ಬಾ ನಲ್ಲೆ ಮಧುಚಂದ್ರಕೆ' ಕನ್ನಡ 30 ವರ್ಷದ ಬಳಿಕ ಮತ್ತೆ ಟ್ರೆಂಡಿಂಗ್ ಆಯ್ತು; 'ನಲ್ಲೆ' ಹೋಗಿ 'ನಲ್ಲ' ಆಗಿದ್ದು ಯಾಕೆ?

Published : Jun 12, 2025, 02:55 PM ISTUpdated : Jun 12, 2025, 03:22 PM IST
Baa Nalle Madhuchandrake Movie

ಸಾರಾಂಶ

ನ್ಯಾಷನಲ್ ಚಾನೆಲ್ ಸೇರಿದಂತೆ, ಎಲ್ಲಾ ಕಡೆ ಈ ಕೊಲೆ ಕೇಸ್ ಭಾರೀ ಚರ್ಚೆಗೆ ಕಾರಣವಾಗಿದೆ. ಏಕೆಂದರೆ, ಕಳೆದ 30-40 ವರ್ಷಗಳಲ್ಲಿ ಸಮಾಜದ ಮಜಲು ಸಾಕಷ್ಟು ಬದಲಾವಣೆಗೆ ಕಾರಣವಾಗಿದೆಯಾ? ಕಳೆದ 3-4 ದಶಕಗಳ ಹಿಂದೆ, ಹೆಚ್ಚಾಗಿ ಮಹಿಳೆಯರೇ ಕೊಲೆಗೆ ಈಡಾಗುತ್ತಿದ್ದರು. ವರದಕ್ಷಿಣೆ ಕೇಸ್, ಸಂಸಾರದಲ್ಲಿ ಸಮಸ್ಯೆ..

ಇತ್ತೀಚೆಗೆ, ಅಂದರೆ ಕಳೆದ ತಿಂಗಳ ಕೊನೆಯಲ್ಲಿ ಮೇಘಾಲಯದಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಿಯಕರನಿಗಾಗಿ ಮದುವೆ ಮಾಡಿಕೊಂಡು ಗಂಡನನ್ನೇ ಹನಿಮೂನ್‌ ಪ್ಲಾನ್ ಮಾಡಿ ಸಾಯಸಿರೋ ಮಹಿಳೆಯ ಕಥೆ ಇದು. ಗಂಡನನ್ನು ಸಾಯಿಸಿ ವಿಧವೆ ಪಟ್ಟ ಕಟ್ಟಿಕೊಂಡು ಬಳಿಕ ಪ್ರಿಯಕರನನ್ನು ಮದುವೆಯಾಗಿ ಸುಖ ಸಂಸಾರ ಮಾಡುವ ಕನಸು ಕಂಡಿದ್ದಳು ಆ ಮಹಿಳೆ. ಆದರೆ, ಇದೀಗ ಅವಳ ಲೆಕ್ಕಾಚಾರ ತಪ್ಪಿದ್ದು, ಜೈಲು ಪಾಲಾಗಿದ್ದಾಳೆ. ಈ ಘಟನೆಯೀಗ ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.

ಆದರೆ, ಇದೇ ತರಹದ ಘಟನೆಯಾಧಾರಿತ ಸಿನಿಮಾ 'ಬಾ ನಲ್ಲೆ ಮಧುಚಂದ್ರಕೆ (Baa Nalle Madhuchandrake) ವೊಂದು ಕನ್ನಡದಲ್ಲಿ ತೆರೆಗೆ ಬಂದಿತ್ತು. 1993ರಲ್ಲಿ ತೆರೆಕಂಡ ಈ ಚಿತ್ರವು ಅಂದು ಸಿನಿಮಾ ಆಗಿದ್ದರೂ ಕೂಡ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಮದುವೆಯಾದ ಹೆಂಡತಿಯನ್ನು ಹನಿಮೂನ್ ನೆಪದಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ಬಂದಿದ್ದ ಗಂಡನ ಕಥೆ ಹೊಂದಿದ್ದು, ಸಮಾಜ ಅಂದು ಈ ಸಿನಿಮಾ ನೋಡಿ ಅಕ್ಷರಶಃ ಬೆಚ್ಚಿಬಿದ್ದಿತ್ತು. 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರು ಅದೇ ಹೆಸರಿನ ಕಾದಂಬರಿ ಬರೆದು ಅದು ವಾರಪತ್ರಿಕೆಯಲ್ಲಿ ಕೂಡ ಪಬ್ಲಿಶ್ ಆಗಿತ್ತು.

'ಬಾ ನಲ್ಲೆ ಮಧುಚಂದ್ರಕೆ' ( ಅನುವಾದ:  ಕಮ್ ಗರ್ಲ್ ಟು ದಿ ಹನಿಮೂನ್-Come Girl to the Honeymoon) 1993 ರ ಭಾರತೀಯ, ಕನ್ನಡ ಭಾಷೆಯ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದ್ದು, ಕೆ. ಶಿವರಾಮ್ ಮತ್ತು ನಂದಿನಿ ಸಿಂಗ್ ನಟಿಸಿದ್ದಾರೆ. ಈ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಇದು ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಇದನ್ನು ದೃಶ್ಯ ಕಾವ್ಯ ಫಿಲ್ಮ್ಸ್ ಬ್ಯಾನರ್‌ಗಾಗಿ ಉರ್ಮಿಳಾ ಬಾಬು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ಹಂಸಲೇಖ ಸಂಯೋಜಿಸಿದ್ದಾರೆ.

ಸದ್ಯ ಕನ್ನಡನಾಡಿನಲ್ಲಿ ಈ ಸಿನಿಮಾ ಹೆಸರು ಭಾರೀ ಸದ್ದು ಮಾಡುತ್ತಿದೆ. ಕಾರಣ, ಸಿನಿಮಾದಲ್ಲಿ ಕಥೆ ಇರುವಂತೆ ಮಧ್ಯಪ್ರದೇಶದ ಇಂಧೂರ್‌ನಲ್ಲಿ ನಡೆದ ಘಟನೆ ಕೂಡ ಇದೆ ಅನ್ನೋದು. ಒಂದೇ ಒಂದು ಬದಲಾವಣೆ ಎಂದರೆ ಅಲ್ಲಿ ಗಂಡ ತನ್ನ ಹೆಂಡತಿನ್ನು ಸಾಯಿಸಿದ್ದರೆ ಇಲ್ಲಿ ಹೆಂಡತಿಯೇ ಗಂಡನನ್ನು ಸಾಯಿಸಿದ್ದಾರೆ ಎಂಬ ಚರ್ಚೆಯೇ ಹೆಚ್ಚಾಗಿದೆ. ಆದರೆ, ಬಹುತೇಕರು ಅಂದುಕೊಂಡಿರುವಂತೆ, ಆದರೆ, ಅದು ಕೇವಲ ಸಿನಿಮಾ ಕಥೆ ಆಗಿರಲಿಲ್ಲ. ನಾಗತಿಹಳ್ಳಿಯವರಿಗೆ ಪೊಲೀಸ್ ಆಫೀಸರ್‌ ಒಬ್ಬರು, ಶಿಮ್ಲಾದಲ್ಲಿ ನಡೆದ ಸತ್ಯಘಟನೆಯನ್ನು ಪ್ರಾಸಂಗಿಕವಾಗಿ ಹೇಳಿದ್ದರಂತೆ.

ಪೊಲೀಸ್‌ ಆಫೀಸರ್‌ ಒಬ್ಬರು ಹೇಳಿದ ಸತ್ಯಕಥೆಯನ್ನು, ಅವರದೇ ಆದ ರೀತಿಯಲ್ಲಿ ಕಲ್ಪನೆಗಳ ಮೂಲಕ ಕಾದಂಬರಿ ರೂಪಕ್ಕೆ ತಂದು, ಬಳಿಕ ಅದನ್ನು ಸಿನಿಮಾ ಮಾಡಿದ್ದಾರೆ ಕನ್ನಡದ ಖ್ಯಾತ ಬರಹಗಾರ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಈ ಕಾದಂಬರಿ ಈಗಾಗಲೇ 20 ಬಾರಿ ಮರುಮುದ್ರಣ ಕಂಡಿದೆ. ಅಷ್ಟೇ ಅಲ್ಲ, ಹಿಂದಿಗೆ ಕೂಡ ಅನುವಾದ ಆಗಿದೆ. ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ಘಟನೆಯ ರೀತಿಯಲ್ಲೇ ಈ ಮೊದಲು ಶಿಮ್ಲಾದಲ್ಲಿ ಕೂಡ 'ಈ ಹನಿಮೂನ್ ಮರ್ಡರ್' ನಡೆದಿತ್ತು. ಅದೀಗ 30-35 ವರ್ಷಗಳ ಬಳಿಕ ಮತ್ತೊಂದು ರೀತಿಯಲ್ಲಿ (ಆಗ ಆಗಿದ್ದು ಹೆಂಡತಿ ಕೊಲೆ, ಈಗ ಆಗಿದ್ದು ಗಂಡನ ಕೊಲೆ) ಮತ್ತೆ ನಡೆದಿದೆ.

ಇದೀಗ ನ್ಯಾಷನಲ್ ಚಾನೆಲ್ ಸೇರಿದಂತೆ, ಎಲ್ಲಾ ಕಡೆ ಈ ಕೊಲೆ ಕೇಸ್ ಭಾರೀ ಚರ್ಚೆಗೆ ಕಾರಣವಾಗಿದೆ. ಏಕೆಂದರೆ, ಕಳೆದ 30-40 ವರ್ಷಗಳಲ್ಲಿ ಸಮಾಜದ ಮಜಲು ಸಾಕಷ್ಟು ಬದಲಾವಣೆಗೆ ಕಾರಣವಾಗಿದೆಯಾ? ಕಳೆದ 3-4 ದಶಕಗಳ ಹಿಂದೆ, ಹೆಚ್ಚಾಗಿ ಮಹಿಳೆಯರೇ ಕೊಲೆಗೆ ಈಡಾಗುತ್ತಿದ್ದರು. ವರದಕ್ಷಿಣೆ ಕೇಸ್, ಸಂಸಾರದಲ್ಲಿ ಸಮಸ್ಯೆ ಅಥವಾ ಅನೈತಿಕ ಸಂಬಂಧ, ಹೀಗೆ ಅನೇಕ ಸಮಸ್ಯೆಗಳಿಗೆ ಕೊಲೆ ಒಂದು ಪರಿಹಾರವಾಗಿ ಸಮಾಜದಲ್ಲಿ ಇತ್ತು. ಆದರೆ, ಹೆಚ್ಚಾಗಿ ಮಹಿಳೆಯರೇ ಬಲಿಪಶುಗಳಾಗಿ ಇರುತ್ತಿದ್ದರು. ಆದರೆ, ಈಗ ಕಾಲ ಉಲ್ಟಾ ಹೊಡೆದಿದ್ಯಾ?

ಈಗ, ಅಂದರೆ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ತೆರೆಗೆ ಬಂದ 30-40 ವರ್ಷಗಳ ಬಳಿಕ, ಸಮಾಜ ಮತ್ತೊಂದು ಮಜಲಿಗೆ ಟರ್ನ್ ಆಗಿದ್ಯಾ? ಈ ಬಗ್ಗೆಯೇ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಮಹಿಳೆಯರಾಗಲೀ ಅಥವಾ ಪುರುಷರಾಗಲೀ ಯಾರೂ ಕೊಲೆ ಆಗಬಾರದು. ಆದರೆ, ಈಗ ಚರ್ಚೆ ಆಗುತ್ತಿರೋ ಸಂಗತಿ ಎಂದರೆ, ಮಹಿಳೆಯರು ಶೋಷಣೆ ಆಗುತ್ತಿದ್ದ ಜಾಗದಲ್ಲಿ ಈಗ ಪುರುಷರು ನಿಂತಿದ್ದಾರೆಯೇ? ಈ ಬಗೆಗಿನ ಯಾವುದೇ ಚರ್ಚೆಯನ್ನೂ ಅಂತಿಮ ಹಂತಕ್ಕೆ ತರಲಾಗುವುದಿಲ್ಲ ಎಂಬುದು ಬೇರೆ ಮಾತು. ಆದರೆ, ಇಂತಹ ಚರ್ಚೆ ಈಗ ಶುರುವಾಗಿರೋದಂತೂ ಹೌದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!