'ಆಕೆ ಹೇಳಿದ್ದಕ್ಕೆ ಕರೆದುಕೊಂಡು ಬಂದೆ, ಸಿನಿಮಾ ಹೆಂಗಿದೆ ಅಂದ್ರೆ' ಪ್ರೇಮದ ಊರಲ್ಲಿ ವೀಕ್ಷಿಸಿ ಡಾ.ಮಂಜುನಾಥ್ ಮಾತು

Published : Oct 07, 2026, 10:38 PM IST
dr cn manjunath watches premada oorali cinema

ಸಾರಾಂಶ

ಹೊಸಬರ 'ಪ್ರೇಮದ ಊರಲ್ಲಿ' ಸಿನಿಮಾ ಯಾವುದೇ ಸ್ಟಾರ್ ನಟರಿಲ್ಲದೆ ಗೂಗಲ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ. 15 ವರ್ಷಗಳ ಬಳಿಕ ಸಂಸದ ಡಾ. ಸಿಎನ್ ಮಂಜುನಾಥ್ ದಂಪತಿ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಸುಂದರ ಸಿನಿಮಾ ‘ಪ್ರೇಮದ ಊರಲ್ಲಿ’ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ . ಸೆಪ್ಟೆಂಬರ್ 25, 2026ರಂದು ರಾಜ್ಯಾದ್ಯಂತ ತೆರೆಕಂಡಿರುವ ಚಿತ್ರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಸಂಸದ, ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ಕೂಡ ಸಿನಿಮಾ ನೋಡಿ ಖುಷಿ ಆಗಿದ್ದಾರೆ.

ಏನಂದ್ರು ಡಾ. ಮಂಜುನಾಥ್?

ತಮ್ಮ ಪತ್ನಿ ಅನುಸೂಯ ಜೊತೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ನೋಡಿದ ಬಳಿಕ ಆದರ್ಶ ದಂಪತಿ ಫುಲ್ ಖುಷಿಯಾಗಿದೆ. ಮಾಧ್ಯಮಗಳ ಜೊತೆ ಮಾತನ್ನಾಡಿರುವ ಅವರು.. ನಾನು ಕೊನೆ ಸಿನಿಮಾ ನೋಡಿದ್ದು ಟಂ ಟಂ ಅಂತಾ. ಸುಮಾರು 15 ವರ್ಷಗಳಿ ಆಗಿ ಹೋಗಿದೆ. ಈ ಸಿನಿಮಾ ನೋಡೋದಕ್ಕೆ ಒತ್ತಾಯ ಮಾಡಿದ್ದೇ ನನ್ನ ಹೆಂಡತಿ ಎಂದರು. ಈ ವೇಳೆ ಡಾ.ಮಂಜುನಾಥ್ ಅವರ ಪತ್ನಿ ಮಾತನ್ನಾಡಿ, ನಾವು ಮನೆಯಲ್ಲೂ ಕೂಡ ಸಿನಿಮಾ ನೋಡಲ್ಲ. ಸಿನಿಮಾ ನೋಡೋಣ ಅಂತಾ ಹೇಳಿದ್ದೇ ನಾನು. ಸಿನಿಮಾ ತುಂಬಾ ಚೆನ್ನಾಗಿದೆ. ಖುಷಿ ಆಯಿತು ಆದರ್ಶ ದಂಪತಿ ಮಾತನ್ನಾಡಿದ್ದಾರೆ.

View on Threadsಒಂದು ಸಿನಿಮಾದ ಕಥೆ ಎಷ್ಟೇ ಚೆನ್ನಾಗಿದ್ದರೂ, ಅದರ ಹಾಡುಗಳು ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದುಕೊಂಡರೆ ಸಿನಿಮಾದ ಕ್ರೇಜ್ ಮತ್ತಷ್ಟು ಹೆಚ್ಚಾಗುತ್ತದೆ. ಕನ್ನಡ ಚಿತ್ರರಂಗದಲ್ಲೂ ‘ಹಾಡು ಹಿಟ್ ಆದರೆ ಸಿನಿಮಾ ಅರ್ಧ ಗೆದ್ದಂತೆ’ ಎಂಬ ಮಾತಿದೆ. ಇದೀಗ ಈ ಮಾತು ‘ಪ್ರೇಮದ ಊರಲಿ’ ಸಿನಿಮಾದ ವಿಚಾರದಲ್ಲಿ ಅಕ್ಷರಶಃ ನಿಜವಾಗುತ್ತಿದೆ. ಮನೋಜ್ ಕುಮಾರ್ ಹೆಣೆದ ಪ್ರೇಮಕಥೆಗೆ ಸಂಗೀತ ನಿರ್ದೇಶಕ ಸುನಾದ್ ಗೌತಮ್ ನೀಡಿರುವ ಸಂಗೀತ ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರದ ಬಹುತೇಕ ಹಾಡುಗಳು ಹಿಟ್ ಆಗಿವೆ.

ಹೊಸಬರ ಸಣ್ಣ ಬಜೆಟ್‌ನ ಕನ್ನಡ ಸಿನಿಮಾ 'ಪ್ರೇಮದ ಊರಲಿ' ಯಾವುದೇ ಸ್ಟಾರ್ ನಟರಿಲ್ಲದೆ ಭಾರಿ ಯಶಸ್ಸು ಗಳಿಸಿದೆ. ಉತ್ತಮ ಕಥೆ ಮತ್ತು ನಿರೂಪಣೆಯಿಂದ ಪ್ರೇಕ್ಷಕರ ಮನಗೆದ್ದಿರುವ ಈ ಚಿತ್ರ, ಗೂಗಲ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕೆಲವೊಮ್ಮೆ ಯಾವುದೇ ದೊಡ್ಡ ಸ್ಟಾರ್‌ಗಳ ಹಂಗಿಲ್ಲದೆ, ಭಾರಿ ಬಜೆಟ್‌ಗಳ ಬೆಂಬಲವಿಲ್ಲದೆ ಬಂದ ಸಿನಿಮಾಗಳೇ ಪ್ರೇಕ್ಷಕರ ಮನಸ್ಸಿನಲ್ಲಿ ದೊಡ್ಡ ಜಾಗ ಪಡೆದುಕೊಳ್ಳುತ್ತವೆ.

ಇದೀಗ ಅಂತಹದ್ದೇ ಒಂದು ಅಚ್ಚರಿಯ ಯಶಸ್ಸಿನ ಕಥೆ ‘ಪ್ರೇಮದ ಊರಲಿ’ ಸಿನಿಮಾದಿಂದ ಬರೆಯಲ್ಪಡುತ್ತಿದೆ. ಬಹುತೇಕ ಹೊಸಬರೇ ಸೇರಿಕೊಂಡು ನಿರ್ಮಿಸಿರುವ ಈ ಸರಳ-ಸುಂದರ ಕನ್ನಡ ಸಿನಿಮಾ ಬಿಡುಗಡೆಯಾದ ಬಳಿಕ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇದೀಗ ಕರ್ನಾಟಕದ ಗಡಿಯನ್ನು ದಾಟಿ ದೇಶದಾದ್ಯಂತ ಚರ್ಚೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಗೌರಿ ಪುತ್ರ'ದಲ್ಲಿ ರಿತ್ವಿಕ್‌ಗೆ ಅಮ್ಮನಾಗಿ ಎಂಟ್ರಿಕೊಟ್ಟ ಅನು ಪ್ರಭಾಕರ್, ನಾಯಕಿಯಾಗಿ 'ಗಟ್ಟಿಮೇಳ' ಸುಂದರಿ!
ಕಿಯರಾ ಅಡ್ವಾಣಿ ಪ್ರಗ್ನೆಂಟ್ ಎಂದು ಗೊತ್ತಾದಾಗ ಯಶ್ ರಿಯಾಕ್ಷನ್ ಹೇಗಿತ್ತು?