ಪ್ರಥಮ್ ರಿಷಿಕಾ ಲಾಂಗ್ ಡ್ರೈವ್...: ಪ್ರಥಮ್ ರಿಷಿಕಾ ಲಾಂಗ್ ಡ್ರೈವ್!

Published : Feb 11, 2017, 07:23 AM ISTUpdated : Apr 11, 2018, 01:02 PM IST
ಪ್ರಥಮ್ ರಿಷಿಕಾ ಲಾಂಗ್ ಡ್ರೈವ್...: ಪ್ರಥಮ್ ರಿಷಿಕಾ ಲಾಂಗ್ ಡ್ರೈವ್!

ಸಾರಾಂಶ

ಡ್ರೈವ್‌ ಮಾಡ್ಸೋನು ಮ್ಯಾಲೆ ಕುಂತವ್ನೆ ಅಂತ ಪ್ರಥಮ್‌ ಹಾಡಿದರೂ, ಎಲ್ಲಾನೂ ಬಿಗ್‌ಬಾಸೇ ಮಾಡಿಸಿದ್ದು ಅಂತ ರಿಷಿಕಾ ಹೇಳಿದರೂ, ಕತೆಯೊಂದು ಶುರುವಾಗಿ ಮುಗಿದಿದೆ. ಪ್ರಯಾಣವೊಂದು ಕೊನೆಯಾಗಿದೆ. ಖಾಸಗಿ ಪ್ರಯಾಣವನ್ನೂ ಇಬ್ಬರೂ ಸೇರಿ ಲೈವ್‌ ರಿಲೇ ಮಾಡಿದ್ದಾರೆ. ಮುಚ್ಚಿಟ್ಟರಲ್ಲವೇ ಕುತೂಹಲ? ಎಲ್ಲರಿಗೂ ಗೊತ್ತಾಗುವಂತೆ ತೆರೆದ ಪುಸ್ತಕದಂತಿದ್ದರೆ ಯಾರೇನು ಮಾಡಿಯಾರು?

ಬೆಂಗಳೂರು(ಫೆ.11): ಡ್ರೈವ್‌ ಮಾಡ್ಸೋನು ಮ್ಯಾಲೆ ಕುಂತವ್ನೆ ಅಂತ ಪ್ರಥಮ್‌ ಹಾಡಿದರೂ, ಎಲ್ಲಾನೂ ಬಿಗ್‌ಬಾಸೇ ಮಾಡಿಸಿದ್ದು ಅಂತ ರಿಷಿಕಾ ಹೇಳಿದರೂ, ಕತೆಯೊಂದು ಶುರುವಾಗಿ ಮುಗಿದಿದೆ. ಪ್ರಯಾಣವೊಂದು ಕೊನೆಯಾಗಿದೆ. ಖಾಸಗಿ ಪ್ರಯಾಣವನ್ನೂ ಇಬ್ಬರೂ ಸೇರಿ ಲೈವ್‌ ರಿಲೇ ಮಾಡಿದ್ದಾರೆ. ಮುಚ್ಚಿಟ್ಟರಲ್ಲವೇ ಕುತೂಹಲ? ಎಲ್ಲರಿಗೂ ಗೊತ್ತಾಗುವಂತೆ ತೆರೆದ ಪುಸ್ತಕದಂತಿದ್ದರೆ ಯಾರೇನು ಮಾಡಿಯಾರು?

ಪ್ರಥಮ್‌ -ರಿಷಿಕಾ ಸಿಂಗ್‌ ಮಾಡಿದ್ದು ಅದನ್ನೇ. ಹಳೇ ಒಪ್ಪಂದದಂತೆ ಇಬ್ಬರ ಲಾಂಗ್‌ ಡ್ರೈವು ಪ್ರೋಗ್ರಾಮ್‌ ಮುಗಿದಿದೆ. ಬೆಂಗಳೂರು ಬಿಟ್ಟು, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ ಮಾರ್ಗವಾಗಿ ಮೈಸೂರು ತಲುಪಿದವರು, ಚಾಮುಂಡೇಶ್ವರಿ ದರ್ಶನದ ನಂತರವೇ ಊಟ-ತಿಂಡಿ ಹಾಗೂ ಶಾಪಿಂಗ್‌ ಮುಗಿಸಿದ್ದಂತೆ. ಪ್ರಥಮ್‌ ಅಂದುಕೊಂಡಂತೆ ಸ್ಟಾರ್‌ ಹೋಟೆಲ್‌ನಲ್ಲಿಯೇ ಸಸ್ಯಾಹಾರದ ಸುಖ ಭೋಜನವೂ ಆಯಿತ್ತಂತೆ. ರಿಷಿಕಾ ನಾನ್‌ವೆಜ್‌ ತಿಂದ್ರಂತೆ. ಲಾಂಗ್‌ಡ್ರೈವ್‌ ಮುಗಿಸಿಕೊಂಡು ಗುರುವಾರ ರಾತ್ರಿಯೇ ಬೆಂಗಳೂರಿಗೆ ವಾಪಾಸ್‌ ಆಗಿದೆ ಈ ಜೋಡಿ. ಇದಕ್ಕೂ ಮೊದಲು ಅವರಿಬ್ಬರು ಮೈಸೂರಿನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲೂ ಭಾಗಿಯಾಗಿದ್ದರಂತೆ. ಅದೇನೆ ಇದ್ದರೂ ಈ ಲಾಂಗ್‌ ಡ್ರೈವ್‌ನ ಕುತೂಹಲದ ಸಂಗತಿ ಏನಂದ್ರೆ ಅವರಿಬ್ಬರ ಗೆಳೆತನದ ಕುರಿತು.

ಲಾಂಗ್‌ಡ್ರೈವ್‌ಗೆ ಹೊರಟು ಕಾರಿನಲ್ಲಿ ಕುಳಿತ ಮೊದಲ ದಿನ ಅವರಿಬ್ಬರು ಅರ್ಧ ದಾರಿಯಲ್ಲಿದ್ದರು. ಆಗ ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡರು. ಆಗಲೇ ಅವರಿಬ್ಬರ ಲಾಂಗ್‌ಡ್ರೈವ್‌ ಸಮಾಚಾರ ಗೊತ್ತಾಗಿದ್ದು. ಹಾಗೆ, ಇಬ್ಬರು ಲೈವ್‌ನಲ್ಲಿ ಸಿಕ್ಕರೆ ಕೇಳಬೇಕೆ? ಆಗ ಕೆಲವು ಇಂಟೆರೆಸ್ಟಿಂಗ್‌ ಪ್ರಶ್ನೆಗಳು ಅಭಿಮಾನಿಗಳಿಂದ ಕೇಳಿಬಂದವು. ಲಾರ್ಡ್‌ ಪ್ರಥಮ್‌ ಸಾರ್‌.. ಎನ್ನುತ್ತಲೇ ಅವರೊಂದಿಗೆ ಮಾತಿಗಿಳಿಯುತ್ತಿದ್ದ ಅಭಿಮಾನಿಗಳು ಆರಂಭದಲ್ಲಿಯೇ ಕೇಳುತ್ತಿದದ್ದು ಒಂದೇ ಪ್ರಶ್ನೆ ಆಗಿತ್ತು. ನೀವಿಬ್ಬರೂ ಬರೀ ಸ್ನೇಹಿತರಾ ಅಥವಾ ಪ್ರೇಮಿಗಳಾ? ಬೆಂಗಳೂರಿನಿಂದ ರಾಹುಲ್‌ ಎನ್ನುವವರು ಕೇಳಿದ ಪ್ರಶ್ನೆ ಹೀಗಿತ್ತು. ನೀವಿಬ್ಬರು ಮದುವೆ ಆಗ್ತಿರೋದು ನಿಜವೇ? ಎಂದು ಕೇಳಿದ್ದು ಕೊಳ್ಳೆಗಾಲದ ಕೃಷ್ಣ. ಸಮ್‌ಥಿಂಗ್‌ ಸಮ್‌ಥಿಂಗ್‌ ಎನ್ನುವುದು ಕೇವಲ ಗಾಸಿಪ್‌ ಮಾತ್ರವಾ? ದೂರದ ಬೀದರ್‌, ಹುಬ್ಬಳ್ಳಿ, ಬೆಳಗಾವಿಯಿಂದಲೂ ಲೈವ್‌ಗೆ ಸಿಕ್ಕ ಕೆಲವರು ಕೇಳುತ್ತಿದದ್ದು ಇಂಥದ್ದೇ ಪ್ರಶ್ನೆ. ಅವುಗಳಿಗೆಲ್ಲ ಮೊದಲು ಉತ್ತರವಾಗುತ್ತಿದ್ದರು ನಟಿ ರಿಷಿಕಾ ಸಿಂಗ್‌.

‘ಒ ಮೈ ಗಾಡ್‌, ನಮ್ಮಿಬ್ಬರ ನಡುವೆ ಅಂಥದ್ದೇನು ಇಲ್ಲ. ಒಳ್ಳೆಯ ಸ್ನೇಹಿತರು ಮಾತ್ರ. ಒಬ್ಬ ಹುಡುಗ-ಹುಡುಗಿ ಒಳ್ಳೆಯ ಸ್ನೇಹಿತರಾಗುವುದಕ್ಕೆ ಸಾಧ್ಯವಿಲ್ಲವೇ? ಸಾಧ್ಯವಾಗುವುದಾದ್ರೆ ಅದಕ್ಕೆ ನಾವೇ ಸಾಕ್ಷಿ' ಎನ್ನುವುದು ಅವರ ಉತ್ತರವಾಗಿತ್ತು. ‘ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ 'ಎನ್ನುವ ಹಾಡು ಹೇಳಿ ರಂಜಿಸುತ್ತಿದ್ದರು ರಿಷಿಕಾ. ಸರಿ ಸುಮಾರು ಮಂಡ್ಯ ದಾಟುವ ತನಕ ಹೀಗೆಯೇ ಸಾಗಿತ್ತು ಅವರ ಲಾಂಗ್‌ ಡ್ರೈವ್‌ ಜರ್ನಿ. ಆ ಹೊತ್ತಿಗೆ ಅವರ ಗೆಳೆತನದ ಬಗ್ಗೆ ಅಭಿಮಾನಿಗಳಿಂದ ಸಾಕಷ್ಟುಪ್ರಶ್ನೆಗಳು ತೂರಿಬಂದಿದ್ದವು.‘ ಕಳ್ಳ ಪ್ರಥಮ್‌ ನೀನು, ಬಿಗ್‌ಬಾಸ್‌ ಗೆದ್ದಷ್ಟೇ ರಹಸ್ಯ ನಿಮ್ಮಿಬ್ಬರ ರಿಲೆಷನ್‌ಶಿಫ್‌ ನಡುವೆಯೂ ಇದೆ' ಎಂದು ಕಾಲೆಳೆದವರಿಗೂ ಕಮ್ಮಿ ಇರಲಿಲ್ಲ. ಇಂತಹ ಹತ್ತು ಹಲವು ಪ್ರಶ್ನೆಗಳು ಅವರಿಬ್ಬರ ಫೇಸ್‌ಬುಕ್‌ ಲೈವ್‌ನಲ್ಲಿ ದಾಖಲಾಗಿವೆ. ಹಾಗಾದ್ರೆ ಅವರಿಬ್ಬರ ನಡುವೆ ಸಮ್‌ಥಿಂಗ್‌ ಸಮ್‌ಥಿಂಗ್‌ ಏನಾದ್ರೂ ಇದೆಯಾ? ಮದ್ವೆ ಆಗ್ತಾರೆ ಎನ್ನುವುದು ನಿಜವೇ? ಅಭಿಮಾನಿಗಳ ಪ್ರಶ್ನೆಗಳಿಗೆ ಅಲ್ಲಿ ಉತ್ತರವಾಗಿದ್ದ ಪ್ರಥಮ್‌ ಈಗಲೂ ಹೇಳುವುದು ಅದನ್ನೆ. ಲಾಂಗ್‌ಡ್ರೈವ್‌ ಮುಗಿಸಿಕೊಂಡು ಬಂದ ಪ್ರಥಮ್‌ ಮಾತಿಗೆ ಸಿಕ್ಕಾಗ ಅದರ ಮಧುರಾನುಭೂತಿಯನ್ನು ಬಿಚ್ಚಿಡುತ್ತಲೇ,ತಮ್ಮ ಗೆಳೆತನದ ಬಗ್ಗೆಯೂ ಮನ ಬಿಚ್ಚಿ ಹೇಳಿಕೊಂಡರು.

‘ಮಣ್ಣಂಗಟ್ಟಿ ಇದ್ರಲ್ಲಿ ಎಂಥದ್ದು ಇಲ್ಲ. ಬಿಗ್‌ಬಾಸ್‌ ಮನೆಯಲ್ಲಿದ್ದಾಗ ನಮ್ಮಿಬ್ಬರ ನಡುವೆ ಆಗಿದ್ದ ಒಪ್ಪಂದವೇ ಹಾಗಿತ್ತು. ಬಿಗ್‌ಬಾಸ್‌ನಲ್ಲಿ ನಾನು ವಿನ್ನರ್‌ ಆದ್ರೆ ಅವ್ರು ಲಾಂಗ್‌ಡ್ರೈವ್‌ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ರು. ಅವ್ರು ಗೆದ್ದರೆ ನಾನು ಲಾಂಗ್‌ಡ್ರೈವ್‌ ಕರೆದುಕೊಂಡು ಹೋಗುವುದಾಗಿ ಒಪ್ಪಂದ ಆಗಿತ್ತು. ಅದೃಷ್ಟನನ್ನ ಪರವಾಗಿತ್ತು. ಕನ್ನಡಿಗರ ಆಶೀರ್ವಾದದಿಂದ ನಾನು ಗೆದ್ದೆ. ನಿಜ ಹೇಳಬೇಕಂದ್ರೆ ಗೆದ್ದ ಖುಷಿಯಲ್ಲಿ ಒಪ್ಪಂದ ಮರೆತು ಹೋಗಿತ್ತು. ಮೂರು ದಿನದ ನಂತರ ರಿಷಿಕಾ ಫೋನ್‌ ಮಾಡಿ ನೆನಪಿಸಿದರು. ಅಂದು ಕೊಂಡಂತೆ ಬುಧವಾರ ಬೆಳಗ್ಗೆ ಮನೆ ಮುಂದೆ ಬಂದು ಕಾರು ನಿಂತಿತು. ಅಲ್ಲಿಂದ ಶುರುವಾಯಿತು ನಮ್ಮ ಲಾಂಗ್‌ಡ್ರೈವ್‌ ಜರ್ನಿ. ಇದು ಕೇವಲ ಗೆಳೆತನಕ್ಕೆ ಮಾತ್ರ. ಇದ್ರಲ್ಲಿ ಯಾವುದೇ ಗಾಸಿಪ್‌ ಆಗುವಂತಹ ಸುದ್ದಿ ಇಲ್ಲ'ಎಂದರು ಒಳ್ಳೆ ಹುಡುಗ ಪ್ರಥಮ್‌. ಬಿಗ್‌ಬಾಸ್‌ ಮೂಲಕ ಒಳ್ಳೆಯ ಸ್ನೇಹ ಸಂಪಾದಿಸಿಕೊಂಡಿರುವ ರಿಷಿಕಾ ಹಾಗೂ ಪ್ರಥಮ್‌ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆನ್ನುವ ಸುದ್ದಿ ಅವರಿಂದಲೇ ಕೇಳಿಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss Kannada: ಬೇರೆಯವರಿಗೆ ಕೇಡು ಬಯಸಿದ Rakshita Shettyಗೆ ಮುಖಭಂಗ; ಮುಖಮುಚ್ಚಿ ಕೂತ ಗಿಲ್ಲಿ ವಂಶದ ಕುಡಿ
ಸಂಜಯ್‌ನನ್ನು ಛೂ ಬಿಟ್ಟ ಕುತಂತ್ರಿ ರಮೇಶ್.. ನಿತ್ಯಾ ಕಣ್ಮುಂದೆನೇ ತೇಜಸ್‌ ಮಾಯವಾದ್ರೂ ಆಶ್ಚರ್ಯವಿಲ್ಲ!