ವಿಷ್ಣುವರ್ಧನ್‌ಗೆ ಆದ ಅನ್ಯಾಯಕ್ಕೆ ಕಣ್ಣೀರಿಟ್ಟ ನಿರ್ಮಾಪಕ ಕೆ. ಮಂಜು ಹೇಳಿದ್ದೇನು?

Published : Aug 19, 2025, 02:15 PM IST
Dr Vishnuvardhan K Manju

ಸಾರಾಂಶ

ಈ ಪವಿತ್ರ ಜಾಗ ಪಡೆಯಲು ನಾವು ಕಾನೂನು ಹೊರಟ ಮಾಡಿಯೇ ಮಾಡ್ತೇವೆ. 10 ಗುಂಟೆ ಜಾಗ ಬಿಟ್ಟು ಕೊಡಲೇಬೇಕು. ಸೆಪ್ಟೆಂಬರ್ 18ನೇ ತಾರೀಕು ವಿಷ್ಣುವರ್ಧನ್ ಹುಟ್ಟು ಹಬ್ಬ ಮಾಡೋಕೆ ಕೋರ್ಟ್ ಅನುಮತಿ ಪಡೆಯುತ್ತೆವೆ..' ಎಂದಿದ್ದಾರೆ ಕನ್ನಡದ ಖ್ಯಾತ ನಿರ್ಮಾಪಕ ಕೆ ಮಂಜು. 

ಸ್ಯಾಂಡಲ್‌ವುಡ್ ನಿರ್ಮಾಪಕ ಕೆ ಮಂಜು (K Manju) ಅವರು ನಟ ವಿಷ್ಣುವರ್ಧನ್ (Vishnuvardhan) ಬಗ್ಗೆ, ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನ್ನಾಡಿದ್ದಾರೆ. ನಿರ್ಮಾಪಕ ಕೆ ಮಂಜು ಅವರ ಹೇಳಿಕೆ ಹೀಗಿದೆ.. 'ನಮಗೆ ಅನ್ಯಾಯ ಆಗಿದೆ. ವಿಷ್ಣುವರ್ಧನ್ ಅಂತ್ಯ ಕ್ರಿಯೆ ಆದ ಜಾಗ ಪವಿತ್ರವಾದ ಜಾಗವದು. ಆ ಜಾಗವನ್ನ ಕೊಡಲೇಬೇಕು ಅಂತ ಬಾಲಣ್ಣ ಅವರ ಮೊಮ್ಮಗ ಕಾರ್ತಿಕ್ ಗೆ ಮನವಿ ಮಾಡಿದ್ದೇನೆ. ಕಾರ್ತಿಕ್ ಒಂದು ವಾರ ಸಮಯ ತಗೊಂಡಿದ್ದಾರೆ.

ಈ ವಿಷಯದಲ್ಲಿ ಅಂಬರೀಶ್ ಅವರು ಕೊರಗಿ ಕೊರಗಿ ನೋವಲ್ಲಿ ಇದ್ರು. ಸರ್ಕಾರ ಬಾಲಣ್ಣ ಅವರಿಗೆ ಕೊಟ್ಟ 20 ಎಕರೆ ಜಾಗ ಅಭಿಮಾನ್ ಸ್ಟುಡಿಯೋ. ಅಲ್ಲೇ ಅಂಥ್ಯಕ್ರಿಯೆ ಮಾಡಿ ಅಂತ ದೇವೇಗೌಡ್ರು ಹೇಳಿದ್ರು. ಆಗ ಕುಮಾರ್ ಸ್ವಾಮಿ ಅವರೇ ಮುಂದೆ ನಿಂತು ನಟ ಹಾಗೂ ವಿಷ್ಣುವರ್ಧನ್ ಸ್ನೇಹಿತ ಅಂಬರೀಷ್ ಅವರು ಅಭಿಮಾನ್ ಸ್ಟೂಡಿಯೋದಲ್ಲಿ ಅಂತ್ಯಕ್ರಿಯೆ ಮಾಡೋಕೆ ವ್ಯವಸ್ಥೆ ಮಾಡಿದ್ರು.

ನಾವು ಕಾರ್ತಿಕ್ ಅವರಿಗೆ ಕೈ ಮುಗಿದು ಮನವಿ ಮಾಡ್ತಿದ್ದೀವಿ, ನಮಗೆ ಅಲ್ಲಿ 10 ಗುಂಟೆ ಕೊಡಿ.. ಹಾಗಂತಲೇ ನಾನು ಮನವಿ ಮಾಡಿದ್ದೀನಿ. ಯಾಕೆ ಅಂದ್ರೆ, ಅಂತ್ಯಕ್ರಿಯೆ ಆಗಿದ್ದ ಜಾಗವೇ ನಮಗೆ ಪವಿತ್ರ ಜಾಗ. ವಿಷ್ಣುವರ್ಧನ್ ಅವರ ಈ ಜಾಗವನ್ನ ಪಡೆದುಕೊಳ್ಳಲು ಅಂಬರೀಶ್ ಅಣ್ಣ ಪ್ರಯತ್ನ ಇತ್ತು. ಅದಕ್ಕೆ ಸರ್ಕಾರ ಕೂಡ ಸ್ಪಂದಿಸಿದೆ. 10 ಗುಂಟೆ ಜಾಗ ಕೊಡಿ ಸಾಕು. ಘೋರಿ ಮೇಲೆ ಕಟ್ಟಿದ ಸಾಮ್ರಾಜ್ಯ ಉಳಿದಿಲ್ಲ ಅಲ್ವೇ.

ನಮ್ಮ ಸಂಸ್ಕೃತಿ ಸಮಾಧಿ ಮಾಡಿದ್ದೀರಿ. ಕಾನೂನಲ್ಲೂ ನ್ಯಾಯ ಸಿಗಲ್ವಾ? ಚಿತ್ರರಂಗಕ್ಕಾಗಿ ಸರ್ಕಾರ ಕೊಟ್ಟ ಜಾಗ ಬಾಲಣ್ಣ ಕುಟುಂಬದ ಸ್ವಯಾರ್ಜಿತ ಹೇಗ್ ಆಗುತ್ತೆ ? ಆಗಲೇ ಪ್ಯಾನ್ ಇಂಡಿಯಾ ಸ್ಟಾರ್ ಅವರು. ಆಗ ಸರ್ಕಾರವೇ ಮುಂದೆ ನಿಂತು ಅಂತ್ಯಕ್ರಿಯೆ ಮಾಡಿತ್ತು. ಈ ಸ್ಥಳದ ಬಗ್ಗೆ ಈ ಗೊಂದಲ ಯಾಕೆ ? ಇದರ ಹಿಂದೆ ಇರೋದ್ಯಾರು ? ಭೂಗಳ್ಳರು ಯಾರು ?

ಅಂತ್ಯಕ್ರಿಯೆ ಜಾಗವೇ ಮಹಾನ್ ಜಾಗ, ನಮಗೆ 10 ಗುಂಟೆ ಕೊಡಿ ಸಾಕು ಅಂತ, ಈ ವಿಷಯದಲ್ಲಿ ತುಂಬಾ ನೊಂದಿದ್ದೀವಿ.

ನಮ್ಮ ಹಿಂದೆ ಶಕ್ತಿ ಇದೆ, ಎಲ್ಲರೂ ಕೈ ಜೋಡಿಸುತ್ತಾರೆ. ಅಂಬರೀಶ್ ಅವರಂತೂ ಕೊರಗಿ ಕೊರಗಿ ಹೋಗಿದ್ರು. ಕಾರ್ತಿಕ್ ಅವರು 5 ದಿನ‌ ಟೈಮ್ ತಗೊಂಡಿದ್ದಾರೆ. ವಿಷ್ಣುಸೇನೆ ಹಾಗೂ ಅಭಿಮಾನಿಗಳು ತುಂಬಾ ನೊಂದು ಹೋಗಿದ್ದಾರೆ. ಪ್ರೀತಿಯಿಂದ ಕೊಡ್ತೀನಿ ಅಂದಿದ್ದಾರೆ ಕಾರ್ತಿಕ್.. ಏನೇ ಆಗಿದ್ರೂ ಎಲ್ಲರ ಪರವಾಗಿ ಕ್ಷಮೆ ಕೇಳ್ತೀನಿ ಅಂತ ಪರಿ ಪರಿಯಾಗಿ ಮನವಿ ಮಾಡ್ಕೊಂಡಿದ್ದೀನಿ.

ಈ ಪವಿತ್ರ ಜಾಗ ಪಡೆಯಲು ನಾವು ಕಾನೂನು ಹೊರಟ ಮಾಡಿಯೇ ಮಾಡ್ತೇವೆ. 10 ಗುಂಟೆ ಜಾಗ ಬಿಟ್ಟು ಕೊಡಲೇಬೇಕು.

ಸೆಪ್ಟೆಂಬರ್ 18ನೇ ತಾರೀಕು ವಿಷ್ಣುವರ್ಧನ್ ಹುಟ್ಟು ಹಬ್ಬ ಮಾಡೋಕೆ ಕೋರ್ಟ್ ಅನುಮತಿ ಪಡೆಯುತ್ತೆವೆ..' ಎಂದಿದ್ದಾರೆ ಕನ್ನಡದ ಖ್ಯಾತ ನಿರ್ಮಾಪಕ ಕೆ ಮಂಜು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಾರಾ ದಂಪತಿ ಡಿವೋರ್ಸ್: 2026ರ ಮೊದಲ ವಿಚ್ಛೇದನಕ್ಕೆ ನಾಂದಿ ಹಾಡಿದ ಪ್ರೀತಿಸಿ ಮದುವೆಯಾದ ಕಿರುತೆರೆ ಜೋಡಿ!
'ಗಿಲ್ಲಿ ಕಪ್ ಗೆಲ್ಲಬಹುದು' ಎಂದ ಮಾಳು.. ಮಾಳು ಈಗ 'ಯೂ ಟರ್ನ್‌' ಹೊಡೆದಿರೋದು ಯಾಕೆ ಗೊತ್ತಾ?