Bigg Boss ಕುಮಾರಿಯನ್ನು ಸೀತೆಗೆ ಹೋಲಿಸಿ ಸುದೀಪ್ ಉದಾಹರಣೆ!​ ನೆಟ್ಟಿಗರಿಂದ ಸಿಕ್ಕಾಪಟ್ಟೆ ರಿಯಾಕ್ಷನ್ಸ್​

Published : Nov 10, 2026, 06:31 PM IST
Kichcha Sudeep and Lavanya Kumari

ಸಾರಾಂಶ

ಬಿಗ್ ಬಾಸ್ 13ನೇ ಸೀಸನ್ ಸ್ಪರ್ಧಿ ಲಾವಣ್ಯ ಕುಮಾರಿ ಟ್ರೋಲ್‌ಗಳಿಗೆ ಬೇಸರ ವ್ಯಕ್ತಪಡಿಸಿದಾಗ, ಕಿಚ್ಚ ಸುದೀಪ್ ಅವರು ಸೀತೆಯ ಉದಾಹರಣೆ ನೀಡಿ ಸಮಾಧಾನಪಡಿಸಿದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ಬಿಗ್​ಬಾಸ್​​ 13 (Bigg Boss)ನೇ ಸೀಸನ್​ನಲ್ಲಿ ಅಗ್ನಿ ಪರೀಕ್ಷೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದವರು ಕುಮಾರಿ ಎಂದೇ ಫೇಮಸ್​ ಆಗಿದ್ದ ಲಾವಣ್ಯ ಕುಮಾರಿ. ಇವರ ಮಾತನ್ನು ಕೇಳಿ ಬಿಗ್​ಬಾಸ್​ ವಿನ್ನರ್​ ಎಂದೇ ಅಂದುಕೊಂಡವರೇ ಹಲವರು. ಆದರೆ ಅನಾರೋಗ್ಯದ ನಿಮಿತ್ತ ಅವರನ್ನು ಬಿಗ್​ಬಾಸ್​ ಮನೆಯೊಳಕ್ಕೆ ಕಳುಹಿಸಲು ಆಗಿರಲಿಲ್ಲ. ಇದಕ್ಕಾಗಿ ಅವರಿಗೆ ಐದು ಲಕ್ಷ ರೂಪಾಯಿ ಪ್ರೋತ್ಸಾಹ ಧನ, ಜಾಬ್​ ಆಫರ್​ ಎಲ್ಲವನ್ನೂ ಕೊಡಲಾಗಿತ್ತು. ಆದರೆ ಕೊನೆಗೆ ದಿಢೀರ್​ ಎಂದು ಕುಮಾರಿ ಎಂಟ್ರಿ ಕೊಟ್ಟರು. ಅಷ್ಟಕ್ಕೂ ಈ ಬಾರಿಯ ಬಿಗ್​ಬಾಸ್​ನ ಸೀಸನ್​ ವೀಕ್ಷಕರನ್ನು ಸೆರೆ ಹಿಡಿಯುವಲ್ಲಿ ವಿಫಲವಾಗಿದೆ, ಅದರಲ್ಲಿಯೂ 12ನೇ ಸೀಸನ್​ಗೆ ಹೋಲಿಸಿದರೆ ತೀರಾ ಸಪ್ಪಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಮಾತು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಕುಮಾರಿ ಏನಾದರೂ ಮ್ಯಾಜಿಕ್​ಮಾಡಬಹುದು ಎಂದು ಅವರನ್ನು ಕಳುಹಿಸಲಾಗಿತ್ತು ಎಂದೇ ಹೇಳಲಾಗುತ್ತಿದೆ.

ಆದರೆ ಹೊರಗಡೆ ಪಟಪಟಾ ಎಂದು ಮಾತನಾಡುವುದು ಬೇರೆ. ಸ್ಪರ್ಧಿಯಾಗಿ ಬೇರೆಯವರಿಗೆ ಕಂಪೀಟ್​ ಮಾಡುವುದು ಬೇರೆ ಎನ್ನುವಂತೆ ಕುಮಾರಿ ನಿರೀಕ್ಷೆಯಂತೆ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾದರು. ಕೊನೆಗೆ ಎಲಿಮಿನೇಟ್​ ಆಗಿ ಹೊರಕ್ಕೆ ಬಂದರು. ಆದರೆ, ಒಮ್ಮೆ ಸ್ವಲ್ಪ ಫೇಮಸ್​ ಆದರು ಎಂದಾಕ್ಷಣ ವೀಕ್ಷಕರ ಅದರಲ್ಲಿಯೂ ಟ್ರೋಲಿಗರ ಕಣ್ಣು ಅವರ ಮೇಲೆ ಇರುತ್ತದೆ. ಅದೇ ರೀತಿ ಕುಮಾರಿ ಅವರನ್ನು ಬಿಗ್​ಬಾಸ್​ ಮನೆಯೊಳಕ್ಕೆ ಕಳುಹಿಸಿದಾಗ ಅವರ ಬಟ್ಟೆ ನೋಡಿ ಟ್ರೋಲ್​ ಮಾಡಿದವರೇ ಹೆಚ್ಚು. ಇದಕ್ಕೆ ಕಾರಣ, ಬಿಗ್​ಬಾಸ್​ ಕಡೆಯಿಂದ ಐದು ಲಕ್ಷ ರೂ. ದುಬೈನಲ್ಲಿ ಜಾಬ್​ ಆಫರ್​ ಎಲ್ಲಾ ಕೊಟ್ಟರೂ, ಕುಮಾರಿ ಅವರು ಅದೇ ಹಳೆಯ ಕಪ್ಪು ಬಟ್ಟೆಯನ್ನೇ ಧರಿಸಿ ಕುಮಾರಿ ಎಂಟ್ರಿಕೊಟ್ಟಿದ್ದು. ಇದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಜನರ ಅನುಕಂಪ ಗಳಿಸುವುದಕ್ಕಾಗಿ ಈ ಹಿಂದೆ ಬನಿಯನ್​ ಮೇಲೆ ಇದ್ದರು, ಈಗ ಹಳೆಯಬಟ್ಟೆ ಮೇಲೆ ಇದ್ದಾಳೆ ಕುಮಾರಿ ಎಂದು ನೆಟ್ಟಿಗರು ಟ್ರೋಲ್​ ಮಾಡಿದರು.

ಸೀತೆಯನ್ನೇ ಬಿಟ್ಟಿಲ್ಲ ಎಂದ ಸುದೀಪ್​

ಇದರಿಂದ ಈಗ ಹೊರಕ್ಕೆ ಬಂದ ಮೇಲೆ ಕುಮಾರಿ ನೋವು ತೋಡಿಕೊಂಡಿದ್ದಾರೆ. ಈ ರೀತಿ ಟ್ರೋಲ್​ ಮಾಡುತ್ತಿರುವವರ ಬಗ್ಗೆ ಸುದೀಪ್​ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಅವರನ್ನು ಸಮಾಧಾನ ಪಡಿಸುವುದಕ್ಕಾಗಿ ಸುದೀಪ್​ ಅವರು ರಾಮಾಯಣದ ಸೀತೆಯ ಉದಾಹರಣೆ ಕೊಟ್ಟರು. ಕುಮಾರಿ ಅವರ ಮಾತುಗಳನ್ನು ಆಲಿಸಿದ ನಿರೂಪಕ ಸುದೀಪ್, ‘ಜನರು ಏನೇನೋ ಮಾತನಾಡುತ್ತಾರೆ. ಇವರು ಸಾಕ್ಷಾತ್ ಸೀತೆಯನ್ನೇ ಬಿಟ್ಟವರಲ್ಲ. ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ. ಅಂತಹ ಮಾತುಗಳಿಗೆಲ್ಲ ನೀವು ಯೋಚಿಸಬಾರದು ಹಾಗೂ ತಲೆಕೆಡಿಸಿಕೊಳ್ಳಬಾರದು. ನೀವ್ಯಾರೋ, ನಾವ್ಯಾರೋ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಹೋಗ್ತಾ ಇರಬೇಕು’ ಎಂದು ಸೂಕ್ತ ಕಿವಿಮಾತು ಹೇಳಿ ಕುಮಾರಿಗೆ ಆತ್ಮವಿಶ್ವಾಸ ತುಂಬಿದರು.

ನೆಟ್ಟಿಗರಿಂದ ಸಿಕ್ಕಾಪಟ್ಟೆ ರಿಯಾಕ್ಷನ್ಸ್​

ಅಷ್ಟಕ್ಕೂ ಸುದೀಪ್​ ಅವರೇನೂ ಕುಮಾರಿಯನ್ನು ಸೀತಾಮಾತೆಗೆ ಹೋಲಿಸಲಿಲ್ಲ. ಅವರನ್ನೂ ಬಿಟ್ಟಿಲ್ಲ ಎಂದು ಹೇಳಿದ್ದಾರಷ್ಟೇ. ಆದರೆ ಇದು ಹಲವು ನೆಟ್ಟಿಗರ ಕೋಪಕ್ಕೆ ಗುರಿಯಾಗಿದೆ. ಇದು ಕೂಡ ಟ್ರೋಲ್​ ಆಗುತ್ತಿದೆ. ಕುಮಾರಿಯನ್ನು ಸೀತಾಮಾತೆಗೆ ಹೋಲಿಸೋದು ಸರಿನಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಬೇರೆ ಉದಾಹರಣೆ ಕೊಡಬಹುದಿತ್ತು. ಆದರೆ ಸಮಾಧಾನ ಪಡಿಸುವ ಹೆಸರಿನಲ್ಲಿ ಸೀತೆಯ ಹೆಸರು ಹೇಳಿದ್ದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು, ಸುದೀಪ್​ ಅವರ ಮಾತೆಂದರೆ ಮಾತು, ಯಾರನ್ನೂ ನೋಯಿಸುವುದಿಲ್ಲ. ಎಲ್ಲರನ್ನೂ ಹೇಗೆ ಸಮಾಧಾನ ಮಾಡಬೇಕು ಎನ್ನೋದು ಅವರಿಗೆ ಗೊತ್ತಿದೆ ಎನ್ನುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಘವೇಂದ್ರ ಪಾತ್ರಧಾರಿ ಪರೀಕ್ಷಿತ್ ಅಭಿನಯಕ್ಕೆ ಜಗ್ಗೇಶ್ ಫಿದಾ! ನವರಸನಾಯಕನ ಭೇಟಿಗೆ ಧಾರಾವಾಹಿ ನಟ ಹೇಳಿದ್ದೇನು?
Salman Khan ಫ್ಯಾನ್ಸ್‌ಗೆ ಡಬಲ್ ಸರ್ಪ್ರೈಸ್; 'ಮಾತೃಭೂಮಿ' ರಿಲೀಸ್ ಡೇಟ್ ಫೈನಲ್, ಟ್ರೈಲರ್ ಇಂದೇ ರಿಲೀಸ್!