
ಒಂದು ಕಾಲದಲ್ಲಿ ಪ್ರೇಕ್ಷಕರ ಹಾಟ್ ಫೇವರಿಟ್ ಆಗಿದ್ದ ನಟಿ ಮಧು ಶಾ, ಅಲಿಯಾಸ್ ಮಧುಬಾಲಾ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 1997ರಲ್ಲಿ ತೆರೆಕಂಡ 'ಯಶ್ವಂತ್' ಸಿನಿಮಾ ಶೂಟಿಂಗ್ ವೇಳೆ ನಡೆದ ಒಂದು ಘಟನೆಯನ್ನು ಅವರು ಈಗ ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಸಹನಟ ನಾನಾ ಪಾಟೇಕರ್ ತಮ್ಮ ಕೆನ್ನೆಗೆ ಬಾರಿಸಿದ್ದರ ಬಗ್ಗೆ ಮಧುಬಾಲಾ ಮಾತನಾಡಿದ್ದು, ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.
ಅಳುವ ದೃಶ್ಯವೊಂದರಲ್ಲಿ ಗ್ಲಿಸರಿನ್ ಬಳಸಲು ನಾನಾ ಪಾಟೇಕರ್ ಬಿಡಲಿಲ್ಲ, ಬದಲಿಗೆ ಸಹಜವಾಗಿ ಅಳು ಬರಲಿ ಎಂದು ನನ್ನ ಕೆನ್ನೆಗೆ ಜೋರಾಗಿ ಹೊಡೆದರು ಅಂತ ಮಧುಬಾಲಾ ಹೇಳಿದ್ದಾರೆ. ನಾನಾ ಪಾಟೇಕರ್ ಜೊತೆ ನಟಿಸಿಯೇ ನಾನು ಮೆಥಡ್ ಆಕ್ಟರ್ ಆಗಿದ್ದು. ಒಂದು ದೃಶ್ಯದಲ್ಲಿ ನಾನು ಅಳಬೇಕಿತ್ತು. ಆದರೆ ಗ್ಲಿಸರಿನ್ ಬಳಸಲು ಅವರು ಬಿಡಲಿಲ್ಲ. 'ನೀನು ಈ ನೋವನ್ನು ಫೀಲ್ ಮಾಡಬೇಕು, ಕಣ್ಣೀರು ತಾನಾಗಿಯೇ ಬರಬೇಕು' ಅಂದರು. ಆದರೆ ನನಗೆ ಅಳಲು ಸಾಧ್ಯವಾಗಲಿಲ್ಲ.
ಆಗ ಅವರು ನಿಜವಾಗಿಯೂ ನನ್ನ ಕೆನ್ನೆಗೆ ಹೊಡೆದುಬಿಟ್ಟರು. ಅದು ತುಂಬಾ ರೊಚ್ಚಿಗೆದ್ದು ಹೊಡೆದ ಹಾಗೆ ಇತ್ತು. ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅವರ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು. ನಾವು ಆ ಸೀನ್‌ಗೆ ತುಂಬಾ ರಿಹರ್ಸಲ್ ಮಾಡಿದ್ದೆವು ಎಂದು ಮಧುಬಾಲಾ ವಿವರಿಸಿದ್ದಾರೆ. ರಿಹರ್ಸಲ್ ಮಾಡುವಾಗ ಅವರು ಹೀಗೆ ಮಾಡಿರಲಿಲ್ಲ. ಆದರೆ ಟೇಕ್ ವೇಳೆ ಇದ್ದಕ್ಕಿದ್ದಂತೆ ಕೆನ್ನೆಗೆ ಹೊಡೆದಿದ್ದು ನನಗೆ ಶಾಕ್ ಆಯ್ತು. ನನಗೆ ಬೇಗ ಕೋಪ ಬರುತ್ತೆ.
ನಾನು ಕೂಡ ಅವರ ಕೆನ್ನೆಗೆ ತಿರುಗಿ ಹೊಡೆದೆ. ಅವರು ಹೊಡೆದಾಗ ನನಗೆ ಆದ ತಕ್ಷಣದ ಪ್ರತಿಕ್ರಿಯೆ ಅದು. ಆ ಸಿನಿಮಾದ ಅತ್ಯಂತ ಪ್ರಮುಖ ದೃಶ್ಯ ಅದಾಗಿತ್ತು. ನಿರ್ದೇಶಕ ಅನಿಲ್ ಮಟ್ಟೂ ಆ ದೃಶ್ಯಕ್ಕಾಗಿ ಪೂರ್ತಿ ಒಂದು ದಿನ ಮೀಸಲಿಟ್ಟಿದ್ದರು. ಆದರೆ ಈ ಘಟನೆಯಿಂದಾಗಿ ಅರ್ಧ ದಿನದಲ್ಲೇ ಶೂಟಿಂಗ್ ಮುಗಿದುಹೋಯ್ತು. 'ಇದಕ್ಕಿಂತ ಚೆನ್ನಾಗಿ ಸೀನ್ ಹೇಗೆ ಬರಲು ಸಾಧ್ಯ' ಅಂತ ನಿರ್ದೇಶಕರು ಖುಷಿಪಟ್ಟರು ಎಂದು ಮಧುಬಾಲಾ 'ಹಿಂದಿ ರಶ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.