ನಿಮ್ಮೂರಲ್ಲಿ ’ಮಗಳು ಜಾನಕಿ; ಸಂವಾದ; ಪ್ರಶ್ನೆ ಕೇಳಿ

Published : Nov 13, 2018, 06:48 PM IST
ನಿಮ್ಮೂರಲ್ಲಿ ’ಮಗಳು ಜಾನಕಿ; ಸಂವಾದ; ಪ್ರಶ್ನೆ ಕೇಳಿ

ಸಾರಾಂಶ

ಶುರುವಾಗಲಿದೆ ಮಗಳು ಜಾನಕಿ ಧಾರಾವಾಹಿಯ ಮೊದಲ ಸಂವಾದ | ನಿಮ್ಮ ಪ್ರಶ್ನೆ ಕೇಳಲು, ಸಲಹೆ ನೀಡಲು ಮುಕ್ತ ಅವಕಾಶ | ಬನ್ನಿ ಭಾಗವಹಿಸಿ 

ಬೆಂಗಳೂರು (ನ. 13): ವಿಭಿನ್ನ ಕಥಾ ಹಂದರದ ಮೂಲಕ ಮನೆ ಮನೆಗಳನ್ನು ಗೆದ್ದಿರುವ ಟಿ ಎಮ್ ಸೀತಾರಾಮ್ ಅವರ ಧಾರಾವಾಗಿ ’ಮಗಳು ಜಾನಕಿ’ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಿದೆ. ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ.

ಬದಲಾದ ಸನ್ನಿವೇಶದಲ್ಲಿ ನಿರಂಜನ್ ಜೊತೆ ಮಗಳು ಜಾನಕಿ ಮದುವೆಯಾಗಿದೆ. ತನ್ನ ಗಂಡ ಐಎಎಸ್ ಅಧಿಕಾರಿಯಲ್ಲ ಎಂಬ ಸತ್ಯ ಜಾನಕಿಗೆ ಗೊತ್ತಾಗಿದೆ. ದಾಂಪತ್ಯ ಮುರಿದು ಬಿದ್ದಿದ್ದು ವಿಚ್ಛೇದನದವರೆಗೆ ಬಂದು ನಿಂತಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಸದ್ಯ ಪ್ರೇಕ್ಷಕರದ್ದು. 

ಮಗಳು ಜಾನಕಿ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮವನ್ನು  ನವೆಂಬರ್ 18 ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಅಲ್ಲಿನ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಕ್ಕೆ ಸಂವಾದ ಆರಂಭವಾಗಲಿದೆ. 
'ಕಲೆಕ್ಷನ್ಸ್ ಎಂ.ಜಿ.ಎಂ ಸ್ಕ್ವೇರ್ , ಎಂ.ಸಿ.ಸಿ ’ಬಿ’ ಬ್ಲಾಕ್ ದಾವಣಗೆರೆ ಮತ್ತು ಬಾಪೊಜಿ ಸಂಭಾಂಗಣದ ಮುಂಭಾಗ ಪಾಸ್ ಗಳು ದೊರೆಯಲಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್