ಸಚಿವ ಲೇಔಟ್ ಕೃಷ್ಣಪ್ಪ ಸಂಬಂಧಿ ಚಿತ್ರರಂಗಕ್ಕೆ!

Published : Jun 05, 2019, 11:35 AM IST
ಸಚಿವ  ಲೇಔಟ್ ಕೃಷ್ಣಪ್ಪ ಸಂಬಂಧಿ ಚಿತ್ರರಂಗಕ್ಕೆ!

ಸಾರಾಂಶ

ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಯ ಅಭಿಮಾನಿಯ ಕುರಿತೇ ‘ಫ್ಯಾನ್’ ಎಂಬ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ,ರಿಲೀಸ್‌ಗೆ ರೆಡಿ ಆಗಿದೆ.   

ಆ ಚಿತ್ರದೊಂದಿಗೆ ಮತ್ತೊರ್ವ ಯುವ ಪ್ರತಿಭೆ ಬೆಳ್ಳಿತೆರೆಗೆ ಹೀರೋ ಎಂಟ್ರಿ ಆಗುತ್ತಿದ್ದಾರೆ. ಹೆಸರು ಆರ್ಯನ್. ಮಾಜಿ ಸಚಿವ ಹಾಗೂ ಶಾಸಕ ಲೇಔಟ್ ಕೃಷ್ಣಪ್ಪ ಅವರ ದೂರದ ಸಂಬಂಧಿ. ಎಂಬಿಎ ವಿದ್ಯಾಭ್ಯಾಸದ ನಂತರ ಭಗವಾನ್ ಆ್ಯಕ್ಟಿಂಗ್ ತರಬೇತಿ ಸಂಸ್ಥೆಯಲ್ಲಿ ನಟನೆಯ ತರಬೇತಿ ಪಡೆದು ನಟನಾಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.

ಆಸಕ್ತಿಯಿಂದಲೇ ಬಂದ ಹುಡುಗ:

‘ಆ್ಯಕ್ಟಿಂಗ್ ಮೇಲೆ ಆಸೆ ಇತ್ತು. ಎಂಬಿಎ ಮುಗಿದ ತಕ್ಷಣ ಆ್ಯಕ್ಟಿಂಗ್ ತರಬೇತಿಗೆ ಸೇರಿದ್ದೆ. ಭಗವಾನ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದಷ್ಟು ತರಬೇತಿ ಪಡೆದ ನಂತರ ಅವಕಾಶಗಳತ್ತ ಎದುರು ನೋಡುತ್ತಿದ್ದಾಗ ನಿರ್ದೇಶಕ ದರ್ಶಿತ್ ಸರ್ ಸಿಕ್ಕರು. ಅವರ ಮೂಲಕ ಸಿಕ್ಕ ಅವಕಾಶವಿದು’ ಎನ್ನುತ್ತಾರೆ ಆರ್ಯನ್.

ನಟನೆ,ನಿರ್ದೇಶನದಲ್ಲಿ ಆಸಕ್ತಿ ಇದ್ಯಾ? ಎಸ್ ನಾರಾಯಣ್ ಅಕಾಡೆಮಿ ನಿಮಗಾಗಿ ತೆರೆದಿದೆ!

ಆರ್ಯಗೆ ಇಲ್ಲಿ ಅದ್ವಿತಿ ಜೋಡಿ:

ಮಧುಮಗಳು, ದೊಡ್ಮನೆ ಸೊಸೆ ಧಾರಾವಾಹಿಗಳನ್ನು ನಿರ್ದೇಶಿಸಿರುವ ದರ್ಶಿತ್ ನಿರ್ದೇಶನದ ಚಿತ್ರವಿದು. ಆರ್ಯಗೆ ಇಲ್ಲಿ ನಾಯಕಿ ಆಗಿ ಅದ್ವಿತಿ ಶೆಟ್ಟಿ ಜೋಡಿ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?
ಪ್ರಶಸ್ತಿ ಸಮಾರಂಭಕ್ಕೆ ‘ಡ್ಯೂಪ್’ ಕಳಿಸಿ ಬೇಸ್ತು ಬೀಳಿಸಿದ್ರಾ ನಟಿ ಅದಾ ಶರ್ಮಾ..? ‘AI ತದ್ರೂಪು’ ಕಳಿಸಿದ್ದು ನಿಜಾನಾ?