
ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವರಿಗೆ ಬೇರೆ ಬೇರೆ ಭಾಷೆಗಳಿಂದಲೂ ಡಿಮಾಂಡ್ ಹೆಚ್ಚಾಗಿದೆ. ಸದ್ಯ ನಟಿ ತೆಲುಗಿನ “ತಮ್ಮುಡು' ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಜುಲೈ 4ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಪ್ತಮಿ ಗೆಟಪ್ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ, ಕಾಂತಾರ ಚೆಲುವೆಯನ್ನು 'ಕಾಂತಾರ: ಚಾಪ್ಟರ್ 1' ನಲ್ಲಿಯೂ ಎಂದುಕೊಂಡಿದ್ದ ಅಭಿಮಾನಿಗಳಿಗೆ ಸಪ್ತಮಿ ನಿರಾಸೆ ಮೂಡಿಸಿದ್ದಾರೆ. ಇದಕ್ಕೆ ಕಾರಣ, ಇದರಲ್ಲಿ ಸಪ್ತಮಿ ಇರಲ್ಲ ಎನ್ನುವುದು. ಈ ಬಗ್ಗೆ ಹಿಂದೊಮ್ಮೆ ಹೇಳಿದ್ದ ನಟಿ, ಈಗ ಬರುತ್ತಿರುವುದು ಇದಾಗಲೇ ರಿಲೀಸ್ ಆಗಿರುವ ಕಾಂತಾರದ ಮೊದಲ ಭಾಗ. ಇದರಲ್ಲಿ ಲೀಲಾ ಪಾತ್ರ ಅಂದರೆ ಸಪ್ತಮಿ ಗೌಡ ಪಾತ್ರವೇ ಇರುವುದಿಲ್ಲ. ಆದ್ದರಿಂದ ನಾನು ಇದರಲ್ಲಿ ಹೇಗೆ ನಟಿಸಲಿ ಎಂದು ನಟಿ ಪ್ರಶ್ನಿಸುವ ಮೂಲಕ ಈ ಚಿತ್ರದಲ್ಲಿ ತಾವು ಇರುವುದಿಲ್ಲ ಎಂದಿದ್ದರು.
ಇಂತಿಪ್ಪ ನಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ ಇವತ್ತು ಸಪ್ತಮಿ ಗೌಡ ಅವರು ಹುಟ್ಟಿದ್ದು ಗೂಗಲ್ ದಾಖಲೆಯ ಪ್ರಕಾರ 1996ರ ಜೂನ್ 8. ಅಂದರೆ ಅವರಿಗೆ ಈಗ 29 ವರ್ಷ ವಯಸ್ಸು. ಹಿಂದೊಮ್ಮೆ ನಟಿ ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದರು. ಅದೇ ವೇಳೆ, ಕಾಂತಾರದ ಬಳಿಕ ಸಂಭಾವನೆ ಹೆಚ್ಚಾಯ್ತಾ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದರು. ತಮ್ಮ ತಂದೆ ಪೊಲೀಸ್ ಅಧಿಕಾರಿಯಾಗಿದ್ದವರು. ಅವರೇ ನನಗೆ ಎಲ್ಲಾ ಎಂದಿದ್ದ ನಟಿ, ಅಪ್ಪನಿಗೆ ಹೇಳದೇ ಏನೂ ಕೆಲಸ ಮಾಡ್ತಿರಲಿಲ್ಲ. ರಾತ್ರಿ ಕದ್ದು ಮುಚ್ಚಿ ಎಲ್ಲೂ ಹೋಗಿಲ್ಲ. ಸ್ಕೂಲ್-ಕಾಲೇಜಿನ ಪರೀಕ್ಷೆಯಲ್ಲಿ ಕಾಪಿ ಅಂತೂ ಮಾಡೇ ಇಲ್ಲ. ಕಾಲೇಜಿಗೆ ಬಂಕ್ ಮಾಡಿದ್ದೇನೆ ಆದ್ರೆ ಆವಾಗ್ಲೂ ಮನೆಯಲ್ಲಿ ಹೇಳಿದ್ದೆ. ದುಡ್ಡಂತೂ ಕದ್ದೇ ಇಲ್ಲ ಎಂದೆಲ್ಲಾ ಹೇಳಿದ್ದರು.
ಕೊನೆಗೆ ಸಂಭಾವನೆಯ ವಿಷಯದ ಕುರಿತು ಪ್ರಶ್ನೆ ಕೇಳಲಾಗಿತ್ತು. ಸಾಮಾನ್ಯವಾಗಿ ಚಿತ್ರ ತಾರೆಯರು ಒಂದು ಹಿಟ್ ಚಿತ್ರ ಕೊಟ್ಟರೆ, ಸಹಜ ಎಂಬಂತೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಅದರಂತೆಯೇ, ಕಾಂತಾರದ ಯಶಸ್ಸಿನ ಬಳಿಕ ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ಪಟ್ಟು ಜಾಸ್ತಿ ಆಗಿದೆ ಎಂಬ ಪ್ರಶ್ನೆಯನ್ನು ನಟಿಯ ಮುಂದಿಟ್ಟಾಗ, ಕಾಂತಾರ ಚಿತ್ರದ ಪ್ರೊಡಕ್ಷನ್ ಮಾಡಿದವರೇ ಎರಡನೆಯ ಚಿತ್ರದ ಪ್ರೊಡಕ್ಷನ್ ಕೂಡ ಮಾಡಿದ್ರು. ಸೋ ನಾನು ಮೊದಲ ಚಿತ್ರಕ್ಕೂ ಪೇಮೆಂಟ್ ಕೇಳಿರಲಿಲ್ಲ, ಎರಡನೆಯ ಚಿತ್ರಕ್ಕೂ ಕೇಳಿಲ್ಲ. ಆದರೆ ಅವರಾಗಿಯೇ 7-8 ಪಟ್ಟು ಜಾಸ್ತಿ ಸಂಭಾವನೆ ಕೊಟ್ಟರು ಎಂದಿದ್ದರು. ಆದರೆ ಎಷ್ಟು ಎನ್ನುವ ಬಗ್ಗೆ ಅವರು ರಿವೀಲ್ ಮಾಡಲಿಲ್ಲ. ಕಾಂತಾರದಲ್ಲಿ ನಾನು ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಪಡೆದೆ ಎಂದು ದೊಡ್ಡ ಮ್ಯಾಗಜೀನ್ ಒಂದರಲ್ಲಿ ಪ್ರಕಟವಾಯ್ತು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯ್ತು. ಮುಂದೆ ಇಷ್ಟು ದುಡ್ಡು ಪಡೆಯುವ ಹಾಗೆ ಆಗಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ ಎಂದಿದ್ದರು. ಅದರ ವಿಡಿಯೋಗಳ ಮತ್ತೆ ವೈರಲ್ ಆಗುತ್ತಿವೆ.
ಕೆಲ ದಿನಗಳ ಹಿಂದೆ ನಟಿಗೆ ಬಾಯ್ಫ್ರೆಂಡ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದೀಗ ಮತ್ತೆ ವೈರಲ್ ಆಗ್ತಿದೆ. ಅದಕ್ಕೆ ನಟಿ, ಮೊದ್ಲು ಬಾಯ್ಫ್ರೆಂಡ್ ಇದ್ರು. ಈಗ ಇಲ್ಲ. ಆದರೆ ಹೊಸ ಅಪ್ಲಿಕೇಷನ್ಗೆ ಅವಕಾಶವಿಲ್ಲ. ಸದ್ಯ ಸಿಕ್ಕಾಪಟ್ಟೆ ಬಿಜಿ ಇದ್ದೇನೆ, ಅದಕ್ಕೆಲ್ಲಾ ಟೈಂ ಇಲ್ಲ ಎಂದರು. ಹೊಸದಾಗಿ ಅಪ್ಲಿಕೇಷನ್ ಹಾಕೋದಿದ್ರೆ ಬಾಯ್ಫ್ರೆಂಡ್ಗೆ ಏನು ಕ್ವಾಲಿಟಿ ಇರಬೇಕು ಎನ್ನುವ ಪ್ರಶ್ನೆಗೆ ಸಪ್ತಮಿ ಗೌಡ, ಆತ ಬರೀ ಬಾಯ್ಫ್ರೆಂಡ್ ಆಗಿದ್ರೆ ಸಾಕಾಗಲ್ಲ, ಗಂಡ ಆಗೋಕೆ ರೆಡಿ ಇರಬೇಕು. ಅವನನ್ನು ನನ್ನ ಅಪ್ಪ-ಅಮ್ಮ ಒಪ್ಪಿಕೊಳ್ಳಬೇಕು ಎಂದರು. ಹಾಗೆನೇ ನನ್ನಪ್ಪ ಯಾವಾಗ್ಲೂ ಒಂದು ಮಾತು ಹೇಳೋರು ಅದೇನೆಂದರೆ, ಹುಡುಗ ಎಷ್ಟೇ ಶ್ರೀಮಂತ ಆಗಿರಲಿ, ಆತನ ಬಳಿ ಎಷ್ಟೇ ಹಣ, ಆಸ್ತಿ ಇರಲಿ ಆತ ಸ್ವಂತ ದುಡಿಯುವ ಛಲ ಹೊಂದಿರಬೇಕು ಎಂದು. ಅದೇ ನನ್ನ ಆಸೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.