ಮುಂಜಾರು ಮಳೆ ಗಣೇಶ್, ದುನಿಯಾ ವಿಜಿ ಒಟ್ಟಿಗೆ ಕೊಡಲಿದ್ದಾರೆ ಬ್ರೇಕಿಂಗ್ ನ್ಯೂಸ್ !

Published : Dec 06, 2017, 08:59 PM ISTUpdated : Apr 11, 2018, 01:00 PM IST
ಮುಂಜಾರು ಮಳೆ ಗಣೇಶ್, ದುನಿಯಾ ವಿಜಿ ಒಟ್ಟಿಗೆ ಕೊಡಲಿದ್ದಾರೆ ಬ್ರೇಕಿಂಗ್ ನ್ಯೂಸ್ !

ಸಾರಾಂಶ

ಮುಂಗಾರು ಮಳೆ ಮತ್ತು ದುನಿಯಾ ಕನ್ನಡ ಚಿತ್ರರಂಗದಲ್ಲಿ  ಹೊಸ ಅಲೆ ಎಬ್ಬಿಸಿದ ಸಿನಿಮಾಗಳು.  ಈ ಸಿನಿಮಾ ಮೂಲಕ ಸ್ಯಾಂಡಲ್'ವುಡ್ ನಲ್ಲಿ ಸ್ಟಾರ್ ನಟರಾದ, ಗೋಲ್ಡನ್ ಸ್ಟಾರ್ ಗಣೇಶ್, ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಬೆಂಗಳೂರು (ಡಿ.06): ಮುಂಗಾರು ಮಳೆ ಮತ್ತು ದುನಿಯಾ ಕನ್ನಡ ಚಿತ್ರರಂಗದಲ್ಲಿ  ಹೊಸ ಅಲೆ ಎಬ್ಬಿಸಿದ ಸಿನಿಮಾಗಳು.  ಈ ಸಿನಿಮಾ ಮೂಲಕ ಸ್ಯಾಂಡಲ್'ವುಡ್ ನಲ್ಲಿ ಸ್ಟಾರ್ ನಟರಾದ, ಗೋಲ್ಡನ್ ಸ್ಟಾರ್ ಗಣೇಶ್, ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.  

ಹತ್ತು ವರ್ಷಗಳ ಹಿಂದೆ ಮುಂಗಾರು ಮಳೆಯಿಂದ ಗಣೇಶ್, ದುನಿಯಾದಿಂದ ದುನಿಯಾ ವಿಜಿ ದೊಡ್ಡ ಯಶಸ್ಸಿನೊಂದಿಗೆ ಗಾಂಧಿನಗರದಲ್ಲಿ ಸದ್ದು ಮಾಡಿದ ನಟರಿಬ್ಬರಿಬ್ಬರು ಒಂದಾಗುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬ್ಲಾಕ್ ಕೋಬ್ರಾ ವಿಜಯ್, ಅಭಿಮಾನಿಗಳ ಬಹು ದಿನದ ಆಸೆಯನ್ನ ಈಡೇರಿಸೋಕ್ಕೆ ರೆಡಿಯಾಗಿದ್ದಾರೆ. ಈ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ.  

ಆಕ್ಷನ್ ಹೀರೋ ಮತ್ತು ರೊಮ್ಯಾಂಟಿಕ್  ಹೀರೋ ಇಬ್ಬರನ್ನೊಟ್ಟಿಗೆ ಸೇರಿಸಿ ನಿರ್ದೇಶಕ ಪ್ರೀತಂ ಗುಬ್ಬಿ ಸಿನಿಮಾ ಮಾಡ್ತಾ ಇದ್ದಾರೆ. ಈಗಾಗಲೇ  ಗಣೇಶ್ ಮತ್ತು ವಿಜಯ್ ಒಟ್ಟಿಗೆ ಅಭಿನಯಿಸುವ ಸಿನಿಮಾದ ಒಂದು ಲೈನ್ ಸ್ಟೋರಿಯನ್ನ ಕೇಳಿದ್ದಾರೆ. ಈ ಇಬ್ಬರು ಸ್ಟಾರ್ ಕೂಡ ಕಥೆ ಕೇಳಿ, ಒಟ್ಟಿಗೆ ಆಕ್ಟ್ ಮಾಡೋದಕ್ಕೆ  ಗ್ರೀನ್  ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾ ಗಣೇಶ್ ಬ್ಯಾನರ್'ನಲ್ಲೇ ನಿರ್ಮಾಣ ಆಗ್ತಾ ಇರೋದು ವಿಶೇಷ. ಸದ್ಯಕ್ಕೆ ವಿಜಯ್ 'ಜಾನಿ ಜಾನಿ ಎಸ್‌ ಪಪ್ಪಾ'ದಲ್ಲಿ ಚಿತ್ರದಲ್ಲಿ ಬ್ಯುಸಿ ಇದ್ದು, ಗಣೇಶ್ ಆರೇಂಜ್ ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಇಬ್ಬರ ನಟರ ಕಮಿಂಟ್ ಮೆಂಟ್ ಮುಗಿದ ನಂತರ ಈ ಸಿನಿಮಾ ಸೆಟ್ಟೇರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾದಬ್ರಹ್ಮ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 'ಜೀವಮಾನ ಸಾಧನೆ' ಪ್ರಶಸ್ತಿ
ನೀನು ದನ ಕಾಯ್ತಿದ್ದವನು, ನಿರ್ಮಾಪಕರ ರಕ್ತ ಹೀರಿ ಕೋಟಿ ಒಡೆಯನಾದೆ: ಜೋಗಿ ಪ್ರೇಮ್ ವಿರುದ್ಧ ಸಿಡಿದ ಕನಕಪುರ ಶ್ರೀನಿವಾಸ್!