
ಹೈದರಾಬಾದ್: ಸ್ಟಾರ್ ನಟಿ ಕೀರ್ತಿ ಸುರೇಶ್ ಅವರ Satyavan Savitri ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಈ ನಡುವೆ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕ ಸ್ಥಳಗಳಲ್ಲಿ Personal Boundaries ಮತ್ತು ಅನುಮತಿಯ ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಸತ್ಯವಾನ್ ಸಾವಿತ್ರಿ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಕೀರ್ತಿ ಸುರೇಶ್ ಅವರು ತುಂಬಾ ಬ್ಯುಸಿ ಆಗಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ಅವರು ಇತ್ತೀಚೆಗೆ ನಡೆದ ಪ್ರೆಸ್ಮೀಟ್ ಒಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರ್ಮಾಪಕರೊಬ್ಬರು ನಟಿಯ ಕಾಲ ಮೇಲೆ ಕೈಯಿಟ್ಟು ಮಾತಾಡುವ ವಿಡಿಯೋ ಅದಾಗಿದೆ. ಇದು ಕೀರ್ತಿ ಸುರೇಶ್ ಅವರ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ ಖುದ್ದು ನಟಿಯೇ ಅದಕ್ಕೆ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ನವೆಂಬರ್ 18 ರಂದು ಚೆನ್ನೈನಲ್ಲಿ ಪ್ರೆಸ್ಮೀಟ್ ನಡೆದಿತ್ತು. ಚಿತ್ರದ ನಿರ್ಮಾಪಕ ಮೈಸ್ಕಿನ್ ಮಾತನ್ನಾಡುವ ವೇಳೆ ಕೀರ್ತಿ ಸುರೇಶ್ ರನ್ನು ಹೊಗಳಿದ್ದಾರೆ. ಮಾತನ್ನಾಡುವ ಭರದಲ್ಲಿ ಕೀರ್ತಿ ಸುರೇಶ್ ಅವರನ್ನ ಟಚ್ ಮಾಡಿದ್ದಾರೆ. ಒಂದೆರಡು ಬಾರಿ ಕೈ ಅವರತ್ತ ಬಂದಾಗ ಕೀರ್ತಿ ಸುರೇಶ್ ಸಹಜವಾಗಿಯೇ ಇದ್ದರು. ಈ ವಿಡಿಯೋ ನೋಡಿದ ಕೆಲವು ನೆಟ್ಟಿಗರು ಕೀರ್ತಿ ಸುರೇಶ್ ಡಿಸ್ಕಂಫರ್ಟ್ ಆಗಿದ್ದಾರೆ ಎಂದು ಕಾಮೆಂಟ್ ಹಾಗೂ ಪೋಸ್ಟ್ಗಳನ್ನ ಮಾಡಲು ಶುರುಮಾಡಿದ್ದಾರೆ.
ವಿಡಿಯೋ ವೈರಲ್ ಬೆನ್ನಲ್ಲೇ ಖುದ್ದು ಟ್ವೀಟ್ ಮಾಡಿರುವ ಕೀರ್ತಿ ಸುರೇಶ್, ಮೊದಲನೆಯದಾಗಿ, ನನ್ನ ಮುಖದಲ್ಲಿ ನಿಮಗೆ ಎಲ್ಲಿ discomfort ಕಾಣಿಸಿತು? ನಾವು ಅಪ್ಪ-ಮಗಳಂತಹ ಬಾಂಧವ್ಯ ಹಂಚಿಕೊಂಡಿದ್ದೇವೆ ಅಂತ ಅವರು ಹೇಳಿದ್ರು, ನಾನೂ ಹೇಳಿದೆ. ಅದನ್ನು ನೀವು ಕೇಳಲಿಲ್ಲವಾ?ಎರಡನೆಯದಾಗಿ, ಒಂದು ವೇಳೆ ನನಗೆ ಡಿಸ್ಕಂಫರ್ಟ್ ಆಗಿದೆ ಅಂತಲೇ ಅಂದುಕೊಳ್ಳಿ, ಸಿನಿಮಾದಲ್ಲಿ ಮುಟ್ಟುತ್ತಾರೆ ಅಂದ ಮಾತ್ರಕ್ಕೆ ಪಬ್ಲಿಕ್ನಲ್ಲೂ ಹಾಗೆ ಮಾಡಬೇಕು ಅಂತೀರಾ? ಬ್ರದರ್, ಮೊದಲು ನೀವು ಕೆಲವು ವಿಷಯಗಳನ್ನು ಸರಿಯಾಗಿ ಅರ್ಥ ಮಾಡ್ಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕೀರ್ತಿ ಸುರೇಶ್ ಸ್ಪಷ್ಟನೆ ನೀಡಿ ವಿವಾದಕ್ಕೆ ಉತ್ತರ ಕೊಟ್ಟ ಬೆನ್ನಲ್ಲೇ.. ಅವರನ್ನು ಪ್ರಶ್ನಿಸಿದ್ದ ಆ ವ್ಯಕ್ತಿ ತಮ್ಮ ಎಕ್ಸ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಂದ್ಹಾಗೆ ಸತ್ಯವಾನ್ ಸಾವಿತ್ರಿ ಸಿನಿಮಾವು ನಾಳೆ ರಿಲೀಸ್ ಆಗಲಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಧನುಷ್, ಮಮ್ಮುಟ್ಟಿ ಮತ್ತು ಸಾಯಿ ಪಲ್ಲವಿ ನಟನೆಯ 'ಓಂ ಚಾಪ್ಟರ್ 1' (OM Chapter 1) ಚಿತ್ರದೊಂದಿಗೆ ಪೈಪೋಟಿ ನಡೆಸಲಿದೆ.
Firstly , where do you see discomfort on my face ? Did you not hear him or me say that we share a bond like a father and daughter?
Secondly , say I was uncomfortable, you are stating that we get touched in films so I should be okay with that in public too ? You really need to get something’s right brother 🙃
— Keerthy Suresh (@KeerthyOfficial) November 19, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.