ಯಶ್‌ಗೆ ಚಪ್ಪಾಳೆ, ಕಿಯಾರಾಗೆ ಮಾತ್ರ ಟ್ರೋಲ್: ತಾಯಿಯಾದ ಮೇಲೆ ಇದೆಲ್ಲಾ ಬೇಕಾ ಅಂತಿದ್ದಾರೆ ನೆಟ್ಟಿಗರು!

Published : Jul 19, 2026, 05:32 PM ISTUpdated : Jul 19, 2026, 05:44 PM IST
Kiara Advani

ಸಾರಾಂಶ

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನಲ್ಲಿ ಕಿಯಾರಾ ಅಡ್ವಾಣಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಪರ-ವಿರೋಧ ಚರ್ಚೆಗಳು ಜೋರಾಗಿವೆ.

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' (Toxic) ರಿಲೀಸ್‌ಗೂ ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ 'ತಬಾಹಿ' (Tabaahi) ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದೆಡೆ ಹಾಡಿನಲ್ಲಿ ಯಶ್ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್‌ಗೆ ಜನ ಫಿದಾ ಆಗಿದ್ದರೆ, ಇನ್ನೊಂದೆಡೆ ನಟಿ ಕಿಯಾರಾ ಅಡ್ವಾಣಿಯವರನ್ನು ಅವರ ಬೋಲ್ಡ್ ಮತ್ತು ರೊಮ್ಯಾಂಟಿಕ್ ದೃಶ್ಯಗಳಿಗಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾದ ಸಹನಟ ಬೆನೆಡಿಕ್ಟ್ ಗ್ಯಾರೆಟ್, ಟ್ರೋಲಿಗರ ಈ ವರ್ತನೆಯನ್ನು 'ಡಬಲ್ ಸ್ಟ್ಯಾಂಡರ್ಡ್' (ದ್ವಂದ್ವ ನೀತಿ) ಮತ್ತು 'ಹಿಪೊಕ್ರಸಿ' (ಬೂಟಾಟಿಕೆ) ಎಂದು ಕರೆದಿದ್ದಾರೆ.

'ತಬಾಹಿ' ಹಾಡಿಗೆ ಕಿಯಾರಾ ಟ್ರೋಲ್

ಯಶ್ ಅವರ 'ಟಾಕ್ಸಿಕ್' ಸಿನಿಮಾ 2026ರ ಬಹುಚರ್ಚಿತ ಸಿನಿಮಾಗಳಲ್ಲೊಂದು. 'KGF' ನಂತರ ಯಶ್ ದೊಡ್ಡ ಪರದೆಗೆ ಮರಳುತ್ತಿರುವುದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನಲ್ಲಿ ಯಶ್ ಮತ್ತು ಕಿಯಾರಾ ನಡುವೆ ಹಲವು ರೊಮ್ಯಾಂಟಿಕ್ ಹಾಗೂ ತೀವ್ರವಾದ ದೃಶ್ಯಗಳಿವೆ. ಹಾಡು ಬಿಡುಗಡೆಯಾದ ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಅದರ ಜೊತೆಗೆ ವಿವಾದವೂ ಶುರುವಾಗಿದೆ. ಹಲವರು ಯಶ್ ಅವರ ವ್ಯಕ್ತಿತ್ವ ಮತ್ತು ಸ್ಕ್ರೀನ್ ಪ್ರೆಸೆನ್ಸ್‌ಗೆ ಮೆಚ್ಚುಗೆ ಸೂಚಿಸಿದರೆ, ಕೆಲವು ಬಳಕೆದಾರರು ಮದುವೆಯಾಗಿ, ತಾಯಿಯಾದ ಮೇಲೆ ಇಂತಹ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ಕಿಯಾರಾ ಅವರನ್ನು ಟಾರ್ಗೆಟ್ ಮಾಡಲು ಶುರುಮಾಡಿದ್ದಾರೆ. ಈ ವಿಡಿಯೋದಿಂದ ವಿವಾದ ಶುರುವಾಗಿದೆ -

ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಬೆನೆಡಿಕ್ಟ್ ಗ್ಯಾರೆಟ್

ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬ್ರಿಟಿಷ್ ನಟ ಬೆನೆಡಿಕ್ಟ್ ಗ್ಯಾರೆಟ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡು ಟ್ರೋಲಿಗರ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. "ರೊಮ್ಯಾಂಟಿಕ್ ದೃಶ್ಯಗಳ ಬಗ್ಗೆ ಯಾರಿಗಾದರೂ ಆಕ್ಷೇಪವಿದ್ದರೆ, ಯಶ್ ಮತ್ತು ಕಿಯಾರಾ ಇಬ್ಬರನ್ನೂ ಸಮಾನವಾಗಿ ಪ್ರಶ್ನಿಸಬೇಕು. ಯಾಕೆಂದರೆ ಇಬ್ಬರೂ ಮದುವೆಯಾಗಿದ್ದಾರೆ ಮತ್ತು ಇಬ್ಬರಿಗೂ ಮಕ್ಕಳಿದ್ದಾರೆ," ಎಂದು ಅವರು ಹೇಳಿದ್ದಾರೆ. "ಸೋಷಿಯಲ್ ಮೀಡಿಯಾದಲ್ಲಿ ಜನರು ಯಶ್ ಅವರನ್ನು ಹೊಗಳಿ ಫೈರ್ ಇಮೋಜಿ ಕಳಿಸುತ್ತಿದ್ದಾರೆ, ಆದರೆ ಕಿಯಾರಾ ಅವರನ್ನು ಮಾತ್ರ ಗೇಲಿ ಮಾಡುತ್ತಿದ್ದಾರೆ.

ಇದು ಸ್ಪಷ್ಟವಾಗಿ ದ್ವಂದ್ವ ನೀತಿಯನ್ನು (Double Standards) ತೋರಿಸುತ್ತದೆ," ಎಂದು ಬೆನೆಡಿಕ್ಟ್ ಹೇಳಿದ್ದಾರೆ. ನಟ-ನಟಿಯರ ಕೆಲಸ ಪಾತ್ರ ಮಾಡುವುದೇ ಹೊರತು, ತಮ್ಮ ವೈಯಕ್ತಿಕ ಜೀವನವನ್ನು ಪರದೆಯ ಮೇಲೆ ತರುವುದಲ್ಲ ಎಂಬುದನ್ನು ಪ್ರೇಕ್ಷಕರು ಅರ್ಥಮಾಡಿಕೊಳ್ಳಬೇಕು. ಕಥೆಯ ಅಗತ್ಯಕ್ಕೆ ತಕ್ಕಂತೆ ರೊಮ್ಯಾನ್ಸ್, ಭಾವನೆಗಳು ಮತ್ತು ಬೇರೆ ಬೇರೆ ರೀತಿಯ ದೃಶ್ಯಗಳಲ್ಲಿ ನಟಿಸಬೇಕಾಗುತ್ತದೆ. ಇದಕ್ಕೂ ಅವರ ವೈಯಕ್ತಿಕ ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಮದುವೆ, ತಾಯ್ತನದ ನಂತರ ನಟನೆ ಬಿಡಬೇಕಾ?'

ಟ್ರೋಲಿಗರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೆನೆಡಿಕ್ಟ್, "ಜನರು ಕಿಯಾರಾ ನಟನೆಯನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ, ಅವರು ಒಬ್ಬರ ಪತ್ನಿ ಮತ್ತು ತಾಯಿ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮದುವೆಯಾದ ಮೇಲೆ ನಟಿಯರು ರೊಮ್ಯಾಂಟಿಕ್ ಪಾತ್ರಗಳನ್ನು ಮಾಡಬಾರದು ಎಂಬ ಆಲೋಚನೆಯೇ ತಪ್ಪು. ಇದು ಮಹಿಳೆಯರ ಬಗ್ಗೆ ಸಮಾಜಕ್ಕಿರುವ ದ್ವಂದ್ವ ನಿಲುವನ್ನು ತೋರಿಸುತ್ತದೆ," ಎಂದು ಹೇಳಿದ್ದಾರೆ. ತಾವೇ ತಮ್ಮ ವೃತ್ತಿಜೀವನದಲ್ಲಿ ಮೂರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಕಥೆಯ ಅಗತ್ಯವಿದ್ದ ಕಾರಣಕ್ಕೆ ಬೆತ್ತಲೆ ದೃಶ್ಯಗಳಲ್ಲಿ ನಟಿಸಿರುವುದಾಗಿ ಬೆನೆಡಿಕ್ಟ್ ಉದಾಹರಣೆ ನೀಡಿದ್ದಾರೆ. ಪ್ರತಿಯೊಬ್ಬ ನಟನೂ ತಮ್ಮದೇ ಆದ ಮಿತಿಗಳನ್ನು ನಿರ್ಧರಿಸುತ್ತಾರೆ ಮತ್ತು ಅದು ಅವರ ವೃತ್ತಿಪರ ಆಯ್ಕೆಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mouni Roy :ಮತ್ತೊಂದು ಲವ್ ಸ್ಟೋರಿಯಲ್ಲಿ ಸಿಕ್ಕಿಬಿದ್ದ ಮೌನಿ ರಾಯ್; ಮತ್ತೆ ಬಂದ 15 ವರ್ಷದ ಹಿಂದಿನ ಗೆಳೆಯ?
ಸಪ್ತಮಿ ಗೌಡ ರೆಸಾರ್ಟ್​ 'ಕಾಜಾಣಾ' ಓಪನ್​: ವಿಶೇಷತೆಗಳ ಆಗರ- ಫ್ಯಾನ್ಸ್​ಗೆ ಆಹ್ವಾನ; ಕ್ಯೂಟ್​ ಫೋಟೋಸ್​ ಇಲ್ಲಿವೆ