
ಬಿಳಿಯ ಸಾದಾ ಪೈಜಾಮ್, ಮೇಲೊಂದು ನೆಹರು ಶರ್ಟ್, ತೊಡೆಯ ಮೇಲೆ ಕೆಂಪು ಬಣ್ಣ ಶಾಲನ್ನು ಹೊದ್ದುಕೊಂಡು ವೇದಿಕೆ ಏರಿ ತಂಬೂರಿ ಮಧ್ಯೆ ಕುಳಿತು ಗಾಯನ ಆರಂಭಿಸಿದರೆ ಅಕ್ಷರಶಃ ವಾಗ್ದೇವಿಯ ದರ್ಶನ. ಇದು ಸಂಗೀತ ದಿಗ್ಗಜ, ಡಾ. ಪುಟ್ಟರಾಜ ಗವಾಯಿಗಳ ಶಿಷ್ಯ ಪಂ.ಎಂ. ವೆಂಕಟೇಶಕುಮಾರ ಅವರ ಒಂದು ಸಾಲಿನ ವಿವರಣೆ. ಗೋದಿ ಬಣ್ಣದ ದುಂಡು ಮೊಗದ ವೆಂಕಟೇಶಕುಮಾರರ ಗಾಯನವೆಂದರೆ ಆಲಿಸುವವನ ಅಸ್ತಿಿತ್ವವನ್ನೇ ಕರಗಿಸಿ ಅಮೂರ್ತ ಭಾವ ಪ್ರಪಂಚದಲ್ಲಿ ಲೀನಗೊಳಿಸುವಂತಹದ್ದು. ಇಂತಹ ಸಂಗೀತ ದಿಗ್ಗಜನಿಗೆ ಈಗ 70ರ ಹರೆಯ.
1953ರ ಜು.1ರಂದು ಬಳ್ಳಾರಿಯ ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿರುವ ಲಕ್ಷ್ಮೀಪುರ ಎಂಬ ಚಿಕ್ಕಹಳ್ಳಿಯಲ್ಲಿ ಜನಿಸಿದವರು. ಜನ್ಮಭೂಮಿ ಲಕ್ಷ್ಮೀಪುರವಾದರೂ ಕರ್ಮಭೂಮಿ ಧಾರವಾಡ. ಧಾರವಾಡದಲ್ಲೀಗ ಅವರ ಶಿಷ್ಯ ಬಳಗ, ಅಭಿಮಾನಿಗಳೆಲ್ಲ ಸೇರಿಕೊಂಡು ಅವರಿಗೆ 70ನೇ ಜನ್ಮದಿನದ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ.
World Music Day : ಮೊದಲ ಬಾರಿ ಇದನ್ನ ಎಲ್ಲಿ ಮತ್ತು ಯಾಕೆ ಆಚರಿಸಲಾಯಿತು ತಿಳಿಯಿರಿ
ಗದಗದ ವೀರಪುಣ್ಯಾಶ್ರಮದಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳ ಬಳಿ ಸಂಗೀತ ಅಭ್ಯಾಸ ಮಾಡಿದ ಅವರು ಸಂಗೀತದಲ್ಲಿ ಅಪಾರ ಸಾಧನೆ ಮಾಡಿದವರು. ಅವರಿಗೆ ಭಾರತ ಸರ್ಕಾರ ಕೊಡುವ ಪದ್ಮಶ್ರೀ, ಕವಿವಿ ಗೌರವ ಡಾಕ್ಟರೇಟ್, ಗಾನಶ್ರೀ, ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ, ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ.
ಜು.1ಕ್ಕೆ ಸನ್ಮಾನ ಕಾರ್ಯಕ್ರಮ
ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಅವರ 70ರ ಸಂಭ್ರಮ ಸನ್ಮಾನ ಸಮಾರಂಭವನ್ನು ಜು.1ರಂದು ಧಾರವಾಡದ ಕರ್ನಾಟಕ ಕಾಲೇಜ್ ಆವರಣದ ‘ಸೃಜನಾ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ’ದಲ್ಲಿ ಏರ್ಪಡಿಸಲಾಗಿದೆ.
Viral Video: ಪ್ರಧಾನಿಯಿಂದಲೂ ಶೇರ್ ಆಯ್ತು ಪುಟ್ಟ ಬಾಲಕಿ ಶಾಲ್ಮಲಿಯ 'ಪಲ್ಲವಗಳ ಪಲ್ಲವಿಯಲಿ'
ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಕ್ಷಮತಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ. ಅಂದು ಸಂಜೆ 4ರಿಂದ 4.45ರವರೆಗೆ ವೆಂಕಟೇಶ ಕುಮಾರ ಕುರಿತ ನಾದದ ನವನೀತ ಎಂಬ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಗಿರೀಶ ಕಾಸರವಳ್ಳಿ ನಿರ್ದೇಶಿಸಿರುವ ಈ ಸಾಕ್ಷ್ಯಚಿತ್ರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದೆ. ಸಂಜೆ 6.30ರಿಂದ 7.30ರವರೆಗೆ ಪಂ. ವೆಂಕಟೇಶ ಕುಮಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಪಂ. ಪ್ರವೀಣ ಗೋಡ್ಖಿಂಡಿ, ರೇಖಾ ಹೆಗಡೆ ಭಾಗವಹಿಸಲಿದ್ದಾರೆ.
7.30ರಿಂದ 8.30ರ ವರೆಗೆ ಸನ್ಮಾನ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್‌ನ ಡಾ. ರಮಾಕಾಂತ ಜೋಶಿ, ಕ್ಷಮತಾದ ಗೋವಿಂದ ಜೋಶಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.