
ಮುಂಬೈ (ಅ.24) ಬಾಲಿವುಡ್ ನಟಿ ಕತ್ರಿನಾ ಕೈಫ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಟ್ರೋಲ್ ಎದುರಿಸಿದ್ದರು. ತಾಯಿಯಾದ ಬಳಿಕ ಕತ್ರಿನಾ ಕೈಫ್ ತೂಕ ಕುರಿತು ಹಲವರು ಕಮೆಂಟ್ ಮಾಡಿದ್ದರು. ಇತರ ನಟಿಯರ ಉದಾಹರಣೆ ಮುಂದಿಟ್ಟು ಮೀಮ್ಸ್ ಮಾಡಲಾಗಿತ್ತು. ಬಾಡಿಶೇಮಿಂಗ್ ಮೂಲಕ ಟೀಕೆ ಮಾಡಲಾಗಿತ್ತು. ಆದರೆ ಕತ್ರಿನಾ ಮಾತ್ರ ಇದ್ಯಾವುದಕ್ಕೂ ಉತ್ತರ ನೀಡಲಿಲ್ಲ. ಮಗುವಿನ ಆರಕೆಯಲ್ಲಿರುವ ಕತ್ರಿನಾಗೆ ಈ ಟ್ರೋಲ್‌ಗಳಿಗೆ, ಟೀಕೆಗಳಿಗೆ ಉತ್ತರ ಕೊಡುವಷ್ಟು ಸಮಯವೂ ಇರಲಿಲ್ಲ ಅನ್ನೋದು ವಾಸ್ತವ. ಇದೀಗ ಕತ್ರಿನಾ ಕೈಫ್ ಬ್ಯೂಟಿ ಬ್ರ್ಯಾಂಡ್ ಲಂಡನ್‌ನಲ್ಲಿ ಶಾಖೆ ಆರಂಭಿಸಿದೆ. ಇದರ ಬೆನ್ನಲ್ಲೇ ಕತ್ರಿನಾ ಬ್ಯೂಟಿ ಬ್ರ್ಯಾಂಡ್ ಸೇಲ್ಸ್ ಬರೋಬ್ಬರಿ 350 ಕೋಟಿ ರೂಪಾಯಿ ದಾಟಿದೆ.
2019ರಲ್ಲಿ ಕತ್ರಿನಾ ಕೈಫ್ ನೈಕಾ (Nyka) ಸಹಭಾಗಿತ್ವದಲ್ಲಿ ಕೇ ಬ್ಯೂಟಿ ಬ್ರ್ಯಾಂಡ್ ಆರಂಭಿಸಿದ್ದರು. ಕೇ ಬ್ಯೂಟಿ ಇದೀಗ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಬ್ಯೂಟಿ ಉತ್ಪನ್ನ ಮಾರಾಟ ಮಾಡುತ್ತಿದೆ. ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇದೀಗ ಲಂಡನ್‌ನ ಎನ್‌ಕೆ ಬಳಿ ಕೇ ಬ್ಯೂಟಿ ಶೋ ರೂಂ ತೆರೆದಿದ್ದಾರೆ.
ಕೇ ಬ್ಯೂಟಿ ಬ್ರಾಂಡ್ ಉತ್ಪನ್ನಗಳ ಸೇಲ್ಸ್ ಇದೀಗ 350 ಕೋಟಿ ರೂಪಾಯಿ ದಾಟಿದೆ. ದೇಶ ವಿದೇಶಗಳಲ್ಲಿ ಬಾರಿ ಬೇಡಿಕೆಯ ಉತ್ರಪನ್ನವಾಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಮಾರುಕಟ್ಟೆ ವಿಸ್ತರಣೆಗೊಳ್ಳುತ್ತಿದೆ. ಆರ್ಥಿಕ ತಜ್ಞರ ಅಂದಾಜು ಪ್ರಕಾರ ಆರ್ಥಿಕ ವರ್ಷದ ಅಂತ್ಯದಲ್ಲಿ ಕತ್ರಿನಾ ಕೈಫ್ ಬ್ಯೂಟಿ ಬ್ರ್ಯಾಂಡ್ ಉತ್ಪನ್ನ 500 ಕೋಟಿ ರೂಪಾಯಿ ಮೌಲ್ಯಕ್ಕೆ ತಲುಪಲದೆ ಎಂದಿದೆ.
ಲಂಡನ್‌ನಲ್ಲಿ ಬ್ಯೂಟಿ ಬ್ರ್ಯಾಂಡ್ ಶಾಖೆ ಆರಂಭಿಸಿ ಮಾತನಾಡಿದ ಕತ್ರಿನಾ ಕೈಫ್, ನಿಮ್ಮ ಪ್ಯಾಶನ್, ಆಸಕ್ತಿಯನ್ನು ಉದ್ಯಮದಲ್ಲಿ ತೊಡಗಿಸಿದರೆ ಉತ್ತಮ. ಶ್ರದ್ಧೆ, ಪರಿಶ್ರಮ, ಹೆಚ್ಚಿನ ಸಮಯ ಉದ್ಯಮಕ್ಕಾಗಿ ಮೀಸಲಿಡಬೇಕು. ಉದ್ಯಮ ಯಶಸ್ಸು ಗಳಿಸಬೇಕಾದರೆ ನಿಮ್ಮ ಎಲ್ಲಾ ಸಹೋದ್ಯೋಗಿಗಳ ಮೇಲೆ ವಿಶ್ವಾಸವಿಡಬೇಕು. ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕು. ಸತತ ಪರಿಶ್ರಮ, ಸತತವಾಗಿ ಉದ್ಯಮದ ಹಿಂದೆ ಬಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಮೆಂಟ್ಸ್, ಟೀಕೆಗಳು, ಟ್ರೋಲ್‌ಗಳನ್ನು ಗಮನಿಸುವುದಿಲ್ಲ. ನನ್ನ ದಾರಿ ಸರಿಯಿದ್ದರೆ ಇತತರ ಅಭಿಪ್ರಾಯದಿಂದ ನಾನು ಬದಲಾಗುವ ಅಥವಾ ಬದಲಿಸುವ ಅಗತ್ಯವಿಲ್ಲ ಎಂದು ಕತ್ರಿನಾ ಕೈಫ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಸ್‌ಗೆ ನಾನು ತಲೆಕೆಡಿಸಿಕೊಂಡರೆ ನಾನು ಅಲ್ಲೇ ಇರುತ್ತೇನೆ. ನನ್ನ ಜೀವನದಲ್ಲಿ ನಾನು ಏನು ಮಾಡಬೇಕು, ಏನು ಮಾಡಬಾರದು, ಏನು ಸಾಧಿಸಬೇಕು ಅನ್ನೋ ಗುರಿ ಇದ್ದರೆ ಸಾಕು. ಧೈರ್ಯವಾಗಿ ಮುನ್ನಗ್ಗಬೇಕು. ಅದಕ್ಕೆ ಬೇಕಾದ ಅಧ್ಯಯನ, ಪ್ರಯತ್ನ, ಪರಿಶ್ರಮ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ಕತ್ರಿನಾ ಕೈಫ್ ಹೇಳಿದ್ದಾರೆ. ಕತ್ರಿನಾ ಕೈಫ್ ಯಶಸ್ವಿ ಉದ್ಯಮ ಕುರಿತು ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಕತ್ರಿನಾಗೈ ಕಮೆಂಟ್ಸ್ ಮಾಡಿದವರು ಈಗಲೂ ಇತರರನ್ನು ಟ್ರೋಲ್ ಮಾಡುತ್ತಲೇ ಇದ್ದಾರೆ. ಆದರೆ ಕತ್ರಿನಾ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.