮೂಲಕ.

ಚಹಾ ಹಿಡಿದ ನಾನಾ ಪಾಟೇಕರ್​

ಬಹುತೇಕ ಎಲ್ಲಾ ಹಾಸ್ಯದ ರೀಲ್ಸ್​ಗಳು ಇವರು ಚಹಾ ಹಿಡಿದು ನಿಂತುಕೊಂಡಿರುವ ಕಪ್​ ಹಾಗೂ ಅದನ್ನು ಚೆಲ್ಲುತ್ತಾ ನಗುವುದರೊಂದಿಗೆ ಎಂಡ್​ ಆಗುತ್ತವೆ. ಸದ್ಯ ಇವರ ಈ ದೃಶ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಟ್ರೆಂಡಿಂಗ್​ನಲ್ಲಿ ಇದ್ದು, ದಿನವೂ ಬಹುತೇಕರು ಸೋಷಿಯಲ್​ ಮೀಡಿಯಾಗಳಲ್ಲಿ ನಾನಾ ಪಾಟೇಕರ್​ ಅವರ ಈ ದೃಶ್ಯವನ್ನು ನೋಡಿಯೇ ನೋಡಿರುತ್ತೀರಿ. ಒಂದೋ ಬಾಲಕನೊಬ್ಬ ಟೀ ಹಿಡಿದು ನಿಂತಿರುವುದು ಫೇಮಸ್ ಆಗಿದ್ದರೆ, ಇನ್ನೊಂದು ನಾನಾ ಪಾಟೇಕರ್​ ಅವರ ದೃಶ್ಯ.

ಯಾವ ಸಿನಿಮಾದ ದೃಶ್ಯವಿದು?

ಇದೀಗ ಅವರ ನಿಧನದ ಬಳಿಕ, ಈ ದೃಶ್ಯಕ್ಕೆ ಸಿಕ್ಕಾಪಟ್ಟೆ ಡಿಮಾಂಡ್​ ಬಂದಿದೆ. ಇದು ಯಾವ ಸಿನಿಮಾದ ದೃಶ್ಯ ಎನ್ನುವ ಬಗ್ಗೆ ಹಲವು ಜನರು ವಿಚಾರಿಸುತ್ತಿದ್ದಾರೆ. ಅಂದಹಾಗೆ ಇದು ನಾನಾ ಪಾಟೇಕರ್​ ಅಭಿನಯದ ಕಾಮಿಡಿ ಮೂವಿ ವೆಲ್​ಕಮ್​ ಚಿತ್ರದ್ದು (Nana Patekar's Welcome Comedy Movie). 2007ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ದೃಶ್ಯ ಇದಾಗಿದ್ದು, ಇದನ್ನೀಗ ರೀಲ್ಸ್​ಗಳ ಕೊನೆಯಲ್ಲಿ ಹಾಸ್ಯದ ರೂಪದಲ್ಲಿ ಬಳಸಲಾಗುತ್ತದೆ. ಈ ಅಪ್ರತಿಮ ದೃಶ್ಯದಲ್ಲಿ, ನಾನಾ ಪಾಟೇಕರ್ ಜನಸಮೂಹದ ಮುಖ್ಯಸ್ಥ ಉದಯ್ ಶೆಟ್ಟಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ದೃಶ್ಯವು ತನ್ನ ಸಹ ದರೋಡೆಕೋರ ಸಂಗಾತಿ ಮಜ್ನು ಭಾಯ್ (ಅನಿಲ್ ಕಪೂರ್) ಯನ್ನು ಅಣಕಿಸುವಾಗಿನ ಸಿನಿಮಾದ ದೃಶ್ಯವಾಗಿದೆ.

ನಾನಾ ಪಾಟೇಕರ್ ಅವರಿಗೆ ಗೌರವ ಸಲ್ಲಿಸಲು ಅಕ್ಷಯ್ ಕುಮಾರ್ 2007 ರ ಚಲನಚಿತ್ರ 'ವೆಲ್​ಮಮ್' ನ ಸ್ಮರಣೀಯ ಚಿತ್ರವನ್ನು ಇಂದು ಹಂಚಿಕೊಂಡಿದ್ದಾರೆ. ಅವರು ಪ್ರತಿ ಪ್ರದರ್ಶನದಲ್ಲೂ ನಾನಾ ಅವರ ವಿಶಿಷ್ಟ ಧ್ವನಿ, ತೀವ್ರತೆ ಮತ್ತು ಪ್ರಾಮಾಣಿಕತೆಯನ್ನು ನಟ ಶ್ಲಾಘಿಸಿದ್ದಾರೆ. ಅವರು ಅಗಲಿದ್ದಾರೆಂದು ನಂಬುವುದು ಎಷ್ಟು ಕಷ್ಟ ಎಂದು ಅಕ್ಷಯ್ ಹೇಳಿದ್ದು, ಮರೆಯಲಾಗದ ನೆನಪುಗಳಿಗಾಗಿ ಅವರು ನಾನಾಗೆ ಧನ್ಯವಾದ ಅರ್ಪಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಲಕ್ಷ್ಮೀ ಬಾರಮ್ಮ’ದಲ್ಲಿ ನಟಿಸಿದ್ದ ಈ ನಟಿ ಈಗ ಹೀರೋಯಿನ್: ‘ಭಾವಾಂತರ’ದಲ್ಲಿ ಯಾರು ಈ ‘ರಾಧಾ’?
ನಾನಾ ಪಾಟೇಕರ್ ಪತ್ನಿಗೂ ನಟಿ ರಶ್ಮಿಕಾಗಿದೆ ಈ ವಿಶೇಷ ನಂಟು: ನೀಲಕಾಂತಿ ಕಥೆ ನಿಮಗೆ ಗೊತ್ತಾ?