ಕರ್ನಾಟಕದ ದಿವಿತಾ ರೈ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2021ರ ಮಿಸ್ ಯುನಿವರ್ಸ್ ಹರ್ನಾಜ್ ಸಂಧು ಅವರು ಭಾನುವಾರ ಸಂಜೆ ಮುಂಬೈನಲ್ಲಿ ನಡೆದ ಗಣ್ಯರು ಸಿನಿಮಾ ತಾರೆಯರಿಂದ ತುಂಬಿದ್ದ ವೈಭವೋಪೇತ ಸಮಾರಂಭದಲ್ಲಿ 23 ವರ್ಷದ ದಿವಿತಾ ರೈ ಅವರಿಗೆ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟವನ್ನು ಅಳವಡಿಸಿದರು.
ಕರ್ನಾಟಕದ ದಿವಿತಾ ರೈ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2021ರ ಮಿಸ್ ಯುನಿವರ್ಸ್ ಹರ್ನಾಜ್ ಸಂಧು ಅವರು ಭಾನುವಾರ ಸಂಜೆ ಮುಂಬೈನಲ್ಲಿ ನಡೆದ ಗಣ್ಯರು ಸಿನಿಮಾ ತಾರೆಯರಿಂದ ತುಂಬಿದ್ದ ವೈಭವೋಪೇತ ಸಮಾರಂಭದಲ್ಲಿ 23 ವರ್ಷದ ದಿವಿತಾ ರೈ ಅವರಿಗೆ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟವನ್ನು ಅಳವಡಿಸಿದರು.
ತೆಲಂಗಾಣದ ಸುಂದರಿ ಪ್ರಜ್ಞಾ ಅಯ್ಯಗಾರಿ ಅವರು ಮಿಸ್ ದಿವಾ ಸೂಪರ್‌ನ್ಯಾಷನಲ್ 2022 ಆಗಿ ಆಯ್ಕೆಯಾಗಿದ್ದಾರೆ. ಮಿಸ್ ಯುನಿವರ್ಸ್‌ನ ಅಧಿಕೃತ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹರ್ನಾಜ್ ಸಂಧು ಅವರು ದಿವಿತಾ ರೈ ಅವರಿಗೆ ಕಿರೀಟ ತೊಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಿರೀಟವನ್ನು ತೆಗೆದು ದೀವಿತಾ ರೈ ಅವರಿಗೆ ಅಳವಡಿಸುವ ಮುನ್ನ ಹರ್ನಾಝ್ ಸಂಧು ಆ ಕಿರೀಟಕ್ಕೆ ಮುತ್ತಿಕ್ಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಇಬ್ಬರು ಸುಂದರಿಯರು ಜೊತೆಯಾಗಿ ರಾಂಪ್‌ನಲ್ಲಿ ಹೆಜ್ಜೆ ಇಡುವ ಮೂಲಕ ವೇದಿಕೆಗೆ ಕಿಚ್ಚು ಹಚ್ಚಿದರು.
undefined
ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದ ಬೆಡಗಿಯರು
ಕರ್ನಾಟಕದಲ್ಲಿ ಜನಿಸಿದ ದಿವಿತಾ ರೈ ಅವರ ತಂದೆ ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ದೇಶದ ವಿವಿಧ ನಗರಗಳಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದಾರೆ. 23 ವರ್ಷದ ಈಕೆ ಆರ್ಕಿಟೆಕ್ಟ್ ಓದಿದ್ದು, ಮಾಡೆಲ್ ವೃತ್ತಿಯಲ್ಲಿ ಮುನ್ನಡೆದಿದ್ದಾರೆ, ಇದರೊಂದಿಗೆ ಅವರು ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಪೈಂಟಿಂಗ್ ನಲ್ಲಿ ಆಸಕ್ತಿ ಇದ್ದು, ಸಂಗೀತ ಕೇಳುವುದು ಪುಸ್ತಕ ಓದುವುದು ಇವರ ಹವ್ಯಾಸವಾಗಿದೆ. ಇದರೊಂದಿಗೆ ಅವರು 71ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಕ್ಕೊಕ್ಕೊಕ್ಕೊ ಕೋಳಿ ಬಂತು... ಕುಕ್ಕುಟಗಳಿಗೂ ಸೌಂದರ್ಯ ಸ್ಪರ್ಧೆ... ವಿಡಿಯೋ ನೋಡಿ
ಮಿಸ್ ದಿವಾ ಯುನಿವರ್ಸ್ 2022ರ ಗೆದ್ದ ಬಳಿಕ ದಿವಿತಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ಮಿಸ್ ಯುನಿವರ್ಸ್‌ನ ಅಧಿಕೃತ ಪೇಜ್‌ನಲ್ಲಿ ಆಕೆಯ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದೊಂದು ತರ ಕ್ರೇಜಿ ಎನಿಸುತ್ತಿದೆ. ನಾನು ಕೊನೆಗೂ ಕಿರೀಟವನ್ನು ಪಡೆದೆ. ಇದನ್ನು ನಂಬಲಾಗುತ್ತಿಲ್ಲ. ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಈ ಸಮಾರಂಭದಲ್ಲಿ ಅನೇಕ ಮಾಜಿ ಬ್ಯೂಟಿ ಕ್ವೀನ್‌ಗಳು, ಹಲವು ಸೌಂದರ್ಯ ಸ್ಪರ್ಧೆಯ ವಿಜಯಶಾಲಿಗಳು, ಭಾಗವಹಿಸಿದ್ದರು, 2000ನೇ ಇಸವಿಯ ಮಿಸ್ ಯುನಿವರ್ಸ್ ಲಾರಾ ದತ್, 1964ರ ಮಿಸ್ ಇಂಡಿಯಾ ಮೆಹರ್ ಕ್ಯಾಸ್ಟಲಿನೋ, 1980ರ ಮಿಸ್ ಇಂಡಿಯಾ ಸಂಗೀತಾ ಬಿಜಲಾನಿ, 2004 ಮಿಸ್ ಇಂಡಿಯಾ ಯುನಿವರ್ಸ್ ತನುಶ್ರೀ ದತ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.