ರೈಸನ್ ಚಿತ್ರದ ಟ್ರೇಲರ್‌ನಲ್ಲಿ ಸುದೀಪ್ ಇಲ್ಲ?

Published : Nov 29, 2018, 12:27 PM ISTUpdated : Nov 29, 2018, 12:28 PM IST
ರೈಸನ್ ಚಿತ್ರದ ಟ್ರೇಲರ್‌ನಲ್ಲಿ ಸುದೀಪ್ ಇಲ್ಲ?

ಸಾರಾಂಶ

ಎಡ್ಡಿ ಆರ್ಯ ನಿರ್ದೇಶನದ ರೈಸಸ್ ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿಯಾದದ್ದು ಹಳೆಯ ಕಥೆ. ಸುದೀಪ್ ಹಾಲಿವುಡ್ ಶೂಟಿಂಗಿಗೆ ತೆರಳುತ್ತೇನೆ ಎಂದು ಅಂತ ನಾಲ್ಕೆದು ತಿಂಗಳುಗಳಿಂದ ಹೇಳುತ್ತಲೇ ಬಂದಿದ್ದರು.  

ಈ ಮಧ್ಯೆ ಎಡ್ಡಿ ಆರ್ಯ ರೈಸಸ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದರು.ಆ ಟ್ರೇಲನಲ್ಲಿ ಸುದೀಪ್ ಇರಲಿಲ್ಲ. ಸುದೀ ಪ್ರಸ್ತಾಪವೂ ಇರಲಿಲ್ಲ!

ಹಾಗಿದ್ದರೆ ಸುದೀಪ್ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿಲ್ಲವೇ? ಹಾಗಂತ ಅಭಿಮಾನಿಗಳು ಕೇಳಲು ಆರಂಭಿಸಿದರು. ಕೆಲವರು ಸಿಟ್ಟು ಮಾಡಿಕೊಂಡರು. ತಮ್ಮತಮ್ಮದೇ ಲೆಕ್ಕಾಚಾರ ಹಾಕಿಕೊಂಡು ಯಾಕೆ ಸುದೀ ರೈಸನ್ ಚಿತ್ರದಿಂದ ಹೊರಗೆ ಬಂದರು ಅನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಸುದೀಪ್ ಇಲ್ಲೇ ಬಿಜಿಯಾಗಿದ್ದಾರೆ. ಬಿಗ್ ಬಾಸ್ ಕೆಲಸ ಇದೆ, ಸೈರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಪೈಲ್ವಾನ್ ಶೂಟಿಂಗ್ ನಡೆಯುತ್ತಿದೆ. ಕೋಟಿಗೊಬ್ಬ 3 ಚಿತ್ರದ ಕೆಲಸಗಳಿವೆ ಎಂದೆಲ್ಲ ಮಾತುಕತೆಯಾಯಿತು.

ಹಾಗಿದ್ದರೆ ಸುದೀಪ್ ರೈಸನ್ ಚಿತ್ರದಲ್ಲಿ ನಟಿಸುತ್ತಾರೋ ಇಲ್ಲವೋ?
ಖಂಡಿತಾ ನಟಿಸುತ್ತಾರೆ ಅನ್ನುವುದು ಖಚಿತ ಸುದ್ದಿ. ಎಡ್ಡಿ ಆರ್ಯ ಶೂಟಿಂಗ್ ನಡೆಸುತ್ತಿರುವ ತಾಣದ ಪ್ರತಿಕೂಲ ಹವಾಮಾನ, ಸುದೀಪ್ ಡೇಟ್ಸ್ ಹೊಂದಾಣಿಕೆ ಆಗದೇ ಚಿತ್ರೀಕರಣದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಸುದೀ ಚಿತ್ರೀಕರಣಕ್ಕೆ ತೆರಳಬೇಕಾಗಿತ್ತು. ಅದೊಂದು ಕೆಲವೊಂದು ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಅಷ್ಟೇ.

ಈ ಬಗ್ಗೆ ಎಡ್ಡಿ ಆರ್ಯ ಕೂಡ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಇದು ಆರಂಭದ ಟ್ರೇಲರ್ ಅಷ್ಟೇ. ಮುಂಬರುವ ಟ್ರೇಲರುಗಳಲ್ಲಿ ಸುದೀಪ್ ಖಂಡತಾ ಇರುತ್ತಾರೆ. ಅಭಿಮಾನಿಗಳು ನಿರಾಶರಾಗಬೇಕಾಗಿಲ್ಲ ಎಂದೂ ಹೇಳಿದ್ದಾರೆ. ಹೀಗಾಗಿ ಸುದೀಪ್ ಹಾಲಿವುಡ್ ಪ್ರಯಾಣ ಜಾರಿಯಲ್ಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್