
ಮೂರು ಗಂಟೆಗಳ ಅವಧಿಯ ಈ ಚಿತ್ರಕ್ಕೆ ಸೆನ್ಸಾರ್ ನಿಂದ U/A ಪ್ರಮಾಣ ಪತ್ರ ಸಿಕ್ಕಿದೆ. ಸದ್ಯಕ್ಕೆ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿಲ್ಲ. ಆದರೆ ಚಿತ್ರತಂಡ ರಿಲೀಸ್ಗೆ ಸಿದ್ಧತೆ ನಡೆಸಿದ್ದು,
ಬಹುತೇಕ ಎಪ್ರಿಲ್ ತಿಂಗಳಲ್ಲಿ ಚಿತ್ರ ತೆರೆ ಕಾಣುವ ಸಾಧ್ಯತೆಗಳು ಹೆಚ್ಚಿವೆ. ಅಂಬರೀಶ್, ರವಿಚಂದ್ರನ್, ದರ್ಶನ್,ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಹರಿಪ್ರಿಯಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಹಾಗೆಯೇ
ಐತಿಹಾಸಿಕ ಸಿನಿಮಾವಾಗಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
ನಿರ್ಮಾಪಕ ಮುನಿರತ್ನ ನಿರ್ಮಾಣದಲ್ಲಿ ನಾಗಣ್ಣ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲಿ ನಡೆದಿರುವುದು ವಿಶೇಷ. ಅಂದುಕೊಂಡಂತಾಗಿ ದ್ದರೆ ಈ ಚಿತ್ರ ಈ ವರ್ಷದ ಕೊನೆಯಲ್ಲೇ ತೆರೆಗೆ ಬರುವ ನಿರೀಕ್ಷೆಯಿತ್ತಾದರೂ, ಬಹುತೇಕ ಸ್ಟಾರ್ ಸಿನಿಮಾಗಳೇ ಈಗ ತೆರೆಗೆ ಬರಲು ರೆಡಿ ಆಗಿವೆ.
ಜನವರಿ ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳ ಚಿತ್ರೋತ್ಸವವೇ ನಡೆಯುತ್ತಿದೆ. ಇವೆಲ್ಲ ಲೆಕ್ಕಾಚಾರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಏಪ್ರಿಲ್ ತಿಂಗಳ ಹೊತ್ತಿಗೆ ಕುರುಕ್ಷೇತ್ರ ಶುರುವಾಗುವ ಸಾಧ್ಯತೆಗಳಿವೆ. ಫೆಬ್ರವರಿ ತಿಂಗಳಲ್ಲಿ ಚಿತ್ರದ ಆಡಿಯೋ ರಿಲೀಸ್ ಕೂಡ ಹೊರ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.