ಅಕ್ಟೋಬರ್ 23ಕ್ಕೆ ನಟಿ ಚೈತ್ರಾ ಆಚಾರ್ ಮನೆಮನೆಗೂ ಬರೋ ಸುದ್ದಿ ನಿಜವೇ? ಪಡ್ಡೆ ಹುಡುಗ್ರು ಫುಲ್ ಖುಷ್!

Published : Oct 17, 2026, 05:23 PM IST
Chaithra Achar

ಸಾರಾಂಶ

23 ಅಕ್ಟೋಬರ್ 2026 ರಂದು ಕನ್ನಡದ ನಟಿ ಚೈತ್ರಾ ಆಚಾರ್ ದೇಶ-ವಿದೇಶಗಳಲ್ಲಿನ ಮನೆಮನೆಗಳಲ್ಲಿ, ಎಲ್ಲಾ ಮೊಬೈಲ್‌ಗಳಲ್ಲಿ ದರ್ಶನ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜವೇ? ಈ ವೈರಲ್ ನ್ಯೂಸ್ ಅಸಲಿಯತ್ತೇನು ನೋಡಿ!

ಪಡ್ಡೆ ಹುಡುಗ್ರು ಫುಲ್ ಖುಷಿಯಾಗೋ ಈ ಸುದ್ದಿ ನೋಡಿ..!

ಅಕ್ಟೋಬರ್ 23ಕ್ಕೆ ನಟಿ ಚೈತ್ರಾ ಆಚಾರ್ ಮನೆಮನೆಗೂ ಬರೋ ಸುದ್ದಿ ನಿಜವೇ? ಪಡ್ಡೆ ಹುಡುಗ್ರು ಫುಲ್ ಖುಷಿಯಾಗೋ ಈ ಸುದ್ದಿಯ ಅಸಲಿಯತ್ತು ನೋಡಿ..

2017ರಲ್ಲಿ ಬಿಡುಗಡೆಯಾಗಿ ಯುವ ಪ್ರೇಕ್ಷಕರ ಮನಗೆದ್ದಿದ್ದ ‘ಮೀಸಯ ಮುರುಕ್ಕು’ (Meesaya Murukku 2) ಚಿತ್ರದ ಮುಂದುವರಿದ ಭಾಗ ‘ಮೀಸಯ ಮುರುಕ್ಕು 2’ ಇದೀಗ ಒಟಿಟಿ ಬಿಡುಗಡೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಸಂಗೀತ, ಪ್ರೀತಿ, ಹಾಸ್ಯ ಮತ್ತು ಜೀವನದ ಹೋರಾಟಗಳನ್ನು ಒಳಗೊಂಡಿರುವ ಈ ತಮಿಳು ಮ್ಯೂಸಿಕಲ್ ಕಾಮಿಡಿ-ಡ್ರಾಮಾ ಸಿನಿಮಾ ಡಿಜಿಟಲ್ ವೇದಿಕೆಯಲ್ಲಿ ಗಮನ ಸೆಳೆಯುವ ನಿರೀಕ್ಷೆಯಿದೆ.

ಕನ್ನಡದ ನಟಿ ಚೈತ್ರಾ ಆಚಾರ್

ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಪ್‌ಹಾಪ್ ತಮಿಳ ಆದಿ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಮೊದಲ ಭಾಗದ ಯಶಸ್ಸಿನ ಬಳಿಕ ಬಂದಿರುವ ಈ ಸೀಕ್ವೆಲ್‌ನಲ್ಲಿ ಆದಿ ಜೊತೆಗೆ ಕೇತಿಕಾ ಶರ್ಮಾ, ಕನ್ನಡದ ನಟಿ ಚೈತ್ರಾ ಆಚಾರ್ (Chaithra J Achar), ರಮ್ಯಾ ರಂಗನಾಥನ್, ನಾಸರ್ ಮತ್ತು ಕರುಣಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ‘ಮೀಸಯ ಮುರುಕ್ಕು 2’ ಅಕ್ಟೋಬರ್ 23ರಿಂದ ಸೋನಿಲಿವ್‌ನಲ್ಲಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ವೀಕ್ಷಕರು ನಿಖರವಾದ ಬಿಡುಗಡೆ ಸಮಯ ಮತ್ತು ಲಭ್ಯತೆಯ ಕುರಿತು ಅಧಿಕೃತ ವೇದಿಕೆಯಲ್ಲಿ ಪರಿಶೀಲಿಸಬಹುದು.

ಚಿತ್ರದ ಕಥೆ ತನ್ನ ಸಂಗೀತ ಪ್ರತಿಭೆಯನ್ನು ಜಗತ್ತಿನಾದ್ಯಂತ ಪರಿಚಯಿಸಿ, ತಕ್ಕ ಮನ್ನಣೆ ಗಳಿಸಬೇಕೆಂಬ ಕನಸು ಕಾಣುವ ಯುವ ಸಂಗೀತಗಾರನ ಸುತ್ತ ಸಾಗುತ್ತದೆ. ಆತನ ಕನಸುಗಳು, ಪ್ರಯತ್ನಗಳು, ಸಂಬಂಧಗಳು ಮತ್ತು ಎದುರಾಗುವ ಸವಾಲುಗಳು ಕಥೆಗೆ ಜೀವ ತುಂಬುತ್ತವೆ. ಚಿತ್ರದ ಹಾಡುಗಳು ಮತ್ತು ಸಂಗೀತವೂ ಪ್ರಮುಖ ಆಕರ್ಷಣೆಗಳಾಗಿವೆ.

ನೇರ ನುಡಿಯ ಮಹಿಳೆಯ ಪಾತ್ರ

ಇನ್ನು ಕನ್ನಡದ ನಟಿ ಚೈತ್ರಾ ಆಚಾರ್ ಲಚ್ಚುಮಿ ಎಂಬ ನೇರ ನುಡಿಯ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಗಾಯಕ ದಾಸ್ ಪಾತ್ರ ನಿರ್ವಹಿಸಿರುವ ಆದಿ ಅವರ ಪತ್ನಿಯಾಗಿ ಕಾಣಿಸಿಕೊಳ್ಳುವ ಲಚ್ಚುಮಿ, ತನ್ನ ಗಂಡನ ಬೆಂಬಲಕ್ಕೆ ಸದಾ ನಿಲ್ಲುವ ವ್ಯಕ್ತಿ. ಅಗತ್ಯ ಬಿದ್ದರೆ ಆತನ ತಪ್ಪುಗಳನ್ನು ನೇರವಾಗಿ ಪ್ರಶ್ನಿಸುವ ಧೈರ್ಯವೂ ಆಕೆಯಲ್ಲಿದೆ.

ಒಟ್ಟಿನಲ್ಲಿ, ಸಂಗೀತದ ಮೋಡಿ, ಪ್ರೇಮಕಥೆ ಮತ್ತು ಹಾಸ್ಯದ ಸಮ್ಮಿಶ್ರಣವಾಗಿರುವ ‘ಮೀಸಯ ಮುರುಕ್ಕು 2’ ಒಟಿಟಿ ಪ್ರೇಕ್ಷಕರಿಗೆ ಮನರಂಜನೆಯ ಹೊಸ ಅನುಭವ ನೀಡಲು ಸಜ್ಜಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನಾ ಪಾಟೇಕರ್ ವಿರುದ್ಧ ಮೀ-ಟೂ ಎಂದ ತನುಶ್ರೀ ದತ್ತಾ! ಪುತ್ರ ಕಿಡಿ; ಅಪ್ಪನ ಸಾವಿನ ಸಂದೇಹಕ್ಕೆ ಮಗ ಮೌನವೇಕೆ
ನನಗಾಗಿ ನಾನು ಡ್ರೆಸ್ ಮಾಡಿಕೊಳ್ಳುತ್ತೇನೆ: ರಿಮೋಟ್ ನಿಮ್ಮ ಕೈಯಲ್ಲೇ ಇರಲಿ ಎಂದಿದ್ಯಾಕೆ ನಟಿ ಸಮೀರಾ!