
Kannada Superstar Sudeep statement on Rajamouli and RGV-ರಾಮ್‌ಗೋಪಾಲ್ ವರ್ಮಾ ಹಾಗೂ ರಾಜಮೌಳಿ ಬಗ್ಗೆ ನಟ ಕಿಚ್ಚ ಸುದೀಪ್ ವೈರಲ್ ಹೇಳಿಕೆ!
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರಯ ಪ್ಯಾನ್ ಇಂಡಿಯಾ ನಟ ಕೂಡ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕನ್ನಡದಲ್ಲಿ ನಟಿಸುತ್ತಲೇ ಸುದೀಪ್ ಅವರು ತೆಲುಗು, ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇಡೀ ಭಾರತದಲ್ಲಿ ನಟ ಸುದೀಪ್ ಅವರು ಫೇಮಸ್ ನಟ. ಇಂಥ ನಟ ಕಿಚ್ಚ ಸುದೀಪ್ ಅವರಿಗೆ ಪ್ರೆಸ್‌ಮೀಟ್‌ನಲ್ಲಿ ಒಂದು ಪ್ರಶ್ನೆ ಎದುರಾಗಿದೆ- ಅದು, 'ನೀವು ಭಾರತದ ಘಟಾನುಘಟಿ ನಿರ್ದೇಶಕರಾದ ಎಸ್‌ಎಸ್ ರಾಜಮೌಳಿ ಹಾಗೂ ರಾಮ್ ಗೋಪಾಲ್ ವರ್ಮಾ ಅವರೊಂದಿಗೂ ಕೆಲಸ ಮಾಡಿದ್ದೀರಿ. ನಿಮ್ಮ ಫೆವರೆಟ್ ಡೈರೆಕ್ಷರ್ ಯಾರು?' ಎಂಬುದು ಕೇಳಲಾದ ಪ್ರಶ್ನೆ!
ಈ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ? 'ರಾಜಮೌಲಿ ಸರ್ ಈಗ ಸಿನಿಮಾ ಮಾಡುವಾಗ ಅವರ ಆಯ್ಕೆ ನಾನು ಆಗಿದ್ದೆ. ರಾಮ್ ಗೋಪಾಲ್ ವರ್ಮಾ ಅವರ ಹಲವು ಸಿನಿಮಾಗಳಿಗೆ ನನ್ನನ್ನು ಆಯ್ಕೆ ಮಾಡಿದ್ದರು. ಅವರ ಜೊತೆ ನಾನು ಕೆಲಸ ಮಾಡಿದಾಗ, 'ನನ್ನ ಜೊತೆ ಕೆಲಸ ಮಾಡಿದ ಅವರ ಅನುಭವ ಹೇಗಿತ್ತು" ಅಂತ ನೀವು ಅವರನ್ನು ಕೇಳಬೇಕು. ನನಗೆ, ದಿನಾಲು ಬೆಳಿಗ್ಗೆ ಎದ್ದು ನನ್ನ ಹೆಸರಿನಲ್ಲಿ ಯಾರು ಸಿನಿಮಾದ ಸ್ಕ್ರಿಪ್ಟ್ ಬರೆಯುತ್ತಾರೋ ಅವರೆಲ್ಲರೂ ನನ್ನ ಫೆವರೆಟ್, ಡೈರೆಕ್ಟರ್‌ಗಳೇ. ನನ್ನ ಹೆಸರಿನಲ್ಲಿ ಸಿನಿಮಾ ಕಥೆ-ಚಿತ್ರಕಥೆ ಬರೆಯುವ ಎಲ್ಲಾ ನಿರ್ದೇಶಕರಿಗೂ ನಾನು ಗೌರವ ಕೊಡುತ್ತೇನೆ, ಅವರೆಲ್ಲರೂ ನನ್ನ ಅಚ್ಚುಮೆಚ್ಚಿನ ನಿರ್ದೇಶಕರೇ ಆಗಿದ್ದಾರೆ' ಎಂದಿದ್ದಾರೆ ಕಿಚ್ಚ ಸುದೀಪ್.
ಇನ್ನು, ಕಿಚ್ಚ ಸುದೀಪ್ ಅವರ ಸದ್ಯದ ಕೆಲಸಕ್ಕೆ ಸಂಬಂಧಿಸಿ ಹೇಳುವುದಾದರೆ- ಇನ್ನೇನು ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 13ರ ನಿರೂಪಣೆ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ. ಜೊತೆಗೆ, ನಿರೂಪ್ ಬಂಢಾರಿ ನಿರ್ದೇಶನದ 'ಬಿಲ್ಲ ರಂಗ ಭಾಷಾ' ಸಿನಿಮಾದ 'ಫಸ್ಟ್ ಕಟ್' (First Cut) ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಂದರೆ ಸೆಪ್ಟೆಂಬರ್ 2 ರಂದು (ಸೆಪ್ಟೆಂಬರ್ 1ರ ಮಧ್ಯರಾತ್ರಿ) ಬಿಡುಗಡೆಯಾಗಲಿದೆ. 'ವಿಕ್ರಾಂತ್ ರೋಣ' ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಅತ್ಯಂತ ದೊಡ್ಡ ಬಜೆಟ್‌ನ ಚಿತ್ರ ಎನ್ನಲಾಗಿದೆ.
ಜೊತೆಗೆ, ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜೊತೆಗೂ ಸುದೀಪ್ ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಕಿಚ್ಚನ ಭಾವುಕ ಮಾತುಗಳು ಅವರ ಬದ್ಧತೆಯನ್ನು ತೋರಿಸಿದರೆ, ಹೊಸ ಚಿತ್ರಗಳ ಅಪ್‌ಡೇಟ್‌ಗಳು ಅಭಿಮಾನಿಗಳಲ್ಲಿ ಸಂಭ್ರಮದ ಕಿಚ್ಚು ಹಚ್ಚಿವೆ. ಈ ಬಾರಿ ಸುದೀಪ್ ಕೇವಲ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಚಿತ್ರಮಂದಿರಗಳಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.