ನನ್ನ ಜೀವನದ ಬಗ್ಗೆ ಡಾಕ್ಯುಮೆಂಟರಿ ಮಾಡಬಾರದಾ? ಟೀಕಾಕಾರರಿಗೆ ನಯನತಾರಾ ಈ ಪ್ರಶ್ನೆ ಕೇಳಿದ್ದೇಕೆ?

Published : Nov 21, 2026, 09:37 PM IST
Nayanthara

ಸಾರಾಂಶ

ಡಾಕ್ಯುಮೆಂಟರಿ ಕುರಿತು ಟೀಕೆ ಮಾಡಿದವರಿಗೆ ಲೇಡಿ ಸೂಪರ್‌ಸ್ಟಾರ್ ನಯನತಾರಾ ಖಡಕ್ ಉತ್ತರ ನೀಡಿದ್ದಾರೆ. ಧನುಷ್ ಜೊತೆಗಿನ ಕಾಪಿರೈಟ್ ವಿವಾದದ ನಡುವೆಯೇ, ತಮ್ಮ ಜೀವನದ ಬಗ್ಗೆ ಡಾಕ್ಯುಮೆಂಟರಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ಡಾಕ್ಯುಮೆಂಟರಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಡಾಕ್ಯುಮೆಂಟರಿಯಲ್ಲಿ ‘ನಾನುಂ ರೌಡಿ ಧಾನ್’ ಸಿನಿಮಾದ ಕೆಲವೇ ಸೆಕೆಂಡುಗಳ ದೃಶ್ಯವನ್ನು ಬಳಸಿಕೊಂಡಿದ್ದಕ್ಕೆ ನಟ ಧನುಷ್ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕಾಪಿರೈಟ್ ಉಲ್ಲಂಘನೆಯ ಆರೋಪದಡಿ ಬರೋಬ್ಬರಿ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿದ್ದರು.

ಈ ವಿವಾದ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಗಳ ನಡುವೆಯೇ, ನಯನತಾರಾ ಜೀವನದ ಬಗ್ಗೆ ಡಾಕ್ಯುಮೆಂಟರಿ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದವರಿಗೆ ನಟಿ ಖಡಕ್ ತಿರುಗೇಟು ನೀಡಿದ್ದಾರೆ. ತಮ್ಮ ಜೀವನದ ಪಯಣವನ್ನು ಡಾಕ್ಯುಮೆಂಟರಿ ರೂಪದಲ್ಲಿ ತೋರಿಸುವುದರಲ್ಲಿ ತಪ್ಪೇನಿದೆ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ.

"ನಾನೇನು ಮದರ್ ಥೆರೆಸಾ ಅಲ್ಲ, ಸ್ವಾತಂತ್ರ್ಯ ಹೋರಾಟಗಾರ್ತಿಯೂ ಅಲ್ಲ. ನೀವು ಕಲ್ಪಿಸಿಕೊಳ್ಳುವಂತಹ ದೊಡ್ಡ ಬಿರುದುಗಳಿಗೆ ನಾನು ಅರ್ಹಳಾಗಿರದೇ ಇರಬಹುದು. ಆದರೆ, ಒಂದು ಸಣ್ಣ ಹಳ್ಳಿಯಿಂದ ಬಂದ ಸಾಮಾನ್ಯ ಹುಡುಗಿ ನಾನು. ಪುರುಷ ಪ್ರಧಾನವಾಗಿರುವ ಚಿತ್ರರಂಗದಲ್ಲಿ ಯಾರ ಬೆಂಬಲವೂ ಇಲ್ಲದೆ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ.

ಇಂದು ನನಗೆ ಸಿಗುತ್ತಿರುವ ಪ್ರೀತಿ ಮತ್ತು ಗೌರವ ಯಾವುದೇ ಸ್ಟಾರ್ ಹೀರೋಗಿಂತ ಕಡಿಮೆಯಿಲ್ಲ. ಇಷ್ಟು ವರ್ಷಗಳ ಪ್ರಯಾಣದಲ್ಲಿ ಯಾರೂ ಸುಲಭವಾಗಿ ಸಾಧಿಸಲಾಗದ ಯಶಸ್ಸನ್ನು ಕಂಡಿದ್ದೇನೆ. ಅಂತಹ ನನ್ನ ಜೀವನದ ಪಯಣವನ್ನು ಡಾಕ್ಯುಮೆಂಟರಿ ರೂಪದಲ್ಲಿ ಕಟ್ಟಿಕೊಡುವುದರಲ್ಲಿ ತಪ್ಪೇನಿದೆ?" ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ನಟನೆಯಷ್ಟೇ ಅಲ್ಲ, ಉದ್ಯಮದಲ್ಲೂ ಯಶಸ್ವಿ ನಯನತಾರಾ!

42 ವರ್ಷದ ನಯನತಾರಾ ಇಂದು ಕೇವಲ ನಟಿಯಾಗಿ ಮಾತ್ರವಲ್ಲದೆ, ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿಯ ಮೌಲ್ಯ 200 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸಿನಿಮಾ ಮತ್ತು ಉದ್ಯಮ ಎರಡರಲ್ಲೂ ಯಶಸ್ಸು ಗಳಿಸಿರುವ ಅವರು, ತಮ್ಮ ಸಾಧನೆಯ ಹಿಂದಿನ ಕಾರಣವನ್ನೂ ಹಂಚಿಕೊಂಡಿದ್ದಾರೆ.

"ನಾನು ಸಿನಿಮಾಗಳಲ್ಲಿ ನಟಿಸಿದರೂ ಅಥವಾ ಉದ್ಯಮ ನಡೆಸಿದರೂ ಶೇ.100ರಷ್ಟು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ಎಷ್ಟೇ ಕಷ್ಟಗಳು ಎದುರಾದರೂ, ಏನೇ ಸಂಭವಿಸಿದರೂ ನನ್ನ ಆತ್ಮಗೌರವವನ್ನು ಮಾತ್ರ ಎಂದಿಗೂ ಬಿಟ್ಟುಕೊಡುವುದಿಲ್ಲ" ಎಂದು ನಯನತಾರಾ ಸ್ಪಷ್ಟಪಡಿಸಿದ್ದಾರೆ.

ಇನ್ನು ವೃತ್ತಿಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡು, ಸವಾಲುಗಳನ್ನು ಎದುರಿಸಿ ಇಂದು ಲಕ್ಷಾಂತರ ಅಭಿಮಾನಿಗಳ ಪ್ರೀತಿ ಗಳಿಸಿರುವ ನಯನತಾರಾ ಅವರ ಯಶಸ್ಸಿನ ಪಯಣ ಇದೀಗ ಮತ್ತೊಮ್ಮೆ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ತಮ್ಮ ಸಾಧನೆಯ ಬಗ್ಗೆ ಟೀಕೆಗಳು ಕೇಳಿಬಂದರೂ ಆತ್ಮವಿಶ್ವಾಸದಿಂದ ಉತ್ತರಿಸಿರುವ ಲೇಡಿ ಸೂಪರ್‌ಸ್ಟಾರ್ ಮಾತುಗಳು ಈಗ ಗಮನ ಸೆಳೆಯುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ʼಮದ್ವೆ ಆಗಿದೆ, ಈಗ ಕ್ಯಾಚ್‌ ಹಾಕಲ್ಲʼ ಎಂದು‌‌ ನಕ್ಕು ನಗಿಸಿ.. ನಿತ್ಯ 4 ರಿಂದ 5 ಲಕ್ಷ ರೂ ಸಂಬಳದ ಕಥೆ ಹೇಳಿ ಭಾವುಕರಾದ ಕೋಮಲ್‌
ಆ ಹೀರೋ ಇಲ್ಲದಿದ್ದರೆ ಅಂದೇ ಕಥೆ ಮುಗಿಯುತ್ತಿತ್ತು: ಆಸಿಡ್ ರಾಜ ಖ್ಯಾತಿಯ ಸತ್ಯಪ್ರಕಾಶ್ ನೆನಪಿಸಿಕೊಂಡ ಆ ಕರಾಳ ಕ್ಷಣ!