
ನವದಂಪತಿ ಅನಿರುಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ತಮ್ಮ ಮದುವೆಯ ಸಂಭ್ರಮದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ರೋಮ್ಯಾಂಟಿಕ್ ಕ್ಷಣಗಳ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ನವದಂಪತಿ ಅನಿರುಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ತಮ್ಮ ಮದುವೆಯ ಸಂಭ್ರಮದ ಮತ್ತಷ್ಟು ಸುಂದರ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಹೊಸ ಫೋಟೋಗಳಲ್ಲಿ ಇಬ್ಬರ ಕೆಮಿಸ್ಟ್ರಿ, ರೋಮ್ಯಾಂಟಿಕ್ ಕ್ಷಣಗಳು ಮತ್ತು ಸ್ಟೈಲಿಶ್ ಲುಕ್ ಎದ್ದು ಕಾಣುತ್ತಿದೆ. ಫ್ಯಾನ್ಸ್ ಈ ಕ್ಯೂಟ್ ಜೋಡಿಗೆ ಪ್ರೀತಿಯಿಂದ ಶುಭಾಶಯ ತಿಳಿಸುತ್ತಿದ್ದಾರೆ. ಅನಿರುಧ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ನನ್ನ ಫೇವರಿಟ್ ಮ್ಯಾಜಿಕ್' ಎಂಬ ಕ್ಯಾಪ್ಷನ್‌ನೊಂದಿಗೆ ಈ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಹೈಲೈಟ್ ಆದ ಕ್ಯೂಟ್ ಜೋಡಿಯ ರೋಮ್ಯಾಂಟಿಕ್ ಕ್ಷಣಗಳು
ಕಾವ್ಯಾ ಜೊತೆಗಿನ ಹಲವು ಫೋಟೋಗಳನ್ನು ಅನಿರುಧ್ ಶೇರ್ ಮಾಡಿದ್ದಾರೆ. ಚಿತ್ರಗಳಲ್ಲಿ ಈ ಜೋಡಿ ನಗುಮುಖದಿಂದ ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಕೆಲವು ಫೋಟೋಗಳಲ್ಲಿ ಇಬ್ಬರೂ ಕೈ ಹಿಡಿದು ನಡೆಯುತ್ತಿದ್ದಾರೆ. ಅವರ ಪಾರ್ಟಿ ಉಡುಗೆಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಇನ್ನು ನವೆಂಬರ್ 11ರಂದು ಗ್ರೀಸ್‌ನಲ್ಲಿ ಅನಿರುಧ್ ಮತ್ತು ಕಾವ್ಯಾ ಅವರ ವಿವಾಹ ಅತ್ಯಂತ ಸರಳವಾಗಿ ನೆರವೇರಿತ್ತು. ಕುಟುಂಬಸ್ಥರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದರು. ಮದುವೆಯ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆದಾಗಿನಿಂದ, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ಮದುವೆ ವಿಚಾರ ಮನರಂಜನಾ ಲೋಕದಲ್ಲಿ ಹಾಟ್ ಟಾಪಿಕ್ ಆಗಿದೆ. ತಮ್ಮ ನೆಚ್ಚಿನ ಜೋಡಿಯ ಹೊಸ ಜೀವನಕ್ಕೆ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.