ಮಿಸ್ಸಿಂಗ್‌ ಬಾಯ್‌ ಬೆನ್ನು ತಟ್ಟಿದ ಕಿಚ್ಚ, ನಾನಿ!

By Web Desk  |  First Published Mar 15, 2019, 9:40 AM IST

ಹಿಂದೆ ಹುಬ್ಬಳ್ಳಿಯಲ್ಲಿ ಒಂದು ಘಟನೆ ನಡೆದಿತ್ತು. ತಂದೆ-ತಾಯಿಯಿಂದ ದೂರವಾಗಿದ್ದ ಮಗ ಮತ್ತೆ ಹೆತ್ತವರನ್ನು ಹುಡುಕಿಕೊಂಡು ಬರುತ್ತಾನೆ. ಬಾಲ್ಯದ ಮಾಸಲು ನೆನಪುಗಳನ್ನು ಬಿಟ್ಟರೆ ಆ ಮಗನಿಗೆ ತಂದೆ-ತಾಯಿಯ ಬಗ್ಗೆ ಬೇರೆ ಏನೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿರಬೇಕಾದರೆ ಅಂದಿನ ಪೊಲೀಸ್‌ ಅಧಿಕಾರಿ ಲವಕುಮಾರ್‌ ಅವರು ಪ್ರಕರಣವನ್ನು ಸುಖಾಂತ್ಯ ಕಾಣಿಸಿರುತ್ತಾರೆ. ಇದು ಪಕ್ಕಾ ನೈಜ ಘಟನೆ. ಇದಕ್ಕೆ ಒಂದಷ್ಟುಸಿನಿಮೀಯ ಸ್ವರೂಪ ನೀಡಿ, ಎಮೊಷನಲ್‌ಅನ್ನು ಮಿಕ್ಸ್‌ ಮಾಡಿ ‘ಮಿಸ್ಸಿಂಗ್‌ ಬಾಯ್‌’ ತಾಯಿ ಮತ್ತು ತಾಯ್ನಾಡಿಗೆ ಚಿತ್ರ ಮಾಡಿದ್ದಾರೆ ನಿರ್ದೇಶಕ ರಘುರಾಮ್‌.


ಪ್ರವೀನ್‌ ಕೊಲ್ಲ ಅವರ ಕೊಲ್ಲ ಪ್ರೊಡಕ್ಷನ್‌ ಹೌಸ್‌ನಿಂದ ನಿರ್ಮಾಣವಾಗಿರುವ ಚಿತ್ರ ಮೊನ್ನೆಯಷ್ಟೇ ಟ್ರೇಲರ್‌ ಲಾಂಚ್‌ ಮಾಡಿಕೊಂಡಿತು. ಇದನ್ನು ಮಾಡಿದ್ದು ಕಿಚ್ಚ ಸುದೀಪ್‌. ಈ ವೇಳೆ ಮಾತನಾಡಿದ ಸುದೀಪ್‌ ‘ಒಳ್ಳೆಯ ಕಂಟೆಂಟ್‌ ಇರುವ ಚಿತ್ರಗಳ ಮುಂದೆ ಇಂದು ದೊಡ್ಡ ದೊಡ್ಡ ಸ್ಟಾರ್‌ಗಳೇ ಅಲ್ಲಾಡುತ್ತಿದ್ದಾರೆ. ಇದೂ ಒಳ್ಳೆಯ ಕತೆ ಹೊಂದಿದೆ. ಇಡೀ ಚಿತ್ರತಂಡ ಸಾಕಷ್ಟುಶ್ರಮ ಹಾಕಿದೆ. ನಾನು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದ ದಿನದಲ್ಲಿ ರಘುರಾಮ್‌ ನನಗೆ ಸಹಾಯಕ್ಕೆ ನಿಂತಿದ್ದರು. ಅವರು ಇಂದು ಸಿನಿಮಾ ಮಾಡಿದ್ದಾರೆ. ಟ್ರೇಲರ್‌ ನೋಡಿದರೇ ಸಾಕಷ್ಟುನಿರೀಕ್ಷೆ ಹುಟ್ಟಿಸುತ್ತಿದೆ’ ಎಂದು ಹೇಳಿ ಟ್ವಿಟ್ಟರ್‌ನಲ್ಲಿಯೂ ಟ್ರೇಲರ್‌ ಲಿಂಕ್‌ ಶೇರ್‌ ಮಾಡುವ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ತೆಲುಗು ನಟ ನಾನಿ ಅವರೂ ಸೋಷಲ್‌ ಮೀಡಿಯಾದಲ್ಲಿ ಚಿತ್ರಕ್ಕೆ ಶುಭ ಕೋರಿರುವುದು ಮತ್ತೊಂದು ವಿಶೇಷ.

’ಮಿಸ್ಸಿಂಗ್ ಬಾಯ್’ ಟ್ರೇಲರ್ ರಿಲೀಸ್

Tap to resize

Latest Videos

ಇಲ್ಲಿ ಮಿಸ್ಸಿಂಗ್‌ ಬಾಯ್‌ ರಘುನಂದನ್‌. ‘ಫಸ್ಟ್‌ ರಾರ‍ಯಂಕ್‌ ರಾಜು’, ‘ರಾಜು ಕನ್ನಡ ಮೀಡಿಯಂ’ ಈ ರೀತಿಯ ಚಿತ್ರ ಮಾಡಿ ಹೆಸರಾಗಿದ್ದ ರಘುನಂದನ್‌ ಇಲ್ಲಿ ಡಿಫರೆಂಟ್‌ ಆದ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ಶ್ರೀಮಂತಿಕೆಯ ಒಟ್ಟಿಗೆ ಬದುಕುತ್ತಿರುವ ನಾಯಕನಿಗೆ ನಿತ್ಯವೂ ಒಂದು ಕನಸು ಕಾಡುತ್ತಿರುತ್ತದೆ. ಅದು ತನ್ನ ಹೆತ್ತ ತಂದೆ ತಾಯಿಗಳು. ಅವರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅವರನ್ನು ಸೇರಬೇಕು ಎನ್ನುವ ಹಂಬಲವಿದೆ. ಈ ಹಂಬಲದ ಜರ್ನಿಯೇ ಕತೆ. ಇಲ್ಲಿ ರವಿಶಂಕರ್‌, ರಂಗಾಯಣ ರಘು ಮೊದಲಾದವರೆಲ್ಲಾ ಜೊತೆಯಾಗುತ್ತಾರೆ.

ನಾಯಕಿ ಅರ್ಚನ ಜಯಕೃಷ್ಣ ಮಾತಿಗೆ ನಿಂತವರು ‘ಒಳ್ಳೆಯ ಸ್ಟೋರಿಯಿರುವ ಚಿತ್ರವಿದು, ಎಲ್ಲರೂ ನೋಡಲೇಬೇಕು. ಇಂತಹ ಕತೆಗಳು ನನ್ನ ಪ್ರಾರಂಭದ ಜರ್ನಿಯಲ್ಲಿ ಸಿಕ್ಕಿರುವುದು ಖುಷಿಯ ವಿಚಾರ’ ಎಂದು ಹೇಳಿಕೊಂಡರು.

ಮಾಚ್‌ರ್‍ 22ಕ್ಕೆ ಬಿಡುಗಡೆಗೆ ಸಿದ್ಧವಾಗಿರುವು ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಘುರಾಮ್‌ ‘ಇದು ನನ್ನ ಕನಸಿನ ಚಿತ್ರ. 30 ದಿನದಲ್ಲಿ ಶೂಟಿಂಗ್‌ ಮುಗಿಸಬೇಕು ಎಂದು ಪ್ಲ್ಯಾನ್‌ ಮಾಡಿಕೊಂಡಿದ್ದೆವು. ಅದರಂತೆಯೇ ಆಗಿದೆ. ಇನ್ನು ಗ್ರಾಫಿಕ್‌ ವರ್ಕ್, ಕೆಲವು ಎಡಿಟಿಂಗ್‌ ವರ್ಕ್ ಇದೆ. ಅದನ್ನು ಮುಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಅಂದುಕೊಂಡ ಹಾಗೆ ನಾವು ಗುರಿ ಮುಟ್ಟುತ್ತೇವೆ ಎನ್ನುವ ನಂಬಿಕೆ ನನಗೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಟ್ರೇಲರ್‌ಗೆ ಹಿನ್ನೆಲೆ ದನಿ ನೀಡಿರುವುದು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌.

ಕ್ಯೂಆರ್‌ ಕೋಡ್‌ ಬಿಡುಗಡೆ

ಸ್ಯಾಂಡಲ್‌ವುಡ್‌ ಮಟ್ಟಿಗೆ ಮೊದಲ ಪ್ರಯೋಗವಾದ ಕ್ಯೂಆರ್‌ ಕೋಡ್‌ ಅನ್ನು ‘ಮಿಸ್ಸಿಂಗ್‌ ಬಾಯ್‌’ ಚಿತ್ರದ ಮೂಲಕ ಪರಿಚಯಿಸಲಾಗಿದೆ. ಇದರ ವಿಶೇಷತೆ ಎಂದರೆ, ಕ್ಯೂಆರ್‌ ಕೋಡ್‌ಅನ್ನು ಮೊಬೈಲ್‌ನಲ್ಲಿ ಸ್ಕಾ್ಯನ್‌ ಮಾಡಿಕೊಂಡರೆ ಸಾಕು ಅದು ಸೀದಾ ಚಿತ್ರದ ಪೇಜ್‌ಗೆ ಕರೆದೊಯ್ಯುತ್ತದೆ. ಅಲ್ಲಿ ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳೂ ಲಭ್ಯ. ಇದರೊಂದಿಗೆ ವಿದೇಶದಲ್ಲಿ ಇರುವವರು ಸುಲಭವಾಗಿ ಇದೇ ಕ್ಯೂಆರ್‌ ಕೋಡ್‌ ಮೂಲಕ ಪೂರ್ಣ ಚಿತ್ರವನ್ನೂ ವೀಕ್ಷಿಸಬಹುದಾದ ಸೌಲಭ್ಯವನ್ನು ನೀಡುವ ಯೋಚನೆಯಲ್ಲಿದೆ ಚಿತ್ರತಂಡ. ಅಂದಹಾಗೆ ಈ ಕ್ಯೂಆರ್‌ ಕೋಡ್‌ ತಂತ್ರಜ್ಞಾನದ ಹಿಂದೆ ಇರುವುದು ಬಿಗ್‌ ಬಾಸ್‌ ಮುರುಳಿ ಮತ್ತು ಅವರ ತಂಡ. ಇದೇ ವೇಳೆ ಪ್ರಿಯಾ ಆನಂದ್‌, ಜೈ ಜಗದೀಶ್‌, ಮೇಘನಾ ಗಾಂವ್ಕರ್‌, ಸೂರಪ್ಪ ಬಾಬು, ಜಾಕ್‌ ಮಂಜು ಸೇರಿದಂತೆ ಹಲವಾರು ಮಂದಿ ಟ್ರೇಲರ್‌ ಲಾಂಚ್‌ ವೇಳೆ ಇದ್ದು ಶುಭ ಕೋರಿದರು.

click me!