ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಸುವರ್ಣ ನ್ಯೂಸ್ ಜೊತೆ ಕಿಚ್ಚ ಸುದೀಪ್ ಟಿಕ್‌ಟಾಕ್

By Web Desk  |  First Published Jul 5, 2019, 4:14 PM IST

ಪೈಲ್ವಾನ್ ರಿಲೀಸ್ ಖುಷಿಯಲ್ಲಿ ಕಿಚ್ಚ ಸುದೀಪ್ | ಸುವರ್ಣ ನ್ಯೂಸ್ ಜೊತೆ ಮೊದಲ ಬಾರಿಗೆ ಟಿಕ್ ಟಾಕ್ ಮಾಡಿದ ಸುದೀಪ್ | ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು 


ಕಿಚ್ಚ ಸುದೀಪ್ ಪೈಲ್ವಾನ್ ರಿಲೀಸ್ ನ ಖುಷಿಯಲ್ಲಿದ್ದಾರೆ. ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 

ಇವರ ಪೈಲ್ವಾನ್ ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಚಿತ್ರದ ಬಗ್ಗೆ ಮೊಟ್ಟ ಮೊದಲ ಬಾರಿ ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಈ ಸಂದರ್ಶನ ತುಂಬಾ ಡಿಫರೆಂಟಾಗಿ ಮೂಡಿ ಬಂದಿದೆ. ಇಲ್ಲಿ ಪೈಲ್ವಾನ್ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹೇಳಿದ್ದಾರೆ. ದರ್ಶನ್ ಕುರುಕ್ಷೇತ್ರಕ್ಕೆ ವಿಶ್ ಮಾಡಿದ್ದಾರೆ. 

Tap to resize

Latest Videos

ಇನ್ನೂ ಇಂಟರೆಸ್ಟಿಂಗ್ ವಿಚಾರ ಅಂದ್ರೆ ಮೊಟ್ಟ ಮೊದಲ ಬಾರಿಗೆ ಸುವರ್ಣ ನ್ಯೂಸ್ ಜೊತೆ ಟಿಕ್ ಟಾಕ್ ಮಾಡಿದ್ದಾರೆ. ಕಿಚ್ಚ ಸುದೀಪ್ ಇದುವರೆಗೂ ಎಲ್ಲಿಯೂ ಟಿಕ್ ಟಾಕ್ ಮಾಡಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಟಿಕ್ ಟಾಕ್ ಮಾಡಿದ್ದಾರೆ. 

 

Iam bad at this,,,, yet Was fun though .. 🤗... https://t.co/dkSEi6304V

— Kichcha Sudeepa (@KicchaSudeep)

ಸುದೀಪ್ ಹಾಗೂ ಶಿವಣ್ಣ ನಟನೆಯ ದಿ ವಿಲನ್ ಸಿನಿಮಾ ಫೇಮಸ್ ಡೈಲಾಗ್ ಜಗತ್ತಿನ ಯಾವ ಮೂಲೆಯಲ್ಲಿದ್ರೂ ಆ ಬೇಟೆ ನಂದು.. ಓಹ್ ಭ್ರಮೆ’ ಡೈಲಾಗ್ ಗೆ ಸುವರ್ಣ ನ್ಯೂಸ್ ಆ್ಯಂಕರ್ ಸುಗುಣಾ ಜೊತೆ ಟಿಕ್ ಟಾಕ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ 5 ಲಕ್ಷ ವೀಕ್ಷಣೆ ಪಡೆದಿದೆ. ಕಿಚ್ಚ ಅಭಿಮಾನಿಗಳೆಲ್ಲಾ ಸ್ಟೇಟಸ್ ಹಾಕಿಕೊಂಡಿದ್ದಾರೆ.  

click me!