ಖ್ಯಾತ ನಟಿ ಮಯೂರಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 32 ವರ್ಷದ ಅಶುತೋಷ್ ಬುಧವಾರ ತಮ್ಮ32ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖ್ಯಾತ ನಟಿ ಮಯೂರಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 32 ವರ್ಷದ ಅಶುತೋಷ್ ಬುಧವಾರ ತಮ್ಮ32ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರಾಠಿ ನಟ ಅಶುತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಚಾರ್ ತರ್ಲಾ ಪಕ್ಕಾ, ಭಕರ್ ಸಿನಿಮಾ ಮೂಲಕ ಫೇಮಸ್ ಆದ ನಟ ಅಶುತೋಷ್ ಬುಧವಾರ ತಮ್ಮ ಸ್ವಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ
32 ವರ್ಷ ವಯಸ್ಸಾಗಿತ್ತು.
ನಟ ಸುಶಾಂತ್ ಸಿಂಗ್‌ನನ್ನು ಕೊಲೆ ಮಾಡಲಾಗಿದೆ ಎಂದ ಬಿಜೆಪಿ ಸಂಸದ..!
ಪತ್ನಿ ಮಯೂರಿ ಅತ್ತೆಯೊಂದಿಗೆ ಮಾತನಾಡುತ್ತಿದ್ದಾಗ, ನಾನು ಮಲಗುತ್ತೇನೆ ಎಂದು ಕೋಣೆಗೆ ಹೋಗಿದ್ದ ಅಶುತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಂಬಾ ಹೊತ್ತಾದರೂ ಅಶುತೋಷ್ ಏಳದಿದ್ದಾಗ ಮನೆಯವರು ಬಾಗಿಲು ಬಡಿದಿದ್ದಾರೆ. ನಟ ಕೋಣೆಯನ್ನು ಒಳ ಭಾಗದಿಂದ ಲಾಕ್ ಮಾಡಿಕೊಂಡಿದ್ದರು.
ಕಿಟಿಕಿಯ ಮೂಲಕ ನೋಡಿದಾಗ ನಟ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ. ತಕ್ಷಣ ಆಸ್ಪತ್ರೆಗೆ ಸೇರಿಲಾಗಿದ್ದರೂ, ಆಗಾಗಲೇ ನಟ ಮೃತಪಟ್ಟಿದ್ದರು. ರಾತ್ರಿ 1.30ರ ವೇಳೆ ನಮಗೆ ಸುದ್ದಿ ತಿಳಿದಿದೆ. ಘಟನೆ ಸಂಬಂಧ ಕೇಸು ದಾಖಲಿಸಲಾಗಿದೆ. ನಟನ ತಂದೆಯ ಹೇಳಿಕೆ ದಾಖಲಿಸಿದ್ದು, ಇದರಲ್ಲಿ ಸಾವಿಗೆ ಸಂಬಂಧಿಸಿ ಯಾರ ಹೆಸರನ್ನೂ ಹೇಳಿಲ್ಲ ಎಂದು ಶಿವಾಜಿ ನಗರ ಪೊಲೀಸ್ ಠಾಣೆ ಅಧಿಕಾರಿ ಪಿಐ ಅನಂತ್ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಬಿಗ್ ಟ್ವಿಸ್ಟ್, ಪ್ರೇಯಸಿ ರಿಯಾ ನಾಪತ್ತೆ!
[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]