Smriti Irani: ಸ್ಲೀವ್‌ಲೆಸ್ ಟಾಪ್, ಮಿನಿ ಸ್ಕರ್ಟ್​ನಲ್ಲಿ ಸ್ಮೃತಿ ಇರಾನಿ! Miss India ರ‍್ಯಾಂಪ್ ವಾಕ್ ಹೇಗಿತ್ತು ನೋಡಿ!

Published : Jun 12, 2025, 02:49 PM ISTUpdated : Jun 12, 2025, 04:21 PM IST
Smruthi Irani in Miss India

ಸಾರಾಂಶ

ರೂಪದರ್ಶಿಯಾಗಿ, ನಟಿಯಾಗಿ, ನಿರೂಪಕಿಯಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿ ಅವರು ಹಿಂದೊಮ್ಮೆ ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರ ವಿಡಿಯೋ ಇದೀಗ ಪುನಃ ವೈರಲ್​ ಆಗುತ್ತಿದೆ. 

ಕಿರುತೆರೆ ನಟಿ ಮತ್ತು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈಚೆಗೆ ಸಾಕಷ್ಟು ಸುದ್ದಿ ಮಾಡುತ್ತಿರಲು ಕಾರಣವಾದದ್ದು, ದೇಶಕ್ಕಾಗಿ ತೆಗೆದುಕೊಂಡಿದ್ದ ಬಹು ದೊಡ್ಡ ನಿರ್ಧಾರ. ಅದೇನೆಂದರೆ, ಅವರು ತಮ್ಮ ಪಿಂಚಣಿಯನ್ನು ಹಾಗೂ ಸರ್ಕಾರದಿಂದ ತಮಗೆ ಸಿಗುತ್ತಿರುವ ಸವಲತ್ತುಗಳನ್ನು ಭಾರತದ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡುವುದಾಗಿ ಘೋಷಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. 'ಭಾರತದ ನಾಗರಿಕರು ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ'ದ ಕಾರ್ಯತಂತ್ರದ ಸಲಹೆಗಾರರೂ ಆಗಿರುವ ಸ್ಮೃಇ ಇರಾನಿ, ತಮ್ಮ ಪಿಂಚಣಿಯನ್ನು ಭಾರತದ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡಿದ್ದಾರೆ. ಡಲು ಕಳೆದ ಒಂದು ವರ್ಷದಿಂದ, ಮಾಜಿ ಸಂಸದನಾಗಿ, ನಾನು ಪಿಂಚಣಿ ಪಡೆದಿಲ್ಲ ಅಥವಾ ಯಾವುದೇ ಸೌಲಭ್ಯವನ್ನು ಪಡೆದಿಲ್ಲ. ಇದು ಭಾರತದ ಖಜಾನೆಯಿಂದ ಬಂದ ಹಣ, ಇದನ್ನು ನಾನು ಇಂದು ರಾಷ್ಟ್ರೀಯ ರಕ್ಷಣಾ ನಿಧಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಎಲ್ಲರಿಗೂ ಮಾದರಿಯಾದವರು.

ಅಷ್ಟಕ್ಕೂ, ರೂಪದರ್ಶಿಯಾಗಿ, ನಟಿಯಾಗಿ ಹಾಗೂ ನಿರೂಪಕಿಯಾಗಿ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಸ್ಮೃತಿ ಇರಾನಿ ಅವರ ಸಾಧನೆಯ ಹಾದಿ ಬಹಳ ದೀರ್ಘವಾಗಿದೆ. ಯಾವ ಗಾಡ್ ಫಾದರ್ ಇಲ್ಲದೇ ರಾಜಕೀಯ ಹಿನ್ನಲೆಯೂ ಇಲ್ಲದೇ ಸ್ವಂತ ಪರಿಶ್ರಮದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿದವರು ಅವರು. ಅಂದಹಾಗೆ ಸ್ಮೃತಿ ಅವರಿಗೆ ಈಗ 49 ವರ್ಷ ವಯಸ್ಸು. ಮಾರ್ಚ್​ 23ರ 1976ರಂದು ಹುಟ್ಟಿರೋ ಸ್ಮೃತಿ ಇರಾನಿ, ರಾಜಕೀಯಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ಫೇಮಸ್​ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿಯಾಗಿ ಅಭಿನಯಿಸಿ ಹಲವು ವರ್ಷ ಮನೆಮನೆಗಳಲ್ಲಿನ ಮನಗಳನ್ನು ಗೆದ್ದವರು. ಇರಾನಿ ಸೌಂದರ್ಯ ಸ್ಪರ್ಧೆಯ ಮಿಸ್ ಇಂಡಿಯಾ 1998 ರಲ್ಲಿ ಭಾಗವಹಿಸಿದವರಲ್ಲಿ ಒಬ್ಬರು. ಆಲ್ಬಂ, ಟಿವಿ ಸರಣಿ ನಟನೆಯನ್ನು ಪ್ರಾರಂಭಿಸಿದರು. ಜಿ ಟಿವಿಯಲ್ಲಿ ರಾಮಾಯಣದಲ್ಲಿ ಸೀತಾ ಎಂಬ ಮಹಾಕಾವ್ಯ ಪಾತ್ರವನ್ನು ನಿರ್ವಹಿಸಿದರು. ಆದರೆ ಕುತೂಹಲದ ವಿಷಯ ಎಂದರೆ, ಅವರು, 21ನೇ ವಯಸ್ಸಿನಲ್ಲಿಯೇ ಮಿಸ್​ ಇಂಡಿಯಾ ಆಗುವ ಕನಸು ಹೊತ್ತು ಭಾರತದಿಂದ ಪ್ರತಿನಿಧಿಸಿದ್ದರು ಎನ್ನುವ ವಿಷಯ ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ! ಹೌದು. ಅದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ.

1998ರಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಸ್ಮೃತಿ ಅವರು ಕ್ಯಾಟ್​ ವಾಕ್​ ಮಾಡುತ್ತಲೇ ತಮ್ಮನ್ನು ತಾವು ಪರಿಚಯಿಸಿಕೊಂಡಿರುವುದನ್ನು ನೋಡಬಹುದು. ನನಗೆ ಈಗ 21 ವರ್ಷ ವಯಸ್ಸು. ಎತ್ತರ 5 ಅಡಿ ಎಂಟು ಇಂಚು ಎನ್ನುತ್ತಲೇ ಆಗ ರಾಜಕೀಯ ಎಂದರೆ ತಮಗೆ ಇಷ್ಟ ಎಂದು ಹೇಳಿದ್ದರು. ಭಾರತದ ಸಂಸ್ಕೃತಿ ಮತ್ತು ರಾಜಕೀಯದ ಕುರಿತು ಮಾತನಾಡಿದ್ದ ಸ್ಮೃತಿ ಅವರು 21ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡುವ ಸೂಚನೆ ನೀಡಿದ್ದರು. ಸ್ಪರ್ಧೆಯಲ್ಲಿ ಅವರು ಕಿತ್ತಳೆ ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್‌ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದರು. ಫೈನಲ್​ ರೌಂಡ್​ ಪ್ರವೇಶಿಸಿದ್ದು. ಆದರೆ ಅಗ್ರ 9 ರೊಳಗೆ ತಲುಪಲು ಸಾಧ್ಯವಾಗದ ಸ್ಪರ್ಧಿಗಳಲ್ಲಿ ಸ್ಮೃತಿ ಕೂಡಾ ಒಬ್ಬರು.

 

ಅಂದಹಾಗೆ ಇವರು ನಟಿಯಾಗಿ, ಮಾಡೆಲ್ ಆಗಿ ಮತ್ತು ದೂರದರ್ಶನ ನಿರ್ಮಾಪಕಿ ಆಗಿ 20 ವರ್ಷಗಳಿಗೂ ಅಧಿಕ ಕಾಲ ಕೆಲಸ ಮಾಡಿದ್ದಾರೆ. 1998ರಲ್ಲಿಯೇ ರಾಜಕೀಯ ಸೇರುವ ಆಸೆ ವ್ಯಕ್ತಪಡಿಸಿದ್ದ ಅವರ ಆಸೆ ಈಡೇರಿದ್ದು, 2003 ರಲ್ಲಿ. ಅವರು ಅಧಿಕೃತ ಬಿಜೆಪಿ ಸೇರಿದರು. 2010 ರಿಂದ 2013 ರವರೆಗೆ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದರು. ಬಳಿಕ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾದರು. 2011 ರಿಂದ 2019 ರವರೆಗೆ ಗುಜರಾತ್‌ನಿಂದಲೇ ರಾಜ್ಯಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಇವರು. 2019 ರಿಂದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ವೃತ್ತಿಪರ ಚಿತ್ರನಟಿಯಾಗಿ ನಂತರ ರಾಜಕಾರಣ ಪ್ರವೇಶ ಮಾಡಿ ರಾಜಕಾರಣಿಯಾಗಿ ಯಶಸ್ಸು ಸಾಧಿಸಿದ್ದ ಇವರು ಬಿಜೆಪಿಯ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಮೊದಲ ರಾಜ್ಯಸಭೆ ಸದಸ್ಯರಾಗಿ, ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಅಮೇಥಿಯಲ್ಲಿ ಸೋಲಿಸಿ ಲೋಕಸಭೆ ಪ್ರವೇಶಿದರು. ಇದೀಗ ಪರಾಭವಗೊಂಡಿದ್ದಾರೆ. ಆದರೆ ಅವರ ಈ ವಿಡಿಯೋ ಮಾತ್ರ ಸಕತ್​ ಸದ್ದು ಮಾಡುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?