
ಈಮೂಲಕ ರಜನಿಕಾಂತ್ ಅಭಿನಯದ ‘2.0’ ಚಿತ್ರಕ್ಕೆ ಯಶ್ ಅಭಿನಯದ ಕೆಜಿಎಫ್ ಕ್ರಿಯಾಶೀಲವಾಗಿ ಸಡ್ಡು ಹೊಡೆದಿದೆ. ಪ್ರಶಾಂತ್ ನೀಲ್ ನಿರ್ದೇಶನದ, ತುಂಬಾ ನಿರೀಕ್ಷೆ ಹುಟ್ಟಿಸಿದ್ದ ‘ಕೆಜಿಎಫ್’ ಚಿತ್ರದ ಟ್ರೈಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಕರೆಕ್ಟಾಗಿ 2.34 ನಿಮಿಷಕ್ಕೆ ಚಿತ್ರದ ಟ್ರೈಲರ್ ಯೂಟ್ಯೂಬ್ ಚಾನೆಲ್‌ಗಳಲ್ಲಿ ಬಿಡುಗಡೆಯಾಯಿತು. ಕನ್ನಡದ ಟ್ರೈಲರ್ ಅಂಬರೀಶ್, ತಮಿಳು ಟ್ರೈಲರ್ ವಿಶಾಲ್, ತೆಲುಗು ಟ್ರೈಲರ್ ಈಗ ಚಿತ್ರ ನಿರ್ಮಾಪಕ ಸಾಯಿ, ಮಲಯಾಳಂ ಟ್ರೈಲರ್ ಸಿನಿ ಪತ್ರಕರ್ತ ಜೇಮ್ಸ್ ರಾಬಿನ್ ಮತ್ತು ಹಿಂದಿ ಟ್ರೈಲರ್ ಅನ್ನು ಬಾಲಿವುಡ್‌ನ ಖ್ಯಾತ ವಿತರಕ ಅನಿಲ್ ತದಾನಿ ಬಿಡುಗಡೆ ಮಾಡಿದ್ದಾ.
ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು, ಚಿತ್ರದ ನಾಯಕ ನಟಿ ಶ್ರೀನಿಧಿ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಈ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಇದೇ ಮೊದಲು: ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಮಾಧ್ಯಮದವರನ್ನುಒಂದೆಡೆ ಸೇರಿಸಿ ಕನ್ನಡ ಚಿತ್ರದ ಟ್ರೈಲರ್ ಲಾಂಚ್ ಆಗಿದ್ದು ಇದೇ ಮೊದಲು. ಸರಿ ಸುಮಾರು 250 ಮಂದಿ ಪತ್ರಕರ್ತರು ಬೇರೆ ಬೇರೆ ಭಾಷೆಗಳಿಂದ ಆಗಮಿಸಿದ್ದರು. ಇಷ್ಟು ದೊಡ್ಡ ಮಟ್ಟದಲ್ಲಿ ಕನ್ನಡ ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು ಇದೇ ಮೊದಲು. ಹೊಂಬಾಳೆ ಫಿಲಂಸ್ ಈ ದಾಖಲೆ ಬರೆದಿದೆ.
ಟ್ರೈಲರ್ ಲಾಂಚ್ ಮಾಡಿದವರೆಲ್ಲಾ ಈ ಚಿತ್ರದ ಕುರಿತು ಭಾರಿಕೆ ಇಟ್ಟಿದ್ದಾರೆ. ತೆಲುಗು ನಿರ್ಮಾಪಕ ಸಾಯಿ, ‘ಕೆಜಿಎಫ್ ತೆಲುಗಿನಲ್ಲಿ ಸೂಪರ್ ಹಿಟ್ ಆಗುವ ವಿಶ್ವಾಸವಿದೆ. ಕನ್ನಡದಲ್ಲಿ ನಾನೂ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದೇನೆ’ ಎಂದರು. ಪತ್ರಕರ್ತ ಜೇಮ್ಸ್ ರಾಬಿನ್, ‘ಕನ್ನಡ ಸಿನಿಮಾವೊಂದು ಮಲಯಾಳಂಗೆ ನೇರವಾಗಿ ಬರುತ್ತಿರುವುದು ಇದೇ ಮೊದಲು’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.