‘ಜೈಲರ್‌ 2’ನಲ್ಲಿ ನಟಿ ಬಾನಿಗೆ ಡ್ಯೂಪ್‌ ಆರ್ಟಿಸ್ಟ್‌ ಆಗಿ ‘ಮಂಗಳೂರಿನ ಯಶಸ್ವಿನಿ ದೇವಾಡಿಗ’

Published : Oct 25, 2026, 08:17 AM IST
Jailer Yashaswini Devadiga

ಸಾರಾಂಶ

ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದಲ್ಲಿ ಮಂಗಳೂರಿನ ಯಶಸ್ವಿನಿ ದೇವಾಡಿಗ ಅವರು ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಮಿಸ್ ಟೀನ್ ಸೂಪರ್ ಗ್ಲೋಬ್ ಕಿರೀಟ ಗೆದ್ದಿರುವ ಇವರು ಟಾಕ್ಸಿಕ್, ಡೆವಿಲ್ ಮುಂತಾದ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ.

ಮಂಗಳೂರು: ಯಶಸ್ವಿ ಪ್ರದರ್ಶನ ನೀಡುತ್ತಿರುವ ರಜನಿಕಾಂತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಜೈಲರ್‌ 2’ ಚಲನಚಿತ್ರದಲ್ಲಿ ಮಂಗಳೂರು ಮೂಲದ ಯಶಸ್ವಿನಿ ದೇವಾಡಿಗ ಡ್ಯೂಪ್‌ ಆರ್ಟಿಸ್ಟ್‌ ಆಗಿ ನಟಿಸಿ, ಅಪರೂಪದ ಅವಕಾಶ ಪಡೆದು ಗಮನಸೆಳೆದಿದ್ದಾರೆ.

ಮಾಡೆಲ್‌ ಬಾನಿ ಜೆ ಅವರ ಡ್ಯೂಪ್‌ ಆರ್ಟಿಸ್ಟ್‌

ಜೈಲರ್‌ 2 ಚಿತ್ರದಲ್ಲಿ ಮಂಗಳೂರಿನ ಯಶಸ್ವಿನಿ ದೇವಾಡಿಗ ಅವರು ಬಾಲಿವುಡ್‌ ನಟಿ ಮತ್ತು ಮಾಡೆಲ್‌ ಬಾನಿ ಜೆ ಅವರ ಡ್ಯೂಪ್‌ ಆರ್ಟಿಸ್ಟ್‌ ಆಗಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ಮೂಲಕ ಯಶಸ್ವಿನಿ ಅವರು ರಜನಿಕಾಂತ್‌, ಹೃತಿಕ್‌ ರೋಷನ್‌, ರಮ್ಯಾಕೃಷ್ಣನ್‌, ವಿದ್ಯಾಬಾಲನ್‌ ಅವರಂತಹ ಖ್ಯಾತರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಯಶಸ್ವಿನಿ ಅವರು ಟಾಕ್ಸಿಕ್‌, ಡೆವಿಲ್‌, ಕಲ್ಟ್‌ ಸಿನೆಮಾಗಳಲ್ಲೂ ನಟಿಸಿದ್ದಾರೆ. ಡ್ಯೂಪ್‌ ಮಾತ್ರವಲ್ಲದೇ ಮುಖ ಪರಿಚಯದೊಂದಿಗೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.

ಮಿಸ್‌ ಟೀನ್‌ ಸೂಪರ್‌ ಗ್ಲೋಬ್‌ ವಿನ್ನರ್

ಯಶಸ್ವಿನಿ ದೇವಾಡಿಗ ಅವರು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, 2023ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್‌ ಟೀನ್‌ ಸೂಪರ್‌ ಗ್ಲೋಬ್‌ ಕಿರೀಟ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಸದ್ಯ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಶೇಷ 3 In 1 ಟ್ಯಾಟೂ ಹಾಕಿಸಿಕೊಂಡ ನಂದಗೋಕುಲದ ನಟಿ ಅರ್ಪಿತಾ, ರೇಖೆಯಲ್ಲುಂಟು ಜೀವ
ವಿಜಯ್ ದೇವರಕೊಂಡ-ರಶ್ಮಿಕಾ ನಡುವೆ ಎಲ್ಲವೂ ಸರಿಯಿಲ್ವಾ? Instagram ಆನ್‌ಫಾಲೋ ಮಾಡಿದ್ದೇಕೆ? ದಂಪತಿ ಬಗ್ಗೆ ಹರಿದಾಡ್ತಿದೆ ಶಾಕಿಂಗ್ ರೂಮರ್!