ವರ್ಷಾರಂಭದಲ್ಲಿ ಸ್ಯಾಂಡಲ್‌ವುಡ್ ಚಿತ್ರಗಳದ್ದೇ ಕಲರವ...

Published : Dec 20, 2018, 03:24 PM IST
ವರ್ಷಾರಂಭದಲ್ಲಿ ಸ್ಯಾಂಡಲ್‌ವುಡ್ ಚಿತ್ರಗಳದ್ದೇ ಕಲರವ...

ಸಾರಾಂಶ

ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ, ಹೊಸ ತನದ ಅಲೆ ಸೃಷ್ಟಿ ಮಾಡುತ್ತಿರುವುದು ಕೇವಲ ಬೆರಳಿಕೆಯಷ್ಟು ಮಾತ್ರ. ಜನವರಿಯಲ್ಲಿ ರಿಲೀಸ್‌ ಆಗಲು ಸಿದ್ಧವಾಗಿರೋ ಚಿತ್ರಗಳು ಹೇಗಿರುತ್ತೆ?

ಹೊಸ ವರ್ಷದಲ್ಲಿ ಹೊಸತನ ತರಲು ಸ್ಯಾಂಡಲ್‌ವುಡ್ ಮುಂದಾಗಿದೆ. ಸ್ಟಾರ್ ನಟರು ತಮ್ಮ ಚಿತ್ರಗಳನ್ನು ಜನವರಿಯಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಹಾಗಾದರೆ ಎಲ್ಲಾ ಚಿತ್ರ ಮಂದಿರಗಳಲ್ಲಿಯೂ ಕನ್ನಡ ಚಿತ್ರಗಳದೇ ಕಲರವ ಎಂದಾಯ್ತು...

 

2018ರಲ್ಲಿ ಚಿತ್ರೀಕರಣಗೊಂಡ ಬಿಗ್ ಬಜೆಟ್ ಸಿನಿಮಾಗಳಾದ 'ನಟ ಸಾರ್ವಭೌಮ', 'ಕವಚ', 'ಸೀತರಾಮ ಕಲ್ಯಾಣ' ಹಾಗು 'ಕಲಾವಿದರು' ತೆರೆಗೆ ಬರಲಿವೆ. ಸ್ಟಾರ್ ನಟರ ಅಭಿಮಾನಿಗಳು ತುದಿಗಾಲಲ್ಲಿ ನಿಂತು, ಈ ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಪತ್ರಕರ್ತನಾಗಿ ಪವರ್ ಸ್ಟಾರ್: ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ಪವನ್ ಒಡೆಯರ್ ನಿರ್ದೇಶನದ ಚಿತ್ರ 'ನಟಸಾರ್ವಭೌಮ' ಸಹಜವಾಗಿ ವಿಪರೀತ ನಿರೀಕ್ಷೆಗಳನ್ನು ಹುಟ್ಟಿಸಿದೆ. ಪವರ್‌ಸ್ಟಾರ್ ಪುನೀತ್ ಈ ಚಿತ್ರದಲ್ಲಿ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದು, ರಚಿತಾ ರಾಮ್ ಹಾಗೂ ಅನುಪಮಾ ಮಿಂಚಿದ್ದಾರೆ.

ರಿಮೇಕ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ.... ಇನ್ನು 'ಕಿಲ್ಲಿಂಗ್ ವೀರಪ್ಪನ್' ಚಿತ್ರ ನಿರ್ಮಾಪಕ ಸುಧೀಂದ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯಲ್ಲಿ 'ಕವಚ' ನಿರ್ಮಿಸುತ್ತಿದ್ದಾರೆ. ಅದರಲ್ಲಿಯೂ 15 ವರ್ಷಗಳ ನಂತರ ರಿಮೇಕ್ ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ನಟಿ ಇಶಾ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ.

ಸಿಎಂ ಮಗನ ಸೀತಾರಾಮ ಕಲ್ಯಾಣ... ನಿಖಿಲ್ ಕುಮಾರಸ್ವಾಮಿಯ ಎರಡನೇ ಚಿತ್ರ 'ಸೀತಾರಾಮ ಕಲ್ಯಾಣ'ವಂತೂ ಸಹಜವಾಗಿಯೇ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟರಾದ ಸಂಜಯ್ ಕಪೂರ್ ಹಾಗೂ 'ಮೇನೆ ಪ್ಯಾರ್ ಕೀಯಾ' ಖ್ಯಾತಿಯ ಭಾಗ್ಯಶ್ರೀಯಂಥ ನಟರೂ ಅಭಿನಯಿಸಿದ್ದು, ಹೇಗಿರಬಹುದೆಂಬ ಕುತೂಹಲ ಕಾಡುತ್ತಿದೆ. ಗುಳಿ ಚೆಲುವೆ ರಚಿತಾ ರಾಮ್ ಮುದ್ದು ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಣಕ್ಕೂ ಜೈ ಎಂದ ಪವರ್ ಸ್ಟಾರ್ ಪವರ್ ಸ್ಟಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಕವಲು ದಾರಿ' ಚಿತ್ರಕ್ಕೆ ರಿಷಿ ನಾಯಕ. ಈಗಾಗಲೇ 'ಆಪರೇಷನ್ ಅಲುಮೇಲಮ್ಮ' ಚಿತ್ರದ ಮೂಲಕ ಎಲ್ಲರಿಗೂ ಪರಿಚಯವಿರೋ ರಿಷಿಗೆ ಈ ಚಿತ್ರದಲ್ಲಿ ರೋಶನಿ ಪ್ರಕಾಶ್ ನಾಯಕಿ. ಅನಂತ್‌ನಾಗ್ ಹಾಗೂ ಸುಮನ್ ರಂಗನಾಥ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಗಳು ರಿಲೀಸ್‌ಗೆ ಸಾಲಾಗಿ ನಿಂತಿದ್ದು, ಇನ್ನೂ ಕೆಲವು ಈ ಪಟ್ಟಿಗೆ ಸೇರುವ ನಿರೀಕ್ಷೆ ಇದೆ. ಇವುಗಳಲ್ಲಿ ಯಾವ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿಯುತ್ತೆ ಎಂಬುದನ್ನು ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?