'ಕಾಣದಂತೆ ಮಾಯವಾದನು' ಅಂದವನಿಗೆ ಸಿಕ್ತು ಬಂಪರ್ ಕ್ಯಾಶ್!

By Web DeskFirst Published Sep 17, 2019, 4:03 PM IST
Highlights

ಗೋರಿಯಾದ್ಮೇಲೆ ಹುಟ್ಟಿದ್ ಸ್ಟೋರಿ. ಇದು ಬಹುಮಾನ ವಿಜೇತ ಸಬ್ ಟೈಟಲ್.

‘ಕಾಣದಂತೆ ಮಾಯವಾದನು’ ಚಿತ್ರತಂಡ ಚೆಂದದೊಂದು ಸಬ್‌ಟೈಟಲ್ ಆಹ್ವಾನ ಮಾಡಿತ್ತು. ಚಿತ್ರದ ಟ್ರೈಲರ್ ಹಾಗೂ ಹೆಸರು ನೋಡಿ ಇದಕ್ಕೆ ತಕ್ಕಂತೆ ಒಂದು ಸಬ್‌ಟೈಟಲ್ ಕೊಟ್ಟರೆ ಸೂಕ್ತ ಬಹುಮಾನ ಕೊಡುವುದಾಗಿ ಚಿತ್ರತಂಡ ಪ್ರಕಟಿಸಿತ್ತು. ಚಿತ್ರತಂಡದ ಈ ಆಹ್ವಾನಕ್ಕೆ ಬಂದಿದ್ದು, ಬರೋಬ್ಬರಿ ಮೂರು ಸಾವಿರ ಸಬ್‌ಟೈಟಲ್‌ಗಳು. ಅದರಲ್ಲಿ ಒಂದುvಹೆಸರು ಆಯ್ಕೆಯಾಗಿದೆ. ಆ ಸಬ್‌ಟೈಟಲ್ ನೀಡಿದ್ದು ಕುಂದಾಪುರ ಸರ್ಕಾರಿ ಶಾಲೆಯ ಶಿಕ್ಷಕ ನರೇಂದ್ರ ಎಸ್ ಗಂಗೊಳ್ಳಿ.

ಟ್ಯಾಗ್‌ಲೈನ್‌ ಹೇಳಿ, 50 ಸಾವಿರ ಬಹುಮಾನ ಗೆಲ್ಲಿ!

‘ಗೋರಿಯಾದ್ಮೇಲೆ ಹುಟ್ಟಿದ್ ಸ್ಟೋರಿ’ ಎನ್ನುವ ಸಬ್ ಟೈಟಲ್‌ಗೆ ಇಡೀ ಚಿತ್ರತಂಡ ಫಿದಾ ಆಗಿದೆ. ಆಕರ್ಷಕ ಸಬ್‌ಟೈಟಲ್ ಕೊಟ್ಟ ನರೇಂದ್ರ ಎಸ್ ಗಂಗೊಳ್ಳಿ ಅವರಿಗೆ ಚಿತ್ರತಂಡದಿಂದ ೫೦ ಸಾವಿರ ರುಪಾಯಿ ಚೆಕ್ ನೀಡಲಾಯಿತು. ಇನ್ನೂ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ವಿಕಾಸ್ ಹಾಗೂ ಸಿಂಧು ಲೋಕನಾಥ್ ಜೋಡಿ.

ರಾಜ್ ಎಸ್ ಪತ್ತಿಪಾಟಿ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರತಂಡ ಇತ್ತೀಚೆಗೆ ಕಾಶ್ಮಿರದಲ್ಲಿ ಒಂದು ಕಲರ್‌ಫುಲ್ ಹಾಡಿನ ಚಿತ್ರೀಕರಣ ಮಾಡಿಕೊಂಡು ಬಂದಿದೆ. ‘ಈ ಸಬ್ ಟೈಟಲ್ ಕೊಡುವುದು ಹೊಸ ಟ್ರೆಂಡು ಅಲ್ಲದಿದ್ದರೂ ನಮಗೆ ಉಪೇಂದ್ರ ಅವರೇ ಸ್ಫೂರ್ತಿ. ಅವರ ಎ ಚಿತ್ರಕ್ಕೆ ಬುದ್ಧಿವಂತರಿಗೆ ಮಾತ್ರ ಎನ್ನುವ ಸಬ್‌ಟೈಟಲ್ ಆ ಕಾಲಕ್ಕೆ ಹೊಸ ಕ್ರಾಂತಿ. ಅದೇ ಸ್ಫೂರ್ತಿಯಿಂದ ನಮ್ಮ ಚಿತ್ರಕ್ಕೆ ಸಬ್ ಟೈಟಲ್ ಇಡುವ ಮನಸ್ಸು ಮಾಡಿ ಅದನ್ನು ಪ್ರೇಕ್ಷಕರಿಂದಲೇ ಆಹ್ವಾನಿಸಿದ್ದೇನೆ’ ಎಂದರು ನಿರ್ದೇಶಕ ರಾಜ್ ಪತ್ತಿಪಾಟಿ. 

 

click me!