ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಚಿತ್ರವೊಂದು ಬರುತ್ತಿದ್ದು, ಈಗಷ್ಟೆ ಅದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದ ಹೆಸರು ‘ಮುಂದಿನ ನಿಲ್ದಾಣ’.
ಪೋಸ್ಟರ್‌ನಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ನಾಯಕ ‘ಚೂರಿಕಟ್ಟೆ’ ಪ್ರವೀಣ್ ತೇಜ್. ನಾಯಕಿ ರಾಧಿಕಾ ಚೇತನ್. ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಕೋಸ್ಟಲ್ ಬ್ರಿಜ್ ಪ್ರೊಡಕ್ಷನ್‌ನಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.
ಪಿಆರ್‌ಕೆ ಸಂಸ್ಥೆ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ. ಕತೆಗೆ ತಕ್ಕಂತೆ ಕರಣ್ ಆಚಾರ್ಯ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಕರಣ್ ಆಚಾರ್ಯ ಈ ಹಿಂದೆ ಸಾಕಷ್ಟು ಸದ್ದು ಮಾಡಿದ ಹನುಮಾನ್ ಪೋಸ್ಟರ್ ವಿನ್ಯಾಸ ಮಾಡಿದ ಪ್ರತಿಭೆ.
ಕೆಜಿಎಫ್ ವಿಲನ್‌ಗೂ ಇದೆ ಪಂಜಾಬ್‌ನಲ್ಲಿ ಅಭಿಮಾನಿಗಳ ಸಂಘ!
‘ಇದು ದೇಶದ ಯುವಕರ ನ್ಯಾಷನಲ್ ಪೋಸ್ಟರ್‌ನಂತೆ ಕಾಣುತ್ತಿದ್ದು, ಈ ಪೋಸ್ಟರ್ ಮೂಲಕ ನಮ್ಮ ಚಿತ್ರಕ್ಕೆ ನ್ಯಾಷನಲ್ ಲುಕ್ ಬಂದಿದೆ.ಮೂರು ಮುಖ್ಯ ಪಾತ್ರಗಳ ಮುಖ ತೋರಿಸದೆ, ಇವರ ಪಾತ್ರ ಹೇಗಿರಬಹುದು ಎಂಬ ಕುತೂಹಲ ಹೆಚ್ಚಿಸುವಂತೆ ಪೋಸ್ಟರ್ ಇದೆ. ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಅನನ್ಯ ಕಶ್ಯಪ್ ಚಿತ್ರದ ಮತ್ತೊಬ್ಬ ನಾಯಕಿ’ ಎಂಬುದು ನಿರ್ದೇಶಕ ವಿನಯ್ ಭಾರದ್ವಾಜ್ ಮಾತು.