
‘ಲಾಭದ ವಿಚಾರಕ್ಕೆ ಬರುವುದಾದರೆ ನಾವು ಹಾಕಿದ ಬಂಡವಾಳ, ಚಿತ್ರಮಂದಿರದ ಬಾಡಿಗೆ ಇತ್ಯಾದಿಗಳನ್ನು ಕಳೆದರೆ ಶೇರೂ ಸೇರಿಸಿ 20 ಕೋಟಿವರೆಗೆ ಲಾಭ ಗಳಿಸಿದ್ದೇವೆ. ಮಲ್ಟಿಪ್ಲೆಕ್ಸ್ ಸೇರಿ ಚಿತ್ರಮಂದಿರಗಳ ಗಳಿಕೆಯೇ ಇದುವರೆಗೆ 16 ಕೋಟಿವರೆಗೆ ಆಗಿದೆ. ಇನ್ನು ಸ್ಯಾಟಲೈಟ್, ಗಳಿಕೆಗಳನ್ನೆಲ್ಲಾ ಸೇರಿಸಿದರೆ 24- 25ರವರೆಗೆ ಲಾಭ‘ ಬರಬಹುದು’ ಅನ್ನುವುದು ರಕ್ಷಿತ್ ಶೆಟ್ಟಿ ಕೊಡುವ ಲೆಕ್ಕ.
ಇನ್ನು ಕಿರಿಕ್ ಪಾರ್ಟಿಯ ಸ್ಯಾಟಲೈಟ್ ಹಕ್ಕುಗಳನ್ನು ಈವರೆಗೆ ಯಾರಿಗೂ ಮಾರಾಟ ಮಾಡಲಾಗಿಲ್ಲ. ‘ನಾನೇ ಬೇಕಿದ್ದರೆ ಕೆಲ ವರ್ಷ ಇಟ್ಟುಕೊಂಡು, ನಾನೇ ಒಂದು ಚಾನಲ್ ಮಾಡಿ ಪ್ರಸಾರ ಮಾಡಬಹುದೇ ಹೊರತೂ ಕಡಿಮೆ ರೇಟಿಗೆ ಮಾರಾಟ ಮಾಡುವ ಇರಾದೆ ನನಗಿಲ್ಲ’ ಅನ್ನುತ್ತಾರೆ ಅವರು. ಎಷ್ಟೋ ಚಿತ್ರಗಳು ಒಳ್ಳೆಯ ರೇಟಿಗೇ ಮಾರಾಟವಾಗುತ್ತಿರುವಾಗ ಇಷ್ಟೊಂದು ಹಿಟ್ ಆಗಿರುವ ಚಿತ್ರವನ್ನು ಕಡಿಮೆ ರೇಟಿಗೆ ಮಾರಾಟ ಮಾಡಲು ಸಿದ್ಧರಿಲ್ಲವಂತೆ ಅವರು. ‘ನಾನು ನಾಲ್ಕು ಸಿನಿಮಾದಷ್ಟು ಗಳಿಕೆಯನ್ನು ಒಂದೇ ಚಿತ್ರದಲ್ಲಿ ಮಾಡಿಬಿಟ್ಟಿದ್ದೇನೆ. ಹಾಗಾಗಿ ಸ್ಯಾಟಲೈಟ್ ಹಕ್ಕುಗಳನ್ನು ನಾನೇ ಇಟ್ಟುಕೊಳ್ಳುವುದಕ್ಕೆ ನನಗೇನೂ ಕಷ್ಟವಲ್ಲ, ಯಾವಾಗ ಒಳ್ಳೆ ರೇಟ್ ಬರುತ್ತದೋ ಆಗಲೇ ಬರಲಿ. ನಾನು ಇದನ್ನೇ ಕಡಿಮೆ ದರಕ್ಕೆ ಮಾರಿದರೆ ಆವರೇಜ್ ಸಿನಿಮಾಕ್ಕೆ ಇನ್ನೂ ಕಡಿಮೆ ದರ ಕೊಡುತ್ತಾರೆ’ ಅನ್ನುತ್ತಾರೆ ಅವರು.
ರೆಕಾರ್ಡ್ ಬ್ರೇಕ್
ಯುರೋಪ್, ಸಿಂಗಾಪುರ್, ದುಬೈ, ಅಮೇರಿಕಾಗಳಲ್ಲೆಲ್ಲಾ ಚಿತ್ರ ಭ‘ರ್ಜರಿಯಾಗಿ ಹೋಗುತ್ತಿದೆ. ಜಪಾನ್, ಟೋಕಿಯೋ, ಇಸ್ರೆಲ್‌ಗಳಲ್ಲೆಲ್ಲಾ ಬಿಡುಗಡೆಯಾಗಿದೆ. ಹೈದರಾಬಾದ್, ಚೆನ್ನೆ‘ಗಳಲ್ಲಿ ಅಷ್ಟೂ ಶೋಗಳು ಹೌಸ್‌ಫುಲ್ ಹೋಗುತ್ತಿವೆ. ಯುರೋಪ್‌ನಲ್ಲಿ ಈವರೆಗೆ ಯಾವ ಕನ್ನಡ ಚಿತ್ರ ರೆಕಾರ್ಡ್ ಮಾಡಿತ್ತೋ ಅದರ ರೆಕಾರ್ಡ್ ಬ್ರೇಕ್ ಆಗಿದೆ. ಅಮೆರಿಕಾದಲ್ಲಿ ‘ರಂಗಿತರಂಗ’ದ ರೆಕಾರ್ಡ್ ಈ ವಾರ ‘ಕಿರಿಕ್ ಪಾರ್ಟಿ’ ಬ್ರೇಕ್ ಮಾಡಲಿದೆ. ‘ರಂಗಿತರಂಗ’ 50 ದಿನದಲ್ಲಿ ಮಾಡಿದ ರೆಕಾರ್ಡ್ ಎರಡೇ ವಾರಗಳಲ್ಲಿ ಬ್ರೇಕ್ ಆಗುತ್ತಿದೆ. ಇಲ್ಲೂ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ ಹಲವು ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.