ಡಾ.ವಿಷ್ಣು ಸೇನಾ ಸಮಿತಿಯಿಂದ ಸೆ.18ರಿಂದ ವಿಷ್ಣುಗೆ ರಂಗನಮನ!

By Web DeskFirst Published Sep 17, 2019, 9:02 AM IST
Highlights

ಸೆಪ್ಟೆಂಬರ್‌ 18ಕ್ಕೆ ನಟ ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಪ್ರತಿ ವರ್ಷದಂತೆಯೇ ಈ ಬಾರಿಯೂ ಕೂಡ ಡಾ. ವಿಷ್ಣು ಸೇನಾ ಸಮಿತಿಯು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. 

ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪ್ರದಾನದ ಜತೆಗೆ ಸೆಪ್ಟೆಂಬರ್‌ 18 ರಿಂದ 20 ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಡಾ.ವಿಷ್ಣುವರ್ಧನ ನಾಟಕೋತ್ಸವ’ ಆಯೋಜಿಸಿದೆ. ಬೆಳ್ಳಿತೆರೆಯ ಯಜಮಾನನಿಗೆ ರಂಗದ ಮೂಲಕ ನಮನ ಸಲ್ಲಿಸುವುದು ಈ ಬಾರಿಯ ವಿಶೇಷ.

ಸಿನಿಮಾ ನಿರ್ಮಾಣಕ್ಕಿಳಿದ ವಿಷ್ಣು ಸೇನಾ ಅಧ್ಯಕ್ಷ ಶ್ರೀನಿವಾಸ್!

ನಾಟಕೋತ್ಸವದ ಮೊದಲ ದಿನ ಸಂಜೆ 4 ಗಂಟೆಗೆ ಉದ್ಘಾಟನೆ ಮತ್ತು ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವಿದೆ. ಈ ವರ್ಷದ ಡಾ.ವಿಷ್ಣುವರ್ಧನ್‌ ರಾಷ್ಟ್ರೀಯ ಪ್ರಶಸ್ತಿ ರಮೇಶ್‌ ಅವರಿಗೆ ಸಂದಿದೆ. ಎಸ್‌. ನಾರಾಯಣ್‌, ಟಿ.ಎಸ್‌. ನಾಗಾಭರಣ, ನಟ ರಮೇಶ್‌ ಅರವಿಂದ್‌, ಮಂಡ್ಯ ರಮೇಶ್‌, ಗೀತೆ ರಚನೆಕಾರ ನಾಗೇಂದ್ರ ಪ್ರಸಾದ್‌, ರವಿ ಶ್ರೀವತ್ಸ ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ. ಅಂದೇ ಸಂಜೆ 6.30ಕ್ಕೆ ನಟನ ತಂಡದಿಂದ ‘ಚೋರ ಚರಣದಾಸ’ ನಾಟಕವಿದೆ. ಸೆ. 19ಕ್ಕೆ ಐಎಎಸ್‌/ ಕೆಎಎಸ್‌ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ರಂಗಭೂಮಿ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಿದೆ.

ವಿಷ್ಣು ಸ್ಮಾರಕ ವದಂತಿ ಸುಳ್ಳು; ಅಲ್ಲೇ ನಡೆಯಲಿದೆ ಮೂರು ದಿನ ಕಾರ್ಯಕ್ರಮ!

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನುಬಳಿಗಾರ್‌, ಪತ್ರಕರ್ತ ವಿಶ್ವೇಶ್ವರ ಭಟ್‌, ಸಾಹಿತಿ ಜೋಗಿ, ನಟ ಶರತ್‌ ಲೋಹಿತಾಶ್ವ, ಸಾಧನಾ ಕೋಚಿಂಗ್‌ ಅಕಾಡೆಮಿ ಸಂಸ್ಥಾಪಕಿ ಡಾ. ಜ್ಯೋತಿ, ರಂಗ ಕರ್ಮಿಗಳಾದ ನಯನ ಸೂಡ, ಹನುಮಕ್ಕ, ಮುರುಡಯ್ಯ, ಆನಂದ್‌ ಡಿ. ಕಳಸ, ಬೇಲೂರು ರಘನಂದನ್‌ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಸಂಜೆ 5.30ರಿಂದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಹಾಗೂ ‘ಶರೀಫ’ ನಾಟಕ ಪ್ರದರ್ಶನವಿದೆ. ಸೆಪ್ಟೆಂಬರ್‌ 20ಕ್ಕೆ ನಾಟಕೋತ್ಸವದ ಸಮಾರೋಪ ಸಮಾರಂಭ ಮತ್ತು ಕನ್ನಡ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವಿದೆ. ಸಚಿವ ಎಸ್‌. ಸುರೇಶ್‌ ಕುಮಾರ್‌, ಸಾಹಿತಿ ಎಚ್‌.ಎಸ್‌. ವೆಂಕಟೇಶ್‌ ಮೂರ್ತಿ, ಕಲಾವಿದ ದತ್ತಣ್ಣ, ಸುಚೇಂದ್ರ ಪ್ರಸಾದ್‌ ಸೇರಿದಂತೆ ಹಲವರು ಪಾಲ್ಗೊಳ್ಳುತ್ತಿದ್ದಾರೆ. ನಾಟಕೋತ್ಸವದ ಕಡೆಯ ನಾಟಕಗಳಾಗಿ ‘ವೇಷ’ ಮತ್ತು ‘ಗುಲಾಬಿ ಗ್ಯಾಂಗು’ ರಂಗ ಪ್ರಯೋಗಗಳಿವೆ. ರಾಜ್ಯದ ಎಲ್ಲಾ ಕಡೆಗಳಿಂದಲೂ ನಾಟಕ ತಂಡಗಳು ಪಾಲ್ಗೊಳ್ಳುತ್ತಿವೆ.

click me!