ಶಿವಣ್ಣ ನಿರ್ಮಾಣದ ಧಾರಾವಾಹಿ ಫೆ.26ಕ್ಕೆ ಶುರು

By Suvarna Web Desk  |  First Published Feb 20, 2018, 6:56 PM IST

ಶಿವಣ್ಣ ನಿರ್ಮಾಣದ ಧಾರಾವಾಹಿ ಫೆ.26ಕ್ಕೆ ಶುರು


ಶಿವ​ರಾ​ಜ್‌​ಕು​ಮಾರ್‌ ನಿರ್ಮಾ​ಣದ ಧಾರಾ​ವಾಹಿ ‘ಮಾನಸ ಸರೋ​ವ​ರ’ ಇದೇ ಫೆ.26ರಿಂದ ಸೋಮ​ವಾ​ರ​ದಿಂದ ಶುಕ್ರ​ವಾ​ರದವರೆಗೆ ರಾತ್ರಿ 9.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾ​ರ​ವಾ​ಗಲಿದೆ. ಶ್ರೀನಾಥ್‌, ಪದ್ಮ​ವಾ​ಸಂತಿ, ರಾಮ​ಕೃಷ್ಣ ಹಾಗೂ ಪ್ರಜ್ವಲ್‌, ಶಿಲ್ಪಾ, ಶ್ರುತಿ ನಟಿ​ಸಿ​ದ್ದಾರೆ.

ಜಯ​ಶೀಲ್‌ ವೈದ್ಯ ನಿರ್ದೇಶನ, ರವಿ ಕಿಶೋರ್‌ ಛಾಯಾ​ಗ್ರಾ​ಹಣ ಇದೆ. ಧಾರಾ​ವಾ​ಹಿಯ ಹತ್ತು ಕಂತು​ಗಳ ಕತೆ​ಯನ್ನು ಸ್ವತಃ ಶಿವ​ರಾ​ಜ್‌​ಕು​ಮಾರ್‌ ಹೊಸೆ​ದಿ​ದ್ದಾರೆ. ಜೊತೆಗೆ ಧಾರಾವಾಹಿ ತಂಡ ಕ್ವಿಜ್‌ ಸ್ಪರ್ಧೆ ನಡೆಸುತ್ತಿದೆ.

Tap to resize

Latest Videos

ಫೆ.19ರಿಂದ ಮಾಚ್‌ರ್‍ 2ರವರೆಗೆ ಪ್ರತಿದಿನ ಮಾನಸ ಸರೋವರ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸರಿಯಾದ ಉತ್ತರ ಕೊಟ್ಟು ಜಯಶಾಲಿಗಳಾಗುವವರು ಶಿವಣ್ಣ ಮತ್ತು ಧಾರಾ​ವಾಹಿ ತಂಡದ ಜತೆ​ಗಿನ ಔತ​ಣ​ಕೂ​ಟ​ದಲ್ಲಿ ಭಾಗ​ವ​ಹಿ​ಸ​ಬ​ಹುದು.

click me!