
ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರ ಬಗ್ಗೆ ಗೊತ್ತಿಲ್ಲದ ಕನ್ನಡಿಗರು ಇಲ್ಲ. ನಟ ವಿಷ್ಣುವರ್ಧನ್ ಕನ್ನಡ ಸೇರಿದಂತೆ 4-5 ಭಾಷೆಗಳಲ್ಲಿ ನಟಿಸಿರುವ ಸ್ಟಾರ್ ನಟ. ಬರೋಬ್ಬರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರು ಬಹುಭಾಷಾ ಸ್ಟಾರ್ ನಟಿ ಭಾರತಿ (Bharathi Vishnuvardhan) ಅವರನ್ನು ಮದುವೆ ಆಗಿ ಸುಖ-ಸಂಸಾರ ಮಾಡಿ ಜೀವನ ಮುಗಿಸಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಇದೀಗ, ನಟ ವಿಷ್ಣುವರ್ಧನ್ ಹಾಗೂ ಭಾರತಿ ಜೋಡಿಯ ಮದುವೆಯಲ್ಲಿ ನಡೆದಿರುವ ಕೆಟ್ಟ ಘಟನೆಯನ್ನು ಅವರ ಮಗಳು ಕೀರ್ತಿ ವಿಷ್ನುವರ್ಧನ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹಾಗಿದ್ದರೆ, ನಟ ವಿಷ್ಣುವರ್ಧನ್-ಭಾರತಿ ಜೋಡಿಯ ಮಗಳು ಕೀರ್ತಿ ವಿಷ್ಣುವರ್ಧನ್ ಅವರು ಅದೇನು ಹೇಳಿದ್ದಾರೆ ನೋಡಿ.. 'ನನ್ನ ಅಪ್ಪ-ಅಮ್ಮನ ಮದುವೆ ಲವ್ ಮ್ಯಾರೇಜ್ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತು. 1975ರಲ್ಲಿ ಅವರಿಬ್ಬರ ಮದುವೆ ಆಗಿದೆ. ಅವರಿಬ್ಬರ ಮದುವೆಯಲ್ಲಿ ನಾನು ಅಪ್ಪಾಜಿಯ ತೊಡೆಯ ಮೇಲೆ ಕುಳಿತು ಅವರ ಮದುವೆಯನ್ನು ನೋಡಿದ್ದೇನೆ. ಏಕೆಂದರೆ, ನಾನು ಮೂಲತಃ ಭಾರತಿಯವರ ಸಹೋದರಿಯ ಮಗಳು. ಆದರೆ, ಚಿಕ್ಕ ಮಗುವಾಗಿದ್ದಾಗಲೇ ನನ್ನನ್ನು ವಿಷ್ಣುವರ್ಧನ್-ಭಾರತಿ ದಂಪತಿ ದತ್ತು ತೆಗೆದುಕೊಂಡಿದ್ದರಿಂದ ನಾನು ನಟ ವಿಷ್ಣುವರ್ಧನ್ ಮಗಳೇ ಆಗಿದ್ದೇನೆ.
ನಾನು ನನ್ನ ಅಪ್ಪ-ಅಮ್ಮನ ಮದುವೆಯನ್ನು ನೋಡಿರೋದು ನಿಜವಾಗಿಯೂ ವಿಶೇಷ ಸಂಗತಿ. ನಾನಾಗ ತುಂಬಾ ಚಿಕ್ಕ ಮಗು. ಆದರೆ, ಅವರ ಮದುವೆ ನಡೆದಾಗ ಕೆಟ್ಟ ಘಟನೆಯೂ ನಡೆದಿದೆ. ಈ ಜೋಡಿಯ ಮದುವೆ ದಿನ ಗಲಾಟೆ ಆಗಿದ್ದು ಇಡೀ ಕರ್ನಾಟಕಕ್ಕೇ ಗೊತ್ತು. ಗಲಾಟೆ ಮಾಡಿದವರು ನಟ, ನನ್ನ ಅಪ್ಪಾಜಿ ವಿರೋಧಿಗಳು ಎಂದಷ್ಟೇ ಹೇಳಬಹುದೇನೋ. ಆದರೆ, ಆ ದುರ್ಘಟನೆ ನಡೆದಿದೆ, ಯಾರು ಅಂತ ಗೊತ್ತಿಲ್ಲ, ಆದರೆ, ಅಂದು ಮದುವೆ ನಡೆದಾಗ ಆ ಕಲ್ಯಾಣ ಮಂಟಪಕ್ಕ ನುಗ್ಗಿದ ಕೆಲವರು ದೊಡ್ಡದೊಡ್ಡ ಕಲ್ಲನ್ನು ವಿಷ್ಣುವರ್ಧನ್ ದಂಪತಿಗಳ ಮೇಲೆ ತೂರಿದ್ದಾರೆ.
ಅವುಗಳಲ್ಲಿ ಕೆಲವು ವಿಷ್ಣುವರ್ಧನ್ ಹಾಗೂ ಭಾರತಿಯವರ ತಲೆ, ಮುಖ ಹಾಗೂ ಮೈಗೂ ಕೂಡ ತಗಲಿವೆ. ಅಂದು ಕೆಲವರು ಎಸೆದ ಆ ಕಲ್ಲು, ಅಲ್ಲಿನ ದುರ್ಘಟನೆಯ ಫೋಟೋ ನನ್ನ ಬಳಿ ಇದೆ. ಅದನ್ನು ಸದ್ಯವೇ ಇಡೀ ಕರ್ನಾಟಕದ ಜನತೆಯ ಮುಂದೆ ಇಡಲಿದ್ದೇನೆ. ನಾನು ಅಪ್ಪಾಜಿ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದೇನೆ. ಅದರಲ್ಲಿ ಓ ಫೋಟೋವನ್ನು ಕೂಡ ಸೇರಿಸಲಿದ್ದೇನೆ' ಎಂದಿದ್ದಾರೆ ನಟ ವಿಷ್ಣುವರ್ಧನ್ ಅವರ ಮಗಳು ಕೀರ್ತಿ ವಿಷ್ಣುವರ್ಧನ್ (ನಟ ಅನುರುದ್ಧರ ಪತ್ನಿ). ಈ ಮೂಲಕ ಅವರು ಅಂದು ನಡೆದ ಘಟನೆಗೆ ಸಾಕ್ಷಿಯನ್ನು ಒದಗಿಸಲಿದ್ದಾರೆ ಎನ್ನಬಹುದು.
ಇನ್ನು ಆ ಘಟನೆ ಬಗ್ಗೆ ಹೇಳೋದಾದರೆ, ಮದುವೆ ನಡೆಯುತ್ತಿದ್ದ ಜಾಗಕ್ಕೆ ಬಂದ ಕೆಲವರು ವಿಷ್ಣುವರ್ಧನ್ ಹಾಗೂ ಭಾರತಿ ದಂಪತಿಗಳ ಮೇಲೆ ಕಲ್ಲಿನ ಮಳೆ ಸುರಿಸಿದ್ದಾರೆ. ಆದರೆ, ಅಲ್ಲಿದ್ದ ಕೆಲವು ಆಪ್ತರ ಸಹಾಯದಿಂದ ವಿಷ್ಣು-ಭಾರತಿ ಜೋಡಿ ಆ ಕಲ್ಯಾಣ ಮಂಟಪದ ಹಿಂದುಗಡೆ ಬಾಗಿಲಿನಿಂದ ಹೊರಟು ಓಡಿಹೋಗಿ ಪ್ರಾಣವನ್ನು ಕಾಪಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಅಂದು ಕರ್ನಾಟಕದ ತುಂಬಾ ವೈರಲ್ ಆಗಿತ್ತು. ಆಗ ಈಗಿನಂತೆ ಸೋಷಿಯಲ್ ಮಿಡಿಯಾಗಳು, ಯೂಟ್ಯೂಬ್ ಚಾನೆಲ್‌ಗಳು ಇರಲಿಲ್ಲ. ಆದರೂ ಕೂಡ ಈ ಸುದ್ದಿ ತುಂಬಾ ಹರಡಿತ್ತು.
ಈಗ ಸೋಷಿಯಲ್ ಮೀಡಿಯಾಗಳು ಹಾಗೂ ಯೂಟ್ಯೂಬ್ ಕಾಲ ಬಂದಿದೆ. ಹಳೆಯ ಜಮಾನದಲ್ಲಿ ನಡೆದ ಸ್ಟೋರಿಗಳೆಲ್ಲಾ ಈಗ ಹೊರಗೆ ಓಡೋಡಿ ಬರುತ್ತಿವೆ. ಅದರಲ್ಲೊಂದು ಕತೆ ತುಂಬಾ ಆಸಕ್ತಿದಾಯಕ ಎನ್ನಿಸುತ್ತಿದೆ, ನೋಡಿ.. ಇವೆಲ್ಲಾ ನಟ ವಿಷ್ಣುವರ್ಧನ್ ಅವರ ಮಾತೃ ಹೃದಯ ಹಾಗೂ ಸಮಾಜಮುಖಿ ಕೆಲಸಕ್ಕೆ ಹಿಡಿದ ಕನ್ನಡಿ ಎನ್ನಬಹುದು.
ಹೌದು, ನಟ ವಿಷ್ಣುವರ್ಧನ್ ಹಾಗೂ ಭಾರತಿ ಇಬ್ಬರೂ ಕೂಡ ಕೆಲವು ದರ್ಶಕಗಳ ಹಿಂದೆ ಕನ್ನಡ ಸಿನಿಮಾದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆಯಾದವರು. ನಟ ವಿಷ್ಣುವರ್ಧನ್ ಅವರದು ತೆರೆಯ ಮೇಲೆ ಸಾಹಸಸಿಂಹ ಇಮೇಜ್ ಇದ್ದರೂ ತೆರೆಮರೆಯಲ್ಲಿ ಅವರು 'ಮಮತಾಮಯಿ' ಹಾಗೂ 'ಕರುಣಾಮಯಿ' ಆಗಿದ್ದರು. ಜೊತೆಗೆ, ಅವರು ಆಧ್ಯಾತ್ಮಿಕ ಹಾಗೂ ಧಾರ್ಮಿಕದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು ಆಗಿದ್ದರು. ಭಾರತಿ ಕೂಡ ಹಾಗೇ ಇದ್ದರು. ಈ ಜೋಡಿ ಮನೆಯಲ್ಲಿ ತಮ್ಮದೇ ಪೂಜೆ, ಸತ್ಕಾರ್ಯಗಳನ್ನು ಮಾಡುತ್ತಿದ್ದರು.
ನಟ ವಿಷ್ಣುವರ್ಧನ್ ದಂಪತಿ ಬಹಳಷ್ಟು ಜನರಿಗೆ, ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಅವರೆಲ್ಲರ ಆಶೀರ್ವಾದ ಅವರ ಕುಟುಂಬವನ್ನು ಇಂದಿಗೂ ಕಾಪಾಡುತ್ತಿದೆ ಎನ್ನಬಹುದು. ಅವರು ಮಾಡಿದ್ದ ಅದೆಷ್ಟೂ ಸಹಾಯ ಹೊರಜಗತ್ತಿಗೆ ಗೊತ್ತೇ ಆಗಲ್ಲ. ಕಾರಣ, ಸ್ವತಃ ಅವರೇ 'ಎಲ್ಲೂ ಹೇಳಬಾರದು' ಎಂದು ಮಾತು ತೆಗೆದುಕೊಂಡೇ ಮಾಡಿರುವ ಸಹಾಯ ಅದು. ಆದರೆ, ಕೆಲವರು ಒಳ್ಳೆಯ ಕಾರಣಕ್ಕೆ ಕೊಟ್ಟ ಮಾತನ್ನು ಮೀರಿ ಅವರ ಒಳ್ಳೆಯತನವನ್ನು ಜಗತ್ತಿಗೆ ತಿಳಿಸಿದ್ದಾರೆ. ಇದೀಗ ಸ್ವತಃ ಅವರ ಮಗಳು ಈ ಬಗ್ಗೆ ಜಗತ್ತಿಗೆ ತಿಳಿಸಲು ಹೊರಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.