Namrata Shirodkar: ಸೂಪರ್​ಸ್ಟಾರ್​ಗಾಗಿ ಕನಸನ್ನೇ ಬಲಿಕೊಟ್ಟ ಬಾಲಿವುಡ್​ ಬ್ಯೂಟಿ ನಮ್ರತಾ! ಖ್ಯಾತಿಯ ಉತ್ತುಂಗದಲ್ಲೇ ವಿದಾಯ...

Published : Jun 08, 2025, 04:18 PM IST
Namrata Shirodkar

ಸಾರಾಂಶ

ನಟಿಯಾಗುವ ಕನಸು ಹೊತ್ತು ಆ ನಿಟ್ಟಿನಲ್ಲಿಯೇ ಮುಂದುವರೆದು ಖ್ಯಾತಿಯ ಉತ್ತುಂಗದಲ್ಲಿ ಇರುವಾಗಲೇ ನಟಿ ನಮ್ರತಾ ಶಿರೋಡ್ಕರ್​ ಸಿನಿಮಾದಿಂದ ದೂರವಾಗಿದ್ದೇಕೆ? ಸೂಪರ್​ಸ್ಟಾರ್​ಗಾಗಿ ಕನಸನ್ನು ಬಲಿಕೊಟ್ಟ ನಟಿಯ ಸ್ಟೋರಿ ಇದು...

ಜೀವನದಲ್ಲಿ ಏನೇನೋ ಆಗುವ ಕನಸು ಕಂಡು, ಆ ಕನಸನ್ನು ನನಸು ಮಾಡಿಕೊಳ್ಳಲು ಹಗಲೂ ರಾತ್ರಿ ಕಷ್ಟಪಡುವುದು ಉಂಟು. ಕೊನೆಗೆ ಆ ಕನಸು ನನಸಾದಾಗ, ಇನ್ನಾವುದೋ ಕಾರಣಕ್ಕೆ ಆ ಕನಸನ್ನೇ ಬಲಿಕೊಡುವ ಸ್ಥಿತಿ ಬಂದರೆ? ಹಲವು ಹೆಣ್ಣುಮಕ್ಕಳಿಗೆ ಈ ರೀತಿ ಆಗುವುದು ಇದೆ. ಮದುವೆಯೆನ್ನುವುದೇ ಜೀವನದ ಸರ್ವಸ್ವ ಎಂದುಕೊಂಡಿರುವ ಈ ಕಾಲಘಟ್ಟದಲ್ಲಿ ಮದುವೆಯಾಗಿ, ಪತಿ ಮನೆಯವರು ಹೇಳಿದಂತೆ ಕೇಳುವ ಸಲುವಾಗಿ ತಮ್ಮ ಕನಸಿನ ಉದ್ಯೋಗವನ್ನು ತೊರೆದು ನೋವಿನಲ್ಲಿಯೇ ಬದುಕು ಸವೆಸುತ್ತಿರುವ ಹೆಣ್ಣುಮಕ್ಕಳು ಅದೆಷ್ಟೋ ಮಂದಿ ಇದ್ದಾರೆ. ಇದೇ ಕಾರಣಕ್ಕೆ ಇಂದು ಎಷ್ಟೋ ಯುವತಿಯರು ತಮಗೆ ಮದುವೆಯೇ ಬೇಡ ಎನ್ನುವಂಥ ಮನಸ್ಥಿತಿಗೂ ಬಂದಿದ್ದಾರೆ. ಇದು ಸಾಮಾನ್ಯ ಹೆಣ್ಣುಮಕ್ಕಳ ಮಾತಲ್ಲ, ಖ್ಯಾತ ನಟಿಯ ಜೀವನದಲ್ಲಿಯೂ ಆಗಿದ್ದು ಇದೇ. ಸೂಪರ್​ಸ್ಟಾರ್​ನನ್ನು ಪ್ರೀತಿಸಿದ ತಪ್ಪಿಗೆ, ತಮ್ಮ ಕನಸಿನ ಸಿನಿ ಲೋಕವನ್ನೇ ಬಲಿಕೊಟ್ಟ ನಟಿ ಈಕೆ. ಅವರೇ ಬಾಲಿವುಡ್​ ಬ್ಯೂಟಿ ನಮ್ರತಾ ಶಿರೋಡ್ಕರ್.

1977 ರ ಚಿತ್ರ 'ಶಿರಡಿ ಕೆ ಸಾಯಿ ಬಾಬಾ' ನಲ್ಲಿ ಬಾಲಕಲಾವಿದೆಯಾಗಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ಬ್ಯೂಟಿಫುಲ್​ ಲೇಡಿ ಎಂದರೆ ಆಕೆ ನಮ್ರತಾ ಶಿರೋಡ್ಕರ್​. 1998 ರಲ್ಲಿ 'ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ' ಚಿತ್ರದ ಮೂಲಕ ಹೀರೋಯಿನ್​ ಆಗಿ ಪ್ರವೇಶ ಮಾಡಿ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದ ನಮ್ರತಾ ಮಾಜಿ ಮಿಸ್​ ಇಂಡಿಯಾ ಕೂಡ. ನಟನೆ, ಚಿತ್ರರಂಗವೇ ಸರ್ವಸ್ವ ಎಂದುಕೊಂಡಿದ್ದ ನಟಿ ನಮ್ರತಾ ಚಿತ್ರರಂಗದಿಂದ ದೂರವಾದದ್ದೇಕೆ? ಆಕೆಯ ಬಾಳಿನಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆಗಿನ ಮದುವೆ ಚಿತ್ರರಂಗಕ್ಕೆ ಹೇಗೆ ಫುಲ್​ಸ್ಟಾಪ್​ ಇಟ್ಟಿತು ಎಂಬ ಬಗ್ಗೆ ಮಾತನಾಡಿದ್ದು ಅದೀಗ ಪುನಃ ವೈರಲ್​ ಆಗಿದೆ. 1972 ರ ಜನವರಿ 22ರಂದು ಮರಾಠಿ ಕುಟುಂಬದಲ್ಲಿ ಜನಿಸಿದ ನಮ್ರತಾಗೆ ಚಿಕ್ಕಂದಿನಿಂದಲೂ ನಟನೆ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ. 1993 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು, ತಮ್ಮ ಕನಸನ್ನು ಸಾಕಾರಗೊಳಿಸಿದರು. ಮಿಸ್​ ಯೂನಿವರ್ಸ್​ ಆಗುವ ಕನಸು ಸ್ವಲ್ಪದರಲ್ಲಿ ತಪ್ಪಿತ್ತು., ನಂತರ ನಮ್ರತಾ 1998 ರಲ್ಲಿ 'ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಪ್ರವೇಶಿಸಿದರು. ನಂತರ ಅವರು 'ಪುಕಾರ್', 'ವಾಸ್ತವ್' ಮತ್ತು 'ಅಸ್ತಿತ್ವ'ದಂತಹ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದರು. ಬಾಲಿವುಡ್​ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ನಮ್ರತಾ ದಿಢೀರ್​ ಆಗಿ ನಟನಾ ವೃತ್ತಿಯನ್ನು ಶಾಶ್ವತವಾಗಿ ತ್ಯಜಿಸುವುದಾಗಿ ಘೋಷಿಸಿದರು. ಅದು 2005ರ ಸಮಯ. ಅವರು ಈ ರೀತಿ ಘೋಷಿಸಿದಾಗ ಬಾಲಿವುಡ್​ ದಿಗ್ಭ್ರಮೆಗೊಂಡಿತ್ತು. ಬಾಲ್ಯದ ಕನಸು ನನಸಾಗುವುದು ಅಷ್ಟು ಸುಲಭವಲ್ಲ. ತಮ್ಮ ಕನಸಿನಂತೆಯೇ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡು ಉತ್ತಮವಾದ ಹೆಸರು ಪಡೆಯುತ್ತಿದ್ದಾಗಲೇ ಏಕೆ ಈ ನಿರ್ಧಾರ ಎಂದು ತಲೆಕೆಡಿಸಿಕೊಂಡರು ಎಲ್ಲರೂ.

ಆದರೆ ಆದದ್ದೇನೆಂದರೆ, ಅದಾಗಲೇ ಇವರು, ದಕ್ಷಿಣದ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪ್ರೀತಿಗೆ (love) ಬಿದ್ದಿದ್ದರು. ಅವರು ಜೊತೆ ಮದುವೆಯಾಗಲು ತಮ್ಮ ಯಶಸ್ವಿ ನಟನಾ ವೃತ್ತಿಜೀವನವನ್ನು ಕೊನೆಗೊಳಿಸಿದರು. ನಮ್ರತಾ ಅವರು ತೆಲಗು ಚಿತ್ರದ ಸೆಟ್‌ಗಳಲ್ಲಿ ಮಹೇಶ್ ಬಾಬು ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಸ್ವಲ್ಪ ಸಮಯದ ಡೇಟಿಂಗ್ ನಂತರ, ನಮ್ರತಾ ಮತ್ತು ಮಹೇಶ್ ಬಾಬು 10 ಫೆಬ್ರವರಿ 2005 ರಂದು ವಿವಾಹವಾದರು. ಆದರೆ, ಮದುವೆಯಾಗುವುದಾದರೆ ಮಹೇಶ್​ ಒಂದು ಷರತ್ತು ಹಾಕಿದ್ದರು. ಅದೇನೆಂದರೆ ನಟನಾ ವೃತ್ತಿಯನ್ನು ತ್ಯಜಿಸಬೇಕು ಎಂದು! ಕೆಲಸ ಮಾಡುವ ಹುಡುಗಿ ತಮಗೆ ಬೇಡ ಎಂದುಬಿಟ್ಟರು. ಪ್ರೇಮಕ್ಕೆ ಸಿಲುಕಿ, ಮನಸ್ಸನ್ನು ಒಪ್ಪಿಸಿದ್ದ ನಮೃತಾ ಅನಿವಾರ್ಯವಾಗಿ ತಮ್ಮ ಕನಸಿನ ಕ್ಷೇತ್ರವನ್ನು ಬಿಡುವ ಸ್ಥಿತಿ ಉಂಟಾಯಿತು. ಈ ಬಗ್ಗೆ ಖುದ್ದು ನಮ್ರತಾ ಹುಟ್ಟುಹಬ್ಬದ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ (Interview)ಈ ಮಾಹಿತಿಯನ್ನು ನೀಡಿದ್ದಾರೆ.

ಈ ಬಗ್ಗೆ ಇನ್ನಷ್ಟು ವಿವರಣೆ ನೀಡಿರುವ ನಟಿ, 2000ರಲ್ಲಿ ರಿಲೀಸ್ ಆಗಿದ್ದ 'ವಂ‍ಶಿ' ಚಿತ್ರದಲ್ಲಿ ಮಹೇಶ್‌ ಬಾಬು ಮತ್ತು ನಾನು ಒಟ್ಟಿಗೆ ನಟಿಸಿದ್ದೆವು. ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದು ಇದೊಂದೇ ಸಿನಿಮಾದಲ್ಲಿ. ಆದರೆ ಲವ್​ ಆ್ಯಟ್​ ಫಸ್ಟ್​ ಸೈಟ್​ ಎನ್ನುವಂತೆ ಮೊದಲ ಸಿನಿಮಾವೇ ಇಬ್ಬರ ನಡುವಿನ ಸ್ನೇಹ, ಪ್ರೀತಿ ಚಿಗುರಿತು. ಮದುವೆಯಾಗುವ ನಿರ್ಧಾರ ಮಾಡಿದೆವು. ಅದರಂತೆ 2005ರ ಫೆಬ್ರವರಿ 10ರಂದು ಅದ್ದೂರಿಯಾಗಿ ಮದುವೆ ನಡೆಯಿತು' ಎಂದಿದ್ದಾರೆ. 'ಕೆಲಸ ಮಾಡದ ಹೆಂಡತಿ ಬೇಕು ಎಂಬ ವಿಷಯದಲ್ಲಿ ಮೊದಲಿನಿಂದಲೂ ಮಹೇಶ್​ ಸ್ಪಷ್ಟವಾಗಿದ್ದರು, ನಾನು ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದರೆ, ಅವನು ಆ ಕೆಲಸವನ್ನೂ ಬಿಡುವಂತೆ ಹೇಳುತ್ತಿದ್ದನು. ಅದರಂತೆ ನಾನು ಕೇಳಬೇಕಾಯಿತು. ನಾನು ಮದುವೆಗೂ ಮೊದಲು ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದೆ. ಮದುವೆಯ ನಂತರ ಈ ದೊಡ್ಡ ಬಂಗಲೆಯಲ್ಲಿ ಹೇಗೆ ಹೊಂದಿಕೊಳ್ಳುವುದು ಎಂದು ಭಯಪಟ್ಟಿದ್ದೆ. ಇದೇ ಕಾರಣಕ್ಕೆ ನಾನು ಮಹೇಶ್​ಗೆ ನಾನು ಕೆಲಸ ಬಿಡುತ್ತೇನೆ, ಆದರೆ ಮದುವೆಯಾದ ಬಳಿಕ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತೇನೆ ಎಂದು ಕಂಡೀಷನ್‌ ಹಾಕಿದ್ದೆ. ಇಬ್ಬರೂ ಕಂಡೀಷನ್​ ಒಪ್ಪಿಕೊಂಡೆವು. ನಾನು ಕೆಲಸ ಬಿಟ್ಟೆ, ನನ್ನ ಇಷ್ಟದಂತೆ ಅಪಾರ್ಟ್​ಮೆಂಟ್​ನಲ್ಲಿ ವಾಸವಾದೆವು' ಎಂದಿದ್ದಾರೆ ನಮ್ರತಾ. ವಯಸ್ಸಿನಲ್ಲಿ ಮಹೇಶ್‌ ಬಾಬುಗಿಂತ ನಮ್ರತಾ 3 ವರ್ಷ ದೊಡ್ಡವರು. ಇದೀಗ ಈ ಜೋಡಿಗೆ ಇಬ್ಬರು ಮಕ್ಕಳು. 2006ರಲ್ಲಿ ಗೌತಮ್ ಎಂಬ ಮಗ ಹುಟ್ಟಿದರೆ, 2012ರಲ್ಲಿ ಮಗಳು ಸಿತಾರಾ ಜನಿಸಿದ್ದಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!