ಸ್ಮಶಾನದಲ್ಲಿ ಹೆಣ ಸುಡುವವನಿಗೆ ದರ್ಶನ್ ಸಹಾಯ ಮಾಡ್ತಾರಾ?

Published : May 13, 2019, 02:47 PM IST
ಸ್ಮಶಾನದಲ್ಲಿ ಹೆಣ ಸುಡುವವನಿಗೆ ದರ್ಶನ್ ಸಹಾಯ ಮಾಡ್ತಾರಾ?

ಸಾರಾಂಶ

ವರ್ಷದಲ್ಲಿ ದಾಸ ಜನ ಸೇವೆ, ಪ್ರಾಣಿ ಸಹಾಯ ಎಂದೇ 1-2 ಕೋಟಿ ಖರ್ಚು ಮಾಡುತ್ತಾರೆ. ಈಗ ಸ್ಮಶಾನದಲ್ಲಿ ಸಾಯುವ ಹೆಣ ಸುಡುವ ವ್ಯಕ್ತಿಯೊಬ್ಬ ದರ್ಶನ್‌ಗೆ ಸಹಾಯ ಬೇಡಿ ಪತ್ರ ಬರೆದಿದ್ದಾರೆ.

ಬೆಂಗಳೂರಿನ ಕಲ್ಲಳ್ಳಿಯಲ್ಲಿರುವ ಸ್ಮಶಾನವನ್ನು 30 ವರ್ಷದಿಂದ ಕಾಯುತ್ತಿದ್ದ ಆಂಥೋನಿಸ್ವಾಮಿ ತಮ್ಮ ಮಗಳಿಂದ ದರ್ಶನ್‌ಗೆ ಸಹಾಯ ಪತ್ರ ಬರೆಸಿ ಅವರಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ.

ಆಂಥೋನಿಸ್ವಾಮಿಗೆ ಹೆಣ ಸುಡುವ ಕೆಲಸ ಮಾಡುತ್ತಿರುವುದಕ್ಕೆ ಬಿಬಿಎಂಪಿ ಕಡೆಯಿಂದ ತಿಂಗಳಿಗೆ ಒಂದು ಸಾವಿರ ರೂಪಾಯಿ ಧನ ಸಹಾಯ ನೀಡಲಾಗುತ್ತಿತ್ತು. ಆದರೆ ಅದನ್ನು ಕಳೆದ 6-7 ವರ್ಷಗಳಿಂದ ಹಣವನ್ನೇ ನೀಡುತ್ತಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಹಾಗೂ ಊಟಕ್ಕೂ ಕೆಲವೊಮ್ಮೆ ಹಣವಿಲ್ಲದೇ ಪರದಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಗೆ, ಶಾಸಕರಿಗೆ ಹಾಗೂ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.

ಹೊಟ್ಟೆಪಾಡಿಗೆ ಏನೋ ಮಾಡ್ಬೇಕಲ್ಲ, ಇಂದಿನಿಂದ ಕೆಲ್ಸ ಶುರು ಅಂದ ಡಿ-ಬಾಸ್!

ಈ ಹಿಂದೆ ಸಂಬಂಧಿಕರೊಬ್ಬರ ಕ್ರಿಯೆಗೆ ಸ್ಮಶಾನಕ್ಕೆ ಹೋಗಿದ್ದಾಗ ದರ್ಶನ್‌ನನ್ನು ಆಂಥೋನಿ ಮಾತನಾಡಿಸಿದ್ದರಂತೆ. ಅವರ ಕಷ್ಟಗಳನ್ನು ಕೇಳಿ ಹಣ ನೀಡಿ ಹೋಗಿದ್ದರಂತೆ. ಈಗ ಎದುರಾಗಿರುವ ಸಂಕಷ್ಟಕ್ಕೆ ದಾಸನೇ ದೇವರು ಎಂದು ಆಂಥೋನಿ ಕುಟುಂಬದವರು ನಂಬಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!