
ಕೆಂಡಪ್ರದಿ
ಇಡೀ ಚಿತ್ರ ಸಾಗುವುದು ಬೆಂಗಳೂರು ಮತ್ತು ಹೊನ್ನಾವರದ ಸುಂದರ ಪರಿಸರದಲ್ಲಿ. ಜನಪ್ರಿಯ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಾ ಅಪಾರ ಮಹಿಳಾ ಮಣಿಗಳ ಅಭಿಮಾನ ಗಳಿಸಿದ ನಾಯಕ ಆರ್ಯನ್‌ಗೆ ಶಂಕರ್‌ನಾಗ್ ಎಂದರೆ ಪ್ರಾಣ. ಬೆಂಗಳೂರಿನಲ್ಲಿ ಇದ್ದ ಇಂತಹ ಅಭಿಮಾನಿಗೆ ಹೊನ್ನಾವರದಲ್ಲೊಬ್ಬಳು ಅಭಿಮಾನಿ. ಅವಳೇ ನಾಯಕಿ ಅದ್ವಿತಿ ಶೆಟ್ಟಿ. ಇವರಿಬ್ಬರ ಅಭಿಮಾನಕ್ಕೆ ಸೋಷಲ್ ಮೀಡಿಯಾ ಕೊಂಡಿ. ಇದೇ ಕೊಂಡಿ ಅವರಿಬ್ಬರನ್ನೂ ಹತ್ತಿರ ಮಾಡಿ, ನಾಯಕಿಯ ಮನೆಗೇ ಧಾರಾವಾಹಿಯ ಶೂಟಿಂಗ್ ಯೂನಿಟ್ ಬರುತ್ತದೆ. ಇದೇ ಅಭಿಮಾನ ಮಾಗಿ ಪ್ರೀತಿಯಾಗಲು ವೇದಿಕೆ.
ಚಿತ್ರ ವಿಮರ್ಶೆ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ತಾರಾಗಣ: ಆರ್ಯನ್, ಅದ್ವಿತಿ ಶೆಟ್ಟಿ, ಸಮೀಕ್ಷ, ಪ್ರಸನ್ನ ಶೆಟ್ಟಿ, ಜಯಕಾಶಿ, ಮಂಡ್ಯ ರಮೇಶ್ ಮೊದಲಾದವರು
ನಿರ್ದೇಶನ: ದರ್ಶಿತ್ ಭಟ್
ನಿರ್ಮಾಣ: ಈಶ್ವರ್, ಶಶಿಕಿರಣ್
ಹೀಗೆ ದಿನ ದಿನವೂ ಬಲಿಯುತ್ತಾ ಬಂದ ಪ್ರೀತಿ ಕಡೆಗೆ ಬಲಿಯಾಗುತ್ತದೆ. ಇದು ಯಾಕೆ ಎಂದು ಉತ್ತರ ಹುಡುಕ ಹೊರಟರೆ ನಿರ್ದೇಶಕ ದರ್ಶಿತ್ ಅವರ ಸೂಕ್ಷ್ಮ ನೋಟ ಗೋಚರವಾಗುವುದು. ಅದೇನು ಎಂದು ತಿಳಿಯಲು ಆರಾಮವಾಗಿ ಚಿತ್ರ ನೋಡಬಹುದು.
ಚಿತ್ರದಲ್ಲಿ ಅಭಿಮಾನವಿದೆ, ಪ್ರೀತಿ ಇದೆ, ಹಾಸ್ಯವಿದೆ, ತಿರುವುಗಳಿವೆ, ಪ್ರೇಕ್ಷಕರನ್ನು ತನ್ನೊಂದಿಗೇ ಕರೆದುಕೊಂಡು ಹೋಗುವ ಶಕ್ತಿಯೂ ಇದೆ. ಇದೆಲ್ಲದ್ದಕ್ಕೂ ಇಡೀ ತಂಡದ ಶ್ರಮವಿದೆ. ನಾಯಕ ಆರ್ಯನ್ ಒಳ್ಳೆಯ ಭರವಸೆ ಹುಟ್ಟಿಸಿದ್ದಾರೆ. ಅದ್ವಿತಿ ಶೆಟ್ಟಿಚೆಂದದ ನಟನೆ. ಪ್ರಸನ್ನ ಶೆಟ್ಟಿ, ಜಯಕಾಶಿ, ಮಂಡ್ಯ ರಮೇಶ್ ಸೇರಿ ಎಲ್ಲರೂ ಅಚ್ಚುಕಟ್ಟಾಗಿ ಪಾತ್ರ ನಿಭಾಯಿಸಿದ್ದಾರೆ. ವಿಕ್ರಮ್ ಹಾಗೂ ಚಂದನ ದಂಪತಿಗಳು ಒಳ್ಳೆಯ ಸಂಗೀತ ನೀಡಿದ್ದರೆ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವೂ ಇಂಟರೆಸ್ಟಿಂಗ್. ಕರಾವಳಿಯ ತೀರವನ್ನು ಪವನ್ ಕುಮಾರ್ ಚೆಂದಕ್ಕೆ ಸೆರೆ ಹಿಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.