ಇದೇನಿದು ಕಿಚ್ಚ ಟ್ವೀಟ್, ಅಷ್ಟಕ್ಕೂ ಟಾಂಟ್ ಕೊಟ್ಟಿದ್ದು ಯಾರಿಗೆ?

Published : Aug 12, 2019, 04:33 PM ISTUpdated : Aug 14, 2019, 04:57 PM IST
ಇದೇನಿದು ಕಿಚ್ಚ ಟ್ವೀಟ್, ಅಷ್ಟಕ್ಕೂ ಟಾಂಟ್ ಕೊಟ್ಟಿದ್ದು ಯಾರಿಗೆ?

ಸಾರಾಂಶ

ಈಗ ಸ್ಯಾಂಡಲ್‌ವುಡ್‌ನಲ್ಲಿ ಕುರುಕ್ಷೇತ್ರ ಹಾಗೂ ಪೈಲ್ವಾನ್ ಚಿತ್ರಗಳದ್ದೇ ಸುದ್ದಿ. ಈ ಬೆನ್ನಲ್ಲೇ ದರ್ಶನ್ ಹಾಗೂ ಕಿಚ್ಚ ಸುದೀಪ್ ಮಾಡುವ ಟ್ವೀಟ್ ಸಹ ಸಾಕಷ್ಟು ಚರ್ಚೆಗೆ ದಾರಿ ಮಾಡಿ ಕೊಡುತ್ತಿವೆ. ಅಷ್ಟಕ್ಕೂ ಈಗ ಚರ್ಚೆಯಾಗುತ್ತಿರುವುದೇನು?

ಬೆಂಗಳೂರು (ಆ.12):  ಒಂದೆಡೆ ಬಹು ನಿರೀಕ್ಷಿತ 'ಕುರುಕ್ಷೇತ್ರ' ಚಿತ್ರ ಬಿಡುಗಡೆಯಾಗಿದೆ.ಮತ್ತೊಂದೆಡೆ ಸ್ಯಾಂಡಲ್‌ವುಡ್‌ನ ಮತ್ತೊಂದು ಬಹು ನಿರೀಕ್ಷಿತ ಚಿತ್ರ 'ಪೈಲ್ವಾನ್' ಬಿಡುಗಡೆಗೆ ಸಿದ್ಧವಾಗಿದ್ದು, ಬಹು ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಮಧ್ಯೆಯೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸುದೀಪ್ ಹಾಗೂ ದರ್ಶನ್ ಟ್ರೆಂಡ್ ಆಗುತ್ತಿದ್ದಾರೆ. ಈ ನಟರಿಬ್ಬರು ಮಾಡುವ ಟ್ವೀಟ್ ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. 

ಆದರೆ, ಈ ಮಧ್ಯೆ ಕಿಚ್ಚ ಮಾಡಿದೊಂದು ಬಹು ಅರ್ಥವಿರುವ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 'ಗಂಡಸೆಂದು ಪ್ರೂವ್ ಮಾಡಲು ಆಲ್ಕೋಹಾಲ್ ಆಗಲಿ, ಸೂರ್ಯ ಮುಳುಗಲೆಂದು ಕಾಯುವ ಅಗತ್ಯವಿಲ್ಲ...' ಎಂಬರ್ಥ ಬರುವ ಟ್ವೀಟ್ ಮಾಡಿದ್ದು, ಒಂದೊಳ್ಳೆ ಸಾಲು ಓದಿದೆ ಎಂದು ಬರೆದು ಕೊಂಡಿದ್ದಾರೆ.

ಕೆನಡಾದಲ್ಲಿ ಕನ್ನಡದ ಅಬ್ಬರ! ಅಭಿಮಾನಿಗಳಿಗೆ ಸಿಕ್ತು ಕುರುಕ್ಷೇತ್ರ ದರ್ಶನ!

ಅಷ್ಟೇ ಅಲ್ಲ, 'ಯಾವುದೋ ಒಂದು ವಿಷಯವನ್ನು ಸಾಬೀತು ಮಾಡುವ ಉದ್ದೇಶದಿಂದ ನಾನು ಹೋರಾಡೋಲ್ಲ. ಆದರೆ, ವಿರೋಧಿಯೊಬ್ಬ ಹೋರಾಟಕ್ಕೆ ಅರ್ಹನೆಂದೆನಿಸಿದರೆ ಮಾತ್ರ ಅಖಾಡಕ್ಕೆ ಇಳಿಯುವೆ...' ಎಂಬ ಕೋಟ್ ಇರುವ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ.

 

ಡಿ-ಬಾಸ್‌ಗೆ Young ಫ್ಯಾನ್! ಚಿತ್ರಮಂದಿರ ಮುಂದೆ ಕುಣಿದ ಅಜ್ಜಿ ವೈರಲ್!

ಆ ಡೈಲಾಗ್ 'ಪೈಲ್ವಾನ್' ಚಿತ್ರದ್ದು ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕಿಚ್ಚ ಟ್ವೀಟ್ ಕಾಕಷ್ಟು ಕುತೂಹಲ ಕೆರಳಿಸಿದ್ದಂತೂ ಸುಳ್ಳಲ್ಲ.

"

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali
ಸ್ಪೆಷಲ್ ಡೇಟ್ ಮಿಸ್ ಮಾಡ್ಕೊಂಡ ಶ್ರೀಮುರಳಿ…. ಪತ್ನಿಗಾಗಿ ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಆದ ನಟ