ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾಳ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಬಾಲಿವುಡ್ ಕ್ಯೂಟ್ ಕಪಲ್ #Virushka ಏನೇ ಮಾಡಿದರೂ ಒಂಥರಾ ಕ್ರಿಯೇಟಿವ್ ನೋಡಿ. ಯಾಕಂದ್ರೆ IPL ಮೇನಿಯಾದಲ್ಲಿ ಬ್ಯುಸಿ ಇದ್ದರೂ ಪತ್ನಿಯೊಂದಿಗೆ ಸಮಯ ಕಳೆಯುವುದು ಮಿಸ್ ಮಾಡೋದೇ ಇಲ್ಲ. ಕೆಲವೊಮ್ಮೆ ಅನುಷ್ಕಾ ಮ್ಯಾಚ್ ನೋಡೋಕೆ ಬಂದಿರುವುದು ಉಂಟು.
ಕೆಲ ದಿನಗಳ ಹಿಂದೆ 31 ನೇ ಹುಟ್ಟುಹಬ್ಬ ಆಚರಿಸಿಕೊಂಡ ಅನುಷ್ಕಾಳಿಗೆ ವಿರಾಟ್ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇಬ್ಬರೂ ಕೆರೆಯ ನೀರಿನ ಬಳಿ ಕುಳಿತು ಸೂರ್ಯಾಸ್ತ ನೋಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಹಾರ್ಟ್ ಸಿಂಬಲ್ ಹಾಕಿಕೊಂಡಿದ್ದಾರೆ.
ಇನ್ನು ಮದುವೆ ನಂತರ ಸಿನಿಮಾ ಆಯ್ಕೆ ವಿಚಾರದಲ್ಲಿ ಸಿಕ್ಕಾಪಟ್ಟೆ ಚೂಸಿಯಾಗಿರುವ ಅನುಷ್ಕಾ ಬಾಲಿವುಡ್ ಬಾದ್ ಶಾ ಜೊತೆ ‘ಝೀರೊ’ ಸಿನಿಮಾದಲ್ಲಿ ಅಭಿನಯಿಸಿರುವುದು ಬಿಟ್ಟರೆ ಮತ್ಯಾವ ಸಿನಿಮಾವನ್ನು ಒಪ್ಪಿಕೊಂಡಿರುವುದರ ಬಗ್ಗೆ ಬಹಿರಂಗಪಡಿಸಿಲ್ಲ.