
ಬೆಂಗಳೂರು (ಅ.05) ಪ್ರೇಮದ ಊರಲಿ ಸಿನಿಮಾ ಹೊಸ ದಾಖಲೆ ನಿರ್ಮಾಣ ಮಾಡಿದೆ. 3 ಕೋಟಿ ರೂಪಾಯಿ ಬಜೆಟ್ ಸಿನಿಮಾ ಇದೀಗ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪರಿಣಾಮ ಬಾಯಿಮಾತಿನಿಂದಲೇ ಚಿತ್ರಕ್ಕೆ ಪ್ರಚಾರ ಸಿಗುತ್ತಿದೆ. ಚಿತ್ರ ಹೌಸ್‌ಫುಲ್ ಆಗಿ ಮುನ್ನುಗ್ಗುತ್ತಿದೆ. ವಿಶೇಷ ಅಂದರೆ ಈ ಸಿನಿಮಾದ ಸೂಪರ್ ಹಿಟ್ ಟೈಟಲ್ ಸಾಂಗ್ ಹಾಡಿದ್ದು ಪುಟಾಣಿ ಮಕ್ಕಳು. ಈ ಪುಟಾಣಿ ಮಕ್ಕಳು ಯಾರು ಅನ್ನೋದು ಬಹಿರಂಗವಾಗಿದೆ.
ಪ್ರೇಮದ ಊರಲಿ ಹೃದಯದ ತೇರಲಿ ಅನ್ನೋ ಟೈಟಲ್ ಸಾಂಗ್‌ನ್ನು ಪುಟಾಣಿ ಮಕ್ಕಳು ಹಾಡಿದ್ದಾರೆ. ವಿಶೇಷ ಅಂದರೆ ಇವರ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಆಗಿದ್ದ ಪುಟಾಣಿ ಮಕ್ಕಳ ಡ್ಯಾನ್ಸಿಂಗ್ ಟೀಚರ್ ಮಂಗಳೂರಿನ ವಂದನಾ ರೈ ಕೂಡ ಹಾಡಿದ್ದಾರೆ. ಪ್ರೇಮದ ಊರಲಿ ಸಿನಿಮಾ, ಸಿನಿಮಾದ ಹಾಡು, ಚಿತ್ರೀಕರಣಗೊಂಡ ಸ್ಥಳ, ಡೈಲಾಗ್ ಸೇರಿದಂತೆ ಪ್ರತಿಯೊಂದು ಭಾರಿ ವೈರಲ್ ಆಗುತ್ತಿದೆ. ಈ ಪೈಕಿ ಮಕ್ಕಳ ಹಾಡು ಇದೀಗ ಹೊಸ ಫ್ಯಾನ್ ಬೇಸ್ ಪಡೆದುಕೊಂಡಿದೆ.
ಮಕ್ಕಳ ಸುಮಧುರ ಕಂಠದಲ್ಲಿ ಮೂಡಿಬಂದ ಈ ಹಾಡು ಭಾರಿ ವೈರಲ್ ಆಗಿದೆ. ಪುಟಾಣಿಗಳು ಹಾಡುತ್ತಿರುವ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪ್ರೇಮದ ಊರಲಿ ಹೃದಯದ ತೇರಲಿ ಹಾಡಿನ ಹಿಂದಿರುವ ಧ್ವನಿ ಇವರದ್ದೆ ಎಂದು ವಿಡಿಯೋ ವೈರಲ್ ಆಗುತ್ತಿದೆ. ಹಳ್ಳಿ ಸೊಗಡು, ಮುಗ್ದ ಪ್ರೀತಿ ಎಲ್ಲವೂ ಈ ಸಿನಿಮಾದಲ್ಲಿದೆ. ಇದಕ್ಕೆ ಮಕ್ಕಳ ಹಾಡಿದ ಹಾಡು ಕೂಡ ಸೇರಿಕೊಂಡಿದ್ದು, ಜನರ ಮನ ತಟ್ಟಿದೆ. ಈ ಹಾಡು ಪ್ರೇಮದ ಊರಲಿ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕ ಗುನುಗುತ್ತಿದ್ದಾನೆ. ಅಷ್ಟರ ಮಟ್ಟಿಗೆ ಭಾವನಾತ್ಮಕವಾಗಿ ಬೆಸೆದು ಹೋಗಿದೆ.
ಪ್ರೇಮದ ಊರಲಿ ಸಿನಿಮಾ ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಸದ್ದು ಗದ್ದಲ ಇರಲಿಲ್ಲ. ಚಿತ್ರದಲ್ಲಿ ಬಿಗ್ ಸ್ಟಾರ್‌ಗಳು ಇಲ್ಲ. ಹೀಗಾಗಿ ಪ್ರಚಾರದ ಅಬ್ಬರವೂ ಇರಲಿಲ್ಲ. ನಾಯಕನಾಗಿ ಶ್ರೀರಾಮ್ ಕಾಣಿಸಿಕೊಂಡರೆ, ತಪಸ್ಪಿನಿ ಪೂಣಚ್ಚ ಹಾಗೂ ರುಮಿಕಾ ಶಿವು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 25ರಂದು ರಾಜ್ಯದಲ್ಲಿ ಈ ಸಿನಿಮಾ ತೆರೆಕಂಡಿತ್ತು. ಮನೋಜ್ ಕುಮಾರ್ ನಿರ್ದೇಶನದ ಈ ಸಿನಿಮಾ ಇದೀಗ ಸೂಪರ್ ಹಿಟ್ ಆಗಿದೆ. 2026ರಲ್ಲಿ ಲಾಭದಾಯಕ ಸಿನಿಮಾಗಳಲ್ಲ ಪ್ರೇಮದ ಊರಲಿ ಸಿನಿಮಾ ಕೂಡ ಸೇರಿಕೊಂಡಿದೆ.
ಪ್ರೇಮದ ಊರಲಿ ಸಿನಿಮಾ ರಾಜ್ಯದೆಲ್ಲೆಡೆ ಪ್ರದರ್ಶನ ಕಾಣುತ್ತಿದೆ. ವಿಶೇಷ ಅೆಂದರೆ ಇದೀಗ ಈ ಸಿನಿಮಾ ಮೇಲೆ ಇತರ ಭಾಷೆ ಸಿನಿ ರಂಗದ ದಿಗ್ಗಜರು ಈ ಸಿನಿಮಾ ಹಕ್ಕು ಪಡೆದು ರಿಮೇಕ್ ಮಾಡಲು ಮುಂದಾಗಿದ್ದಾರೆ. ಪ್ರೇಮದ ಊರಲಿ ಬಾಲಿವುಡ್‌ಗೆ ಲಗ್ಗೆ ಇಡುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.