
ನಟನೆ, ನಿರ್ದೇಶನ, ನೃತ್ಯ, ಸಾಹಸ ಸೇರಿದಂತೆ ಚಿತ್ರರಂಗಕ್ಕೆ ಪ್ರವೇಶ ಮಾಡಲು ಬೇಕಾಗ ತರಬೇತಿಗಳನ್ನು ನೀಡುವುದಕ್ಕಾಗಿಯೇ ಹುಟ್ಟಿಕೊಂಡಿರುವ ಅಕಾಡೆಮಿ ಇದು.
ಹಿರಿಯ ನಿರ್ದೇಶಕ ಎಸ್. ನಾರಾಯಣ್ ಪ್ರಾಂಶುಪಾಲರಾಗಿರುವ ನವರಸ ನಟನ ಅಕಾಡೆಮಿಯ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಸಂರ್ಭದಲ್ಲಿ ತನ್ನ ಎರಡನೇ ಶಾಖೆ ಆರಂಭಿಸುತ್ತಿದೆ. ಕಲ್ಯಾಣನಗರದಲ್ಲಿ ನವರಸ ನಟನ ಅಕಾಡೆಮಿ ನೂತನ ಶಾಖೆ ಜೂನ್ 10ರಿಂದ ಮೊದಲ ಬ್ಯಾಚ್ ಶುರುವಾಗಲಿದೆ. ಇಲ್ಲಿ ಮೊದಲನೇ ವರ್ಷದಲ್ಲಿ ತರಬೇತಿ ಪಡೆದ ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಕಿರುತೆರೆ, ಹಿರಿತೆರೆ ಹಾಗೂ ವೆಬ್ ಸರಣಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
2019 ರ ಡಿಮ್ಯಾಂಡಿಂಗ್ ಕೆಲಸಗಳು ಯಾವುವು ಗೊತ್ತಾ?
ವಾರ ಪೂರ್ತಿ ಹಾಗೂ ವಾರಂತ್ಯದ ತರಗತಿಗಳು ನಡೆಯಲಿದ್ದು, ಈ ಶಾಖೆಯಲ್ಲಿ ಆರು ತಿಂಗಳ ಕಾಲ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಈಜು, ನೃತ್ಯ,ಫೈಟಿಂಗ್ ಮತ್ತು ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಜೊತೆಗೆ ಬೀದಿ ನಾಟಕ, ಸಂಕಲನ ಹಾಗೂ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿ ತರಬೇತುಗೊಳಿಸಲಿದ್ದು, ಜೂನ್ 10ರಿಂದ ಮೊದಲನೇ ತಂಡದ ತರಗತಿ ಪ್ರಾರಂಭವಾಗಲಿದೆ.
‘ನೂತನ ಶಾಖೆಯಲ್ಲಿ ಆರು ತಿಂಗಳ ಕೋರ್ಸ್ ಇರಲಿದ್ದು, ಒಂದಷ್ಟುಹೊಸ ವಿಷಯಗಳನ್ನು ಸೇರಿಸಿಕೊಂಡಿದ್ದೇವೆ. ನಮ್ಮ ಸಂಸ್ಥೆಗೆ ಬಂದ ವಿದ್ಯಾರ್ಥಿಗಳು ಪರಿಪೂರ್ಣವಾಗಿ ಸಿದ್ಧರಾಗಿ ಹೋಗಬೇಕೆಂಬುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಸಾಕಷ್ಟುಮುತುವರ್ಜಿ ತೆಗೆದುಕೊಳ್ಳಲಿದ್ದೇವೆ. ನಿರ್ದೇಶಕ ಎಸ್ ಮಹೇಂದರ್, ರಂಗಭೂಮಿಯ ನುರಿತವರಿಂದ ತರಬೇತಿ ಕೊಡಿಸಲಿದ್ದೇವೆ. ಹಾಗೆಯೇ ವಿದ್ಯಾರ್ಥಿಗಳು ತರಬೇತಿ ಮುಗಿದ ಬಳಿಕ ಒಂದು ನಾಟಕ ಪ್ರದರ್ಶನ ಮತ್ತು ಕಿರುಚಿತ್ರ ಮಾಡಿ ತೋರಿಸಬೇಕು. ಇದಕ್ಕೆ ಬೇಕಾದ ತಯಾರಿ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಎಸ್ ನಾರಾಯಣ್.
ಪ್ರೊಫೆಷನಲ್ ಫೋಟೋಗ್ರಾಫರ್ ಆಗೋ ಆಸೆ ಇದ್ರೆ ಟ್ರೈ ಮಾಡಿ
ಹೆಚ್ಚಿನ ಮಾಹಿತಿಗಾಗಿ: ಮೊ.ಸಂ. 98802 19666 / 98804 19666.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.