ಕನ್ನಡದ ಕಿರುತೆರೆಗೆ ಹೊಸ ಭಾಷ್ಯ ಬರೆದ ಧಾರಾವಾಹಿ 'ರಾಧಾ ರಮಣ'. ಕಲಾವಿದರು, ಕಥೆ, ಅಭಿನಯ ಹೀಗೆ ಎಲ್ಲ ಕಾರಣಕ್ಕೂ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಿಸಿಕೊಂಡಿತ್ತು. ಆದರೆ, ಈ ಸೀರಿಯಲ್‌ನಲ್ಲಿ ಹೆಚ್ಚು ಆಕರ್ಷಕರಾಗಿದ್ದ ರಾಧಾ ಮಿಸ್ ಪಾತ್ರಕ್ಕೆ ಕಾವ್ಯಾ ಗೌಡ ಬರಲಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಫೇಮಸ್ ಧಾರಾವಾಹಿ ‘ರಾಧಾ ರಮಣ’ದಲ್ಲಿ ಕಿರುತೆರೆ ರಾಧಿಕಾ ಪಂಡಿತ್ ಕಾವ್ಯಾ ಗೌಡ ರಾಧಾ ಮಿಸ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.
‘ಪ್ಯಾಟೆ ಮಂದಿ ಕಾಡಿಗೆ ಬಂದ್ರು ’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಕಾವ್ಯ ಇದಾದ ಮೇಲೆ ಕಾಣಿಸಿಕೊಂಡಿದ್ದು ‘ಶುಭ ವಿವಾಹ’, ‘ಮೀರಾ ಮಾಧವ’ ಹಾಗೂ ‘ಗಾಂಧಾರಿ’ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ಮೇಲೆ ಹೆಚ್ಚಾಗಿ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಾಗೂ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದರು.
ಕಿರುತೆರೆ ರಾಧಿಕಾ ಪಂಡಿತ್ ಇವರು...!
ಈ ಹಿಂದೆ ರಾಧಾ ಮಿಸ್ ಪಾತ್ರವನ್ನು ಕಿರುತೆರೆಯ ದಿ ಮೋಸ್ಟ್ ಡಿಸೈರಬಲ್ ವುಮೆನ್ ಶ್ವೇತಾ ಪ್ರಸಾದ್ ನಿರ್ವಹಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಅಭಿನಯಿಸುವುದಾಗಿ 1 ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಒಪ್ಪಂದ ಮುಗಿದು 2 ವರ್ಷಗಳಾಗಿವೆ. ಕಿರುತೆರೆಯಿಂದ ಬ್ರೇಕ್ ಬೇಕೆಂದು ಹೊರ ಬಂದಿದ್ದಾರೆ.
ಸೌಮ್ಯ ಸ್ವಭಾವ, ಮುಗ್ಧ, ಸ್ವಾಭಿಮಾನಿ ಗೃಹಿಣಿಯ ಪಾತ್ರದಲ್ಲಿ ಕಾವ್ಯ ತಮ್ಮ ಅಭಿನಯದ ಮೂಲಕ ಜನರಿಗೆ ಹತ್ತಿರವಾಗಲಿ ಎಂದು ಆಶಿಸೋಣ.