
'ರಾಮಾಯಣ' ಸಿನಿಮಾ ಭಾರೀ ಸಕ್ಸಸ್ ಕಾಣ್ತಿದೆ. ಈ ನಡುವೆ ಹಿರಿಯ ನಟ ಮುಖೇಶ್ ಖನ್ನಾ ಮತ್ತೆ ಸಿನಿಮಾ ಕುರಿತು ಗಂಭೀರ ಟೀಕೆಗಳನ್ನ ಮಾಡಿದ್ದಾರೆ. ಈ ಹಿಂದೆ ಮುಖೇಶ್ ಖನ್ನಾ, ಚಿತ್ರದಲ್ಲಿ ತೋರಿಸಲಾಗಿರುವ ಸೀತೆ ಪಾತ್ರದ ಬಗ್ಗೆ ಚಕಾರ ಎತ್ತಿದ್ದರು. ಸೀತೆಯು ಕತ್ತಿ ಹಿಡಿದು ರಾಕ್ಷಸರ ವಿರುದ್ಧ ಹೋರಾಡುವ ದೃಶ್ಯವನ್ನು ತೋರಿಸಿದ್ದಾರೆ. ಚಿತ್ರದಲ್ಲಿ ಸೀತೆಯನ್ನ ಯೋಧೆಯಂತೆ ಚಿತ್ರೀಕರಿಸಲಾಗಿದೆ ಎಂದು ಗುಡುಗಿದ್ದರು.
ಸೀತೆ ಪಾತ್ರದ ಕುರಿತು ಟೀಕೆ ಮಾಡಿದ ಬೆನ್ನಲ್ಲೇ ಎಎನ್‌ಐ ಸುದ್ದಿ ಸಂಸ್ಥೆಯು ಮುಖೇಶ್ ಖನ್ನಾ ಅವರ ಜೊತೆ ವಿಶೇಷ ಮಾತುಕತೆ ನಡೆಸಿತ್ತು. ರಾಮಾಯಣ ಸಿನಿಮಾಗೆ 4000 ಕೋಟಿ ಬಜೆಟ್ ಅಗತ್ಯ ಇದೆಯಾ? ಸಿನಿಮಾದ ಅದ್ದೂರಿ ತನದ ಹೆಸರಲ್ಲಿ ಕಥೆಯ ಮೂಲ ಮತ್ತು ಭಾವನೆಗಳನ್ನ ಇಲ್ಲಿ ಬಲಿ ಕೊಡಲಾಗಿದೆ. ಇದೆಲ್ಲ ಪ್ರೇಕ್ಷಕರ ಗಮನ ಸೆಳೆಯಲು ಮಾಡುತ್ತಿರುವ ಗಿಮಿಕ್. ನೀವು ಮೂಲ ಕಥೆ ಮತ್ತು ಭಾವನೆಗಳನ್ನ ಬಲಿಕೊಟ್ಟರೆ, ಅಷ್ಟೆಲ್ಲ ಮಾಡಿಯೂ ವ್ಯರ್ಥ. ಈಗ ಸಿನಿಮಾ ಸಾವಿರ ಕೋಟಿ ಹಣ ಗಳಿಸಿರಬಹುದು. ಆದರೆ ಅಷ್ಟೊಂದು ಹಣ ಗಳಿಸಿದರೂ ನನಗೆ ಅದು ವ್ಯರ್ಥ ಎಂದು ಭಾಸವಾಗುತ್ತಿದೆ ಎಂದು ಮುಖೇಶ್ ಖನ್ನಾ ಅವರು ಕಿಡಿಕಾರಿದ್ದಾರೆ.
ಇದಕ್ಕೊಂದು ಸಮಿತಿ ಬೇಕು
ಮಾತು ಮುಂದುವರಿಸಿ.. ಪೌರಾಣಿಕ ಸಿನಿಮಾಗಳಿಂದ ಭಾವನೆಗಳಿಗೆ ದಕ್ಕೆ ಆಗಬಾರದು ಮತ್ತು ಮೂಲ ಕಥೆ ಬದಲಾಗಬಾರದು ಅಂದರತೆ.. ಇಂಥ ಸಿನಿಮಾಗಳು ಜನರ ಮುಂದೆ ಬರುವ ಮೊದಲು ತಜ್ಞರ ವಿಶ್ಲೇಷಣೆ ಆಗಬೇಕು. ಅದಕ್ಕಾಗಿ ವಿದ್ವಾಂಸರ ಸಮಿತಿ ಇರಬೇಕು. ಅದಕ್ಕಾಗಿ ಸರ್ಕಾರ ಪ್ರತ್ಯೇಕ ಆಯೋಗವನ್ನು ರಚಿಸಬೇಕು. ನಾವು ರಾಮಾಯಣ, ಮಹಾಭಾರತ ಮತ್ತು ಇತರೆ ಪೌರಾಣಿಕ ವಿಷಯಗಳನ್ನ ತೆಗೆದುಕೊಳ್ಳುವಾಗ ಎಚ್ಚರದಿಂದ ಕೆಲಸ ಮಾಡಬೇಕು ಎಂದಿದ್ದಾರೆ.
ಸಾಯಿ ಪಲ್ಲವಿ ಅಭಿನಯಿಸಿದ್ದ ಸೀತಾ ಪಾತ್ರದ ಕುರಿತು ಮತ್ತೆ ಪುನರುಚ್ಚರಿಸಿ.. ಚಿತ್ರದಲ್ಲಿ ಸೀತಾ ಮಾತೆ ಕತ್ತಿ ಹಿಡಿದು ಹೋರಾಡುವ ಅಸಂಬಂಧ ದೃಶ್ಯವನ್ನ ತೋರಿಸಿದ್ದಾರೆ. ಅದರ ಬಗ್ಗೆ ಮತ್ತೆ ನಾನು ಮಾತನ್ನಾಡುವ ಅಗತ್ಯ ಇಲ್ಲ. ಪೌರಾಣಿಕ ಸಿನಿಮಾ ಮಾಡುವಾಗ ಧರ್ಮ ಮತ್ತು ನಂಬಿಕೆಯ ಪ್ರಶ್ನೆ ಬರುತ್ತದೆ. ಯಾರೂ ಕೂಡ ಭಾವನೆಗಳ ಜೊತೆ ಆಟವಾಡಿ, ಧರ್ಮದ ಜೊತೆಗೂ ಆಟವಾಡಬಾರದು ಎಂದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಖನ್ನಾ.. ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋ ಹಿಂದೂ ದೇವರುಗಳನ್ನ ತೋರಿಸುವ ರೀತಿಯನ್ನ ಟೀಕಿಸಿದ್ದರು. ಜೊತೆಗೆ ರಾಮಾಯಣ ಬದಲಾಗಿ, ಅದು ‘ರಾವಣಾಯಣ’ ಎಂದು ಜರಿದಿದ್ದರು. ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾವು ನವೆಂಬರ್ 5 ರಂದು ರಿಲೀಸ್ ಆಗಿದೆ.. ಇವತ್ತಿಗೂ ಸಿನಿಮಾ ಮಂದರಿಗಳಲ್ಲಿ ಓಡುತ್ತಿಎ. ಯಶ್ ರಾವಣನಾಗಿ ನಟಿಸಿದ್ರೆ ರಣಬೀರ್ ಕಪೂರ್ ರಾಮನಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಸಾಯಿ ಪಲ್ಲವಿ ಅವರು ಸೀತೆ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.